ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂಗವಾಗಿ ವಿಜಯನಗರ ಜಿಲ್ಲಾ ಪೊಲೀಸ್ ಹಾಗೂ ಹೊಸಪೇಟೆ ಉಪವಿಭಾಗದ ವತಿಯಿಂದ ಗುರುವಾರ ಹೊಸಪೇಟೆಯಲ್ಲಿ ಜಾಗೃತಿ ಸೈಕಲ್ ಜಾಥಾ ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ನಗರ ವೈದ್ಯರದ ಡಿ.ಆರ್ ಸಾಲಿಯಾನ್,ಮತ್ತು ವೇದಿಕೆ ಮೇಲಿನ ಗಣ್ಯರು ಸಸಿಗೆ ನಿರೂಹಾಕುವುದರ ಮೂಲಕ ಉದ್ಘಾಟಿಸಿದರು ತದನಂತರ ಮಾತನಾಡಿದ ಡಿ.ಆರ್ ಸಾಲಿಯಾನ್ ರವರು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಈ ಮಾಡಾಕ ವ್ಯಾಸನಕ್ಕೆ ಬಲಿಯಾಗುತ್ತಿದ್ದಾರೆ ನಾನು ಹಲವಾರು ವ್ಯಾಸನಿಗಳಿಗೆ ಚಿಕಿತ್ಸೆ ಮಾಡುವುದರ ಮೂಲಕ ಪುನಃ ವ್ಯಾಸನಕ್ಕೆ ಹೋಗದಂತೆ ತಿಳಿಸುತ್ತೇನೆ ಎಂದರು.
ಈ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆ ಹಲವಾರು ಶಾಲೆಗಳ ಮಕ್ಕಳು ಸೈಕಲ್ ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸು ಗೊಳಿಸಿದರು.
ಹೊಸಪೇಟೆಯ ಡಾ. ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಸ್. ಜಾಹ್ನವಿ ಸೈಕಲ್ ಜಾಥಾಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಪಿ ಎಸ್. ಜಾಹ್ನವಿ ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಹದಗೆಡುವುದಷ್ಟೇ ಅಲ್ಲ, ಕುಟುಂಬವೂ ಸಂಕಷ್ಟಕ್ಕೆ ಸಿಲುಕುತ್ತದೆ. ಪ್ರತಿಯೊಬ್ಬರೂ ಮಾದಕ ವಸ್ತುಗಳಿಂದ ದೂರವಿರಬೇಕು. ಎಲ್ಲಿಯಾದರೂ ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟ ನಡೆಯುತ್ತಿರುವುದು ಗಮನಕ್ಕೆ ಬಂದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು" ಎಂದು ಮನವಿ ಮಾಡಿದರು.
ಮಾದಕ ವ್ಯಸನದಿಂದ ಅನೇಕ ಯುವಕರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಆದ್ದರಿಂದ ಯುವಜನರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಮಾದಕ ವಸ್ತುಗಳ ವಿರೋಧಿ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅವರು ತಿಳಿಸಿದರು.
ಡಾ. ಪುನೀತ್ ರಾಜ್‌ಕುಮಾರ್ ವೃತ್ತದಿಂದ ಆರಂಭವಾದ ಸೈಕಲ್ ಜಾಥಾ , ಮಾಡ್ರನ್ ಸರ್ಕಲ್,ಪುಣ್ಯ ಮೂರ್ತಿ ಸರ್ಕಲ್, ತ್ರೀ ಶಾಪ್ ಸರ್ಕಲ್, ಮೇನ್ ಮಾಸ್ಕ್, ರಾಮ ಸರ್ಕಲ್, ವಾಲ್ಮೀಕಿ ಸರ್ಕಲ್, ಮಾರ್ಕಂಡೇಶ್ವರ ದೇವಸ್ಥಾನ ಕ್ರಾಸ್, ಹಂಡ್ರೆಡ್ ಬೆಡ್ ಹಾಸ್ಪಿಟಲ್ ರೋಡ್,ಜಿಲ್ಲಾ ಗ್ರಂಥಾಲಯ,ಇಂಡೋರ್ ಸ್ಟೇಡಿಯಂ.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿತು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಪೊಲೀಸ್ ಅಧಿಕಾರಿಗಳದ ಎಸ್.ಪಿ ಎಸ್.ಜಾಹ್ನವಿ. ಹೆಚ್ಚುವರಿ ಎಸ್.ಪಿ ಮಂಜುನಾಥ್. ಡಿ.ವೈ.ಎಸ್.ಪಿ.ಮುರುಳಿದರ್. ಪಿ.ಐ ಗುರುರಾಜ್. ಫಾಜುಲ್ಲಾ ಮತ್ತು ಆರ್.ಪಿ.ಐ ಗೋವಿಂದರಾಜ್ ಮತ್ತು ನಗರದ ವೈದ್ಯರದ ಡಿ.ಆರ್ ಸಾಲಿಯಾನ್. ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.



