Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಂಧಿತ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಬೆನ್ನಿಗೆ ನಿಂತ ಡಾ.ಸುಧಾಕರ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಜಿಲ್ಲೆಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ನಡೆದ ಚಪ್ಪಲಿ ಎಸೆತ ಪ್ರಯತ್ನದ ಘಟನೆ, ಇದೀಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ದೊಡ್ಡ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಶಾಸಕರ ಮೇಲಿನ ದಾಳಿ ಯತ್ನವನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ತೀವ್ರವಾಗಿ ಖಂಡಿಸಿದ್ದರೆ, ಇತ್ತ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಅವರು ಘಟನೆಗೆ ಶಾಸಕರ ಪ್ರಚೋದನಕಾರಿ ವರ್ತನೆಯೇ ಕಾರಣ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಬೆನ್ನಿಗೆ ನಿಂತಿದ್ದಾರೆ.

"ಕಾರ್ಯಕರ್ತರ ವಕೀಲರ ವೆಚ್ಚ ನಾನೇ ಭರಿಸುವೆ":
ಘಟನೆಯ ಬಳಿಕ ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ತುರ್ತು ಸಭೆ ನಡೆಸಿ ಧೈರ್ಯ ತುಂಬಿದ ಸಂಸದ ಡಾ. ಕೆ. ಸುಧಾಕರ್, ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಕಾರ್ಯಕರ್ತರಿಗೆ ಬಹಿರಂಗ ಆಶ್ವಾಸನೆ ನೀಡಿದ್ದಾರೆ:

"ನಮ್ಮ ಅಮಾಯಕ ಕಾರ್ಯಕರ್ತರ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳ ಕಾನೂನು ಹೋರಾಟಕ್ಕೆ ಅಗತ್ಯವಿರುವ ವಕೀಲರ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ. ಬಿಜೆಪಿಜೆಡಿಎಸ್‌ನ ಪ್ರತಿಯೊಬ್ಬ ಕಾರ್ಯಕರ್ತನ ಪರವಾಗಿ ನಾನು ಸದಾ ದೃಢವಾಗಿ ನಿಲ್ಲುತ್ತೇನೆ" ಎಂದು ಘೋಷಿಸಿದ್ದಾರೆ.

ಡಾ. ಸುಧಾಕರ್ ಎತ್ತಿರುವ ಪ್ರಮುಖ ಪ್ರಶ್ನೆಗಳು ಮತ್ತು ಆರೋಪಗಳು:
ನಾಲಿಗೆ ಮೇಲಿರಲಿ ಸಂಯಮ: "ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬ ಗಾದೆ ನೆನಪಿಸಿರುವ ಸುಧಾಕರ್, "ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಂಯಮ ಕಾಯ್ದುಕೊಳ್ಳಬೇಕು. ಹಿರಿಯರಾದ ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಶಾಸಕರು ತುಚ್ಚವಾಗಿ ಮಾತನಾಡುವ ಅಗತ್ಯವೇನಿತ್ತು? ಬಾಯಿ ಸರಿ ಇದ್ದರೆ ಊರು ಸರಿ ಇರುತ್ತದೆ," ಎಂದು ತಿವಿದಿದ್ದಾರೆ.

ಅಧಿಕಾರದ ಮದ, ಪ್ರಚೋದನೆ: ಜನಪ್ರತಿನಿಧಿಯಾದವರು ಅಧಿಕಾರದ ಮದದಲ್ಲಿ ವೇದಿಕೆಗಳ ಮೇಲೆ ತೊಡೆ ತಟ್ಟುವುದು, ಮೀಸೆ ತಿರುವುವುದು, ಭುಜ ತಟ್ಟಿಕೊಳ್ಳುವಂತಹ ಪ್ರಚೋದನಕಾರಿ ವರ್ತನೆ ತೋರುವುದು ಶೋಭೆ ತರುವುದಿಲ್ಲ. ಶಾಸಕರ ಇಂತಹ ನಡವಳಿಕೆಯಿಂದ ಇಡೀ ಚಿಕ್ಕಬಳ್ಳಾಪುರದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪೊಲೀಸರ ಒನ್‌ಸೈಡ್ ಗೇಮ್? ಅಹಿತಕರ ಘಟನೆಗೆ ಕಾರಣರಾದ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಕೇವಲ ವಿರೋಧ ಪಕ್ಷದ ಅಮಾಯಕ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದು ಪೊಲೀಸ್ ಇಲಾಖೆಯ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುವಂತಿದೆ ಎಂದು ಸುಧಾಕರ್ ಆರೋಪಿಸಿದ್ದಾರೆ.

ತೀವ್ರ ಹೋರಾಟದ ಎಚ್ಚರಿಕೆ:
ಸಮಾಜವನ್ನು ಒಗ್ಗೂಡಿಸಬೇಕಾದ ಸ್ಥಾನದಲ್ಲಿ ನಿಂತು ಜಾತಿ-ಜಾತಿಗಳ ನಡುವೆ ವೈಮನಸ್ಸು ಮೂಡಿಸಲು ಯತ್ನಿಸುತ್ತಿರುವುದು ದುರದೃಷ್ಟಕರ ಎಂದಿರುವ ಸಂಸದರು, ಪೊಲೀಸ್ ಇಲಾಖೆ ಘಟನೆಯ ಮೂಲ ಕಾರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇಲ್ಲದಿದ್ದರೆ ನಮ್ಮ ಕಾರ್ಯಕರ್ತರ ನ್ಯಾಯಯುತ ಹಕ್ಕುಗಳ ರಕ್ಷಣೆಗಾಗಿ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಂಧ್ರ ಗಡಿಭಾಗದ ಹೊಸಕೆರೆ ಪಾಳ್ಯದಲ್ಲಿ ಹನಿ ನೀರಿಗೂ ಹಾಹಾಕಾರ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಾನುವಾರು, ಗ್ರಾಮಸ್ಥರು ಕಂಗಾಲು!ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣವಿದ್ಯಾರ್ಥಿ ಬಸ್‍ಪಾಸ್ ಶುಲ್ಕ ಮರು ಪಾವತಿ: ಅರ್ಜಿ ಆಹ್ವಾನಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಉಚಿತ ಹೃದಯ ತಪಾಸಣೆವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ಜುಲೈ 31 ಕೊನೆಯ ದಿನಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್ ಸರ್ಕಾರಆಕಾಶವಾಣಿ ಕೇಂದ್ರದ ಹಿರಿಯ ತಾಂತ್ರಿಕ ತಜ್ಞ ಎನ್.ಪಿ. ಶಿವಮೂರ್ತಿ ಅವರಿಗೆ ಬಿಳ್ಕೊಡುಗೆಬ್ಯಾಟರಿ ಸ್ಪಾರ್ಕ್ ನಿಂದ ಹೊತ್ತಿ ಉರಿದ ಟಾಟಾ ಸುಮೋಕೆಂಪೇಗೌಡ ಪುತ್ತಳಿ ನಿರ್ಮಾಣ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ- ಪ್ರೇಮ್ ಕುಮಾರ್