Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಪ್ರವಾಹ: ಇಬ್ಬರು ವಿದೇಶಿ ಪ್ರಜೆಗಳ ಸಾವು, ಇಬ್ಬರಿಗೆ ಗಾಯ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇಲ್ಲಿನ ಹಲಸೂರು ಕೆರೆ ಬಳಿಯ ಖಾಸಗಿ ಪಂಚತಾರಾ ಹೋಟೆಲ್ (ಕಾನ್ರಾಡ್) ಒಂದರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ದುರಂತದಲ್ಲಿ ಈಜುಕೊಳದಲ್ಲಿದ್ದ ಇಬ್ಬರು ವಿದೇಶಿ ಪ್ರಜೆಗಳು ಅಸ್ವಾಭಾವಿಕವಾಗಿ ಮೃತಪಟ್ಟಿದ್ದು
, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಈಜುಕೊಳದಲ್ಲಿ ವಿದ್ಯುತ್ ಹರಿದ ಪರಿಣಾಮ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಮೃತರ ವಿವರ: ಜೂರಾಜ್ ಹೋವರ್ತ್ (45): ಸ್ಲೋವಾಕಿಯಾ ಮೂಲದವರು (ಐಬಿಎಂ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್). ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ (57): ಜರ್ಮನ್ ಮೂಲದವರು.

ಘಟನೆಯ ವಿವರ: ಹೋಟೆಲ್‌ನ 3ನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ರಾತ್ರಿ 11:30ರ ಸುಮಾರಿಗೆ ಜೂರಾಜ್ ಹಾಗೂ ಅಲೆಕ್ಸಾಂಡರ್ ಈಜುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ವೇಳೆ ಅವರನ್ನು ರಕ್ಷಿಸಲು ಮುಂದಾದ ಲೈಫ್‌ಗಾರ್ಡ್ ರಾಹುಲ್ ತ್ರಿಪಾಠಿ ಹಾಗೂ ಅಮೆರಿಕ ಮೂಲದ ಮತ್ತೊಬ್ಬ ಅತಿಥಿ ಮ್ಯಾಥ್ಯೂ ಡಿಸಾಂಟಿಸ್ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ತನಿಖೆ ಮತ್ತು ಕಾನೂನು ಕ್ರಮ: ಮೃತ ಅಲೆಕ್ಸಾಂಡರ್ ಅವರ ಪತ್ನಿ ನೀಡಿದ ದೂರಿನನ್ವಯ ಹಲಸೂರು ಪೊಲೀಸ್ ಠಾಣೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 106ರ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಾನಂದ ತಗಡೂರು ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮೂಲಸೌಕರ್ಯಕ್ಕೆ ಆಗ್ರಹ: ಜಿಲ್ಲಾಧಿಕಾರಿಗಳಿಗೆ ಮನವಿಹಿರಿಯೂರಿನಲ್ಲಿ ಅತ್ಯಾಧುನಿಕ ‘ನಾರಾಯಣ ಸ್ಕ್ಯಾನ್ಸ್ & ಡಯಾಗ್ನೋಸ್ಟಿಕ್ಸ್’: ಹೈಟೆಕ್ ವೈದ್ಯಕೀಯ ಸೌಲಭ್ಯ ಈಗ ನಿಮ್ಮ ಮನೆಯಂಗಳದಲ್ಲೇ!ಹೆತ್ತ ಕರುಳಿನ ಮಮತೆಯೊಂದಿಗೆ ಪುಟ್ಟ ಕಂದಮ್ಮಗಳ ಆರೋಗ್ಯ ರಕ್ಷಣೆಗೆ ಡಾ. ಸುಪ್ರಿಯಾ ಸಜ್ಜು ಹಿರಿಯೂರಿನಲ್ಲಿ ಇಂದು 'ನಾರಾಯಣ ಚಿಲ್ಡ್ರನ್ಸ್ ಕ್ಲಿನಿಕ್' ಶುಭಾರಂಭ:‘ಮತಗಳ್ಳತನ’ ಚರ್ಚೆಗೆ ಸಂಸತ್ ವಿಶೇಷ ಅಧಿವೇಶನಕ್ಕೆ ಬಿಜೆಪಿ ಸಿದ್ಧ: ಅಮಿತ್ ಶಾಕರ್ವಾ ಚೌತ್ ದಿನವೇ ಪತಿಯಿಂದ ಪತ್ನಿಯ ಕೃತ್ಯ ರಟ್ಟು; ರಸ್ತೆಯಲ್ಲೇ ಕುಟುಂಬಗಳ ನಡುರಸ್ತೆ ಜಟಾಪಟಿ!ಬೆಂಗಳೂರಿನಲ್ಲಿ ಮತ್ತೊಂದು ಬಾಂಬ್ ಭೀತಿ: ಅನುಮಾನಾಸ್ಪದ ವಸ್ತು ಪತ್ತೆ! ಹಾಲಿನ ದರ ಏರಿಕೆ ಬೆನ್ನಲ್ಲೇ 14 ರೂ.ಮೊಸರು ದರ ಏರಿಕೆ: ನ.1ರಿಂದ ಹೊಸ ಬೆಲೆ ಜಾರಿಇಸ್ರೋ ಸಾಧನೆ: NVS-03 ಉಪಗ್ರಹ ಯಶಸ್ವಿ ಉಡಾವಣೆ – ಬಲಗೊಂಡ ‘ನ್ಯಾವಿಕ್’ ವ್ಯವಸ್ಥೆಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಕೈಮೀರುತ್ತಿದೆ, ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು: ಬಿಎಸ್ ವೈ ಬಾಂಬ್!