LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್‌ಐಆರ್ ಪ್ರಕ್ರಿಯೆಗೆ ಚಾಲನೆ: ಮನೆ ಮನೆಗೆ ಎನ್ಯೂಮರೇಶನ್ ಫಾರ್ಮ್ ವಿತರಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತೀಯ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯೋಜನೆಯಡಿ ಮತದಾರರ ಪಟ್ಟಿಯ ನವೀಕರಣ ಕಾರ್ಯಕ್ಕೆ ತೂಬಗೆರೆಯಲ್ಲಿ ಮಂಗಳವಾರ ಚಾಲನೆ ದೊರೆಯಿತು. ಇದರ ಅಂಗವಾಗಿ ಮನೆ
?ಮನೆಗೆ ತೆರಳಿ ಎನ್ಯೂಮರೇಶನ್ ಫಾರ್ಮ್ ವಿತರಿಸುವ ಕಾರ್ಯ ಆರಂಭಿಸಲಾಯಿತು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ತೂಬಗೆರೆ ಗ್ರಾಮದ ವಾರ್ಡ್ ಸಂಖ್ಯೆ?೩೦ ರಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ರಾಧಮ್ಮ ಅವರು ಬೆಳಗ್ಗಿನಿಂದಲೇ ಮನೆಗಳಿಗೆ ಭೇಟಿ ನೀಡಿ ಮತದಾರರಿಗೆ ಎನುಮರೇಶನ್ ಫಾರ್ಮ್‌ಗಳನ್ನು ವಿತರಿಸಿದರು.

ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನಿಖರಗೊಳಿಸುವ ಉದ್ದೇಶದಿಂದ ವಿಶೇಷ ಪರಿಷ್ಕರಣೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಹಂತದಲ್ಲಿ ಸಾರ್ವಜನಿಕರು ಯಾವುದೇ ಗುರುತಿನ ಚೀಟಿ ಅಥವಾ ಇತರೆ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಬಿಎಲ್‌ಒಗಳು ಕೇವಲ ಫಾರ್ಮ್‌ಗಳನ್ನು ವಿತರಿಸಲಿದ್ದು, ನಂತರ ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.

ಕ್ರಾಸ್ ಪರಿಶೀಲನೆ ಹಾಗೂ ದಾಖಲಾತಿ ಅನುಕೂಲಕ್ಕಾಗಿ ಪ್ರತಿ ಮತದಾರರಿಗೂ ಎರಡು ಪ್ರತಿಗಳ ಎನುಮರೇಶನ್ ಫಾರ್ಮ್ ನೀಡಲಾಗುತ್ತಿದ್ದು, ಒಂದು ಪ್ರತಿಯನ್ನು ಭರ್ತಿ ಮಾಡಿ ಬಿಎಲ್‌ಒಗೆ ಸಲ್ಲಿಸಬೇಕು ಹಾಗೂ ಮತ್ತೊಂದು ಪ್ರತಿಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಆಗಸ್ಟ್ 16, 17ರ ಎರಡು ದಿನಗಳ ರಾಜ್ಯ ಪ್ರವಾಸಮುಂಗಾರು ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಿಕೆ: ಲೋಕಸಭೆಯಲ್ಲಿ ಶೇ 19, ರಾಜ್ಯಸಭೆಯಲ್ಲಿ ಶೇ 39 ಉತ್ಪಾದಕತೆ ದಾಖಲುಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ: ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ, ಜನಜೀವನ ಸಹಜಶಾಸನಸಭೆ ಕಾಂಗ್ರೆಸ್‌ಅಭ್ಯರ್ಥಿಗಳ ಸ್ಪರ್ಧೆ: ಜಿ.ಎಸ್. ಪಾಟೀಲ್, ಸಲೀಂ ಅಹ್ಮದ್ ನಾಮಪತ್ರ ಸಲ್ಲಿಕೆಗುಟ್ಕಾ, ಪಾನ್ ಮಸಾಲೆ ನಿಷೇಧ: ಅಡಕೆ ಬೆಳೆಗಾರರಿಗೆ, ಸಹಕಾರ ಸಂಘಗಳಿಗೆ ತೀವ್ರ ಆಘಾತಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಅಧಿವೇಶನ ಆರಂಭ: ಸಿದ್ದರಾಮಯ್ಯ ಸೇರಿ ಹಲವು ಶಾಸಕರು ಗೈರು, ಅಸಮಾಧಾನದ ಹೊಗೆ?ತಮಿಳುನಾಡಿನ ದೋಷಪೂರಿತ ಲೆಕ್ಕಾಚಾರಕ್ಕೆ ಕರ್ನಾಟಕ ಆಕ್ಷೇಪ, ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಕೆಬಿಸಿಯೂಟ ಯೋಜನೆಗೆ 'ಚೆನ್ನಮ್ಮ' ಹೆಸರಿಡಿ: ಅಗಲಿದ ಗಣ್ಯರಿಗೆ ಭಾವಪೂರ್ಣ ಸಂತಾಪಖರ್ಗೆ ರ‍್ಯಾಲಿ ನಡೆದ ಮೈದಾನ 'ಶುದ್ಧೀಕರಣ': ರಾಜಕೀಯ ಕಾಳಗ ತೀವ್ರಯುವತಿ ಸಿರಿಲಕ್ಷ್ಮಿ ಕಣ್ಮರೆ: ಪತ್ತಗೆ ಮನವಿ