LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಜಯೇಂದ್ರ ಪದಚ್ಯುತಿಗೆ ಡಿ.ವಿ.ಎಸ್ ಒತ್ತಾಯ? ಕೇಸರಿ ಪಾಳಯದಲ್ಲಿ ತಲ್ಲಣ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತದ ಬೆಂಕಿ ಮತ್ತೆ ಹೊಗೆಯಾಡಲು ಆರಂಭಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವಂತೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ದೆಹಲಿ ನಾಯಕರಿಗೆ ಒತ್ತಾಯಿಸಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್‌ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೇಸರಿ ಪಾಳಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ.

ಆಡಿಯೋದಲ್ಲಿ ಏನಿದೆ?:
ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಆಡಿಯೋ ಕ್ಲಿಪ್‌ನಲ್ಲಿ, ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ಕೇಂದ್ರದ ಪ್ರಭಾವಿ ನಾಯಕರೊಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಬೇಕು ಅಥವಾ ಕೆಳಗಿಳಿಸಬೇಕು ಎಂದು ಅವರು ಹೈಕಮಾಂಡ್ ಮಟ್ಟದ ನಾಯಕರಿಗೆ ತೀವ್ರ ಒತ್ತಡ ಹೇರಿರುವ ಅಂಶ ಈ ಆಡಿಯೋದಲ್ಲಿ ಕೇಳಿಬಂದಿದೆ ಎನ್ನಲಾಗಿದೆ.

ಹೊಗೆಯಾಡುತ್ತಿರುವ ನಾಯಕತ್ವ ಬದಲಾವಣೆ ಚರ್ಚೆ:
ಈ ವೈರಲ್ ಆಡಿಯೋದಿಂದಾಗಿ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಕಳೆದ ಕೆಲವು ಸಮಯದಿಂದ ತಣ್ಣಗಾಗಿದ್ದ ನಾಯಕತ್ವ ಬದಲಾವಣೆಯ ಆಂತರಿಕ ಬೇಗುದಿ ಈ ಘಟನೆಯಿಂದಾಗಿ ಮತ್ತೆ ಮುಂಚೂಣಿಗೆ ಬಂದಿದೆ.

ವಿಜಯೇಂದ್ರ ಅವರ ನಾಯಕತ್ವದ ವಿರುದ್ಧ ಅಸಮಾಧಾನ ಹೊಂದಿರುವ ಪಕ್ಷದೊಳಗಿನ ಒಂದು ಬಣ ಈಗ ಸಕ್ರಿಯವಾಗಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ಹೈಕಮಾಂಡ್ ಮಟ್ಟದಲ್ಲಿ ಎಂತಹ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಆಗಸ್ಟ್ 16, 17ರ ಎರಡು ದಿನಗಳ ರಾಜ್ಯ ಪ್ರವಾಸಮುಂಗಾರು ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಿಕೆ: ಲೋಕಸಭೆಯಲ್ಲಿ ಶೇ 19, ರಾಜ್ಯಸಭೆಯಲ್ಲಿ ಶೇ 39 ಉತ್ಪಾದಕತೆ ದಾಖಲುಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ: ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ, ಜನಜೀವನ ಸಹಜಶಾಸನಸಭೆ ಕಾಂಗ್ರೆಸ್‌ಅಭ್ಯರ್ಥಿಗಳ ಸ್ಪರ್ಧೆ: ಜಿ.ಎಸ್. ಪಾಟೀಲ್, ಸಲೀಂ ಅಹ್ಮದ್ ನಾಮಪತ್ರ ಸಲ್ಲಿಕೆಗುಟ್ಕಾ, ಪಾನ್ ಮಸಾಲೆ ನಿಷೇಧ: ಅಡಕೆ ಬೆಳೆಗಾರರಿಗೆ, ಸಹಕಾರ ಸಂಘಗಳಿಗೆ ತೀವ್ರ ಆಘಾತಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಅಧಿವೇಶನ ಆರಂಭ: ಸಿದ್ದರಾಮಯ್ಯ ಸೇರಿ ಹಲವು ಶಾಸಕರು ಗೈರು, ಅಸಮಾಧಾನದ ಹೊಗೆ?ತಮಿಳುನಾಡಿನ ದೋಷಪೂರಿತ ಲೆಕ್ಕಾಚಾರಕ್ಕೆ ಕರ್ನಾಟಕ ಆಕ್ಷೇಪ, ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಕೆಬಿಸಿಯೂಟ ಯೋಜನೆಗೆ 'ಚೆನ್ನಮ್ಮ' ಹೆಸರಿಡಿ: ಅಗಲಿದ ಗಣ್ಯರಿಗೆ ಭಾವಪೂರ್ಣ ಸಂತಾಪಖರ್ಗೆ ರ‍್ಯಾಲಿ ನಡೆದ ಮೈದಾನ 'ಶುದ್ಧೀಕರಣ': ರಾಜಕೀಯ ಕಾಳಗ ತೀವ್ರಯುವತಿ ಸಿರಿಲಕ್ಷ್ಮಿ ಕಣ್ಮರೆ: ಪತ್ತಗೆ ಮನವಿ