Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಸಕರಾಗಿ ಡಿ.ಎನ್. ಜೀವರಾಜ್ ಪ್ರಮಾಣ ವಚನ ಸ್ವೀಕಾರ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಶೃಂಗೇರಿ:
ಸುದೀರ್ಘ ಕಾನೂನು ಹೋರಾಟ ಮತ್ತು ಮತ ಮರು ಎಣಿಕೆಯ ನಂತರ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಡಿ.ಎನ್. ಜೀವರಾಜ್ ಅವರು ಇಂದು ಮಧ್ಯಾಹ್ನ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಕ್ಷೇತ್ರದ ರಾಜಕೀಯ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಂತಾಗಿದ್ದು
, ಸತ್ಯ ಮತ್ತು ನ್ಯಾಯಕ್ಕೆ ಗೆಲುವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹರ್ಷ ವ್ಯಕ್ತಪಡಿಸಿದ್ದಾರೆ.​

ಕಳೆದ ಚುನಾವಣೆಯ ಫಲಿತಾಂಶದ ಕುರಿತು ನ್ಯಾಯಾಲಯದಲ್ಲಿ ನಡೆದ ಸುದೀರ್ಘ ವಿಚಾರಣೆಯ ನಂತರ, ಕೋರ್ಟ್ ಆದೇಶದಂತೆ ಶೃಂಗೇರಿ ಕ್ಷೇತ್ರದ ಮತಗಳ ಮರು ಎಣಿಕೆ ನಡೆದಿತ್ತು. ಮರು ಎಣಿಕೆಯ ಪ್ರಕ್ರಿಯೆಯಲ್ಲಿ ಡಿ.ಎನ್. ಜೀವರಾಜ್ ಅವರು ಹೆಚ್ಚಿನ ಮತಗಳನ್ನು ಪಡೆದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಅವರನ್ನು ವಿಜಯಿ ಎಂದು ಘೋಷಿಸಿತ್ತು.

​ಸಿ.ಟಿ. ರವಿ ಅಭಿನಂದನೆ:
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಿ.ಟಿ. ರವಿ ಅವರು
, "ವಿಳಂಬವಾದರೂ ಶೃಂಗೇರಿಯ ಜನತೆಯ ಮತಕ್ಕೆ ಇಂದು ನ್ಯಾಯ ಲಭಿಸಿದೆ. ನ್ಯಾಯಾಲಯದ ಆದೇಶದಂತೆ ಮರು ಎಣಿಕೆ ನಡೆದು ಜೀವರಾಜ್ ಅವರು ವಿಜಯಿಯಾಗಿದ್ದಾರೆ. ನಿರಂತರ ಹೋರಾಟ ನಡೆಸಿ ಇಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು," ಎಂದು ತಿಳಿಸಿದ್ದಾರೆ.

​ಈ ಬೆಳವಣಿಗೆಯಿಂದ ಶೃಂಗೇರಿ ಕ್ಷೇತ್ರದ ಮತದಾರರಲ್ಲಿ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದ್ದು, ಇಂದು ಮಧ್ಯಾಹ್ನ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದ ಮೇಲೆ ಎಲ್ಲರ ಗಮನ ನೆಟ್ಟಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾತಬಲ್ಲಪಲ್ಲಿ ನರಸಿಂಹಪ್ಪ ಜೆ. ರವರಿಗೆ ಪಿಎಚ್.ಡಿ ಪದವಿ ಪ್ರದಾನದುರ್ಗದ 'ಅಜ್ಜ' ಅಜರಾಮರ!ಪೊಲೀಸ್ ಮಹಾ ನಿರ್ದೇಶಕರಿಗೆ ಕೆಯುಡಬ್ಲೂಜೆ ದೂರು ಸಂಘದ ಹೆಸರಿನ ಲೆಟರ್ ಹೆಡ್ ದುರ್ಬಳಕೆ: ಕ್ರಮಕ್ಕೆ ಆಗ್ರಹಗ್ರಾಮೀಣ ಸಾಹಿತ್ಯದ ಕೊಂಡಿ, ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಇನ್ನಿಲ್ಲ​ಮೇಕೆದಾಟು ಯೋಜನೆ: ಮೈತ್ರಿ ರಾಜಕಾರಣಕ್ಕೆ ಕರ್ನಾಟಕದ ಹಿತಬಲಿ ನೀಡಿದ ಕಾಂಗ್ರೆಸ್‌; ಆರ್‌ ಅಶೋಕ್ ತೀವ್ರ ವಾಗ್ದಾಳಿ​ರಾಜ್ಯದಲ್ಲಿ ಇವಿ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ: ಸಚಿವ ಎಂ.ಬಿ. ಪಾಟೀಲ್ ಜೊತೆ ರಿವರ್ ಮೊಬಿಲಿಟಿ ಸಿಇಒ ಚರ್ಚೆಧಾರ್ಮಿಕ ಕ್ಷೇತ್ರ ತಿರುಮಲಕ್ಕೆ ಭೇಟಿ ನೀಡಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಡಿ ಕೆ ಶಿವಕುಮಾರ್ ರಾಜ್ಯದ ಹಿತಕ್ಕೆ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಕ್ಷಾತೀತ ಬೆಂಬಲ: ಡಿ.ಕೆ. ಶಿವಕುಮಾರ್ ಸಂತಸಹಣಬಲ, ತೋಳ್ಬಲದ ನಡುವೆಯೂ ಜೆಡಿಎಸ್‌ ರಕ್ಷಣೆ: ಕಾರ್ಯಕರ್ತರೇ ಪಕ್ಷದ ಜೀವಾಳ ಎಂದ ಹೆಚ್.ಡಿ. ಕುಮಾರಸ್ವಾಮಿಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ ಡಾ ಪ್ರಭಾ