Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
International News

ಕಾಂಗ್ರೆಸ್‌ನಿಂದ ಬ್ಯಾಂಕ್‌ಗಳ ದುರ್ಬಳಕೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕೆ

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ತಮ್ಮ "ಖಾಸಗಿ ಜಾಗೀರನ್ನಾಗಿ" ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಐಡಿಬಿಐ ಬ್ಯಾಂಕ್‌ನ ಖಾಸಗೀಕರಣದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ಟೀಕೆಗೆ 'ಎಕ್ಸ್' ಮೂಲಕ ತಿರುಗೇಟು ನೀಡಿದ ಸಚಿವೆ, ಕಾಂಗ್ರೆಸ್ ಅವಧಿಯ ರಾಜಕೀಯ ಹಸ್ತಕ್ಷೇಪಗಳನ್ನು ಪಟ್ಟಿ ಮಾಡಿದ್ದಾರೆ.

ಇತಿಹಾಸದ ದುರ್ಬಳಕೆ: 1976 ರಲ್ಲಿ ಸಂಜಯ್ ಗಾಂಧಿ ಸಂಬಂಧಿತ ಕಂಪನಿಗೆ ನಿಯಮ ಸಡಿಲಿಸಿ ಸಾಲ ನೀಡಲು ನಿರಾಕರಿಸಿದ ಕಾರಣಕ್ಕೆ ಎಸ್‌ಬಿಐ ಅಧ್ಯಕ್ಷ ಆರ್.ಕೆ. ತಲ್ವಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು.

ಫೋನ್ ಕಾಲ್ ಸಾಲಗಳು: ಯುಪಿಎ ಆಡಳಿತದಲ್ಲಿ ವಿಡಿಯೋಕಾನ್, ಕಿಂಗ್‌ಫಿಷರ್, ಎಬಿಜಿ ಶಿಪ್‌ಯಾರ್ಡ್‌ನಂತಹ ಸಂಸ್ಥೆಗಳಿಗೆ ಕೇವಲ ಫೋನ್ ಕರೆಗಳ ಮೂಲಕ ಒತ್ತಡ ಹೇರಿ ಬೇಕಾಬಿಟ್ಟಿ ಸಾಲ ನೀಡಲಾಗಿತ್ತು. ಈ ಸಾಲಗಳು ನಷ್ಟದ ಖಾತೆಗಳಾಗಿ ಮಾರ್ಪಟ್ಟು ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿದವು.

 ಸಾಲ ಮೇಳಗಳ ರಾಜಕೀಯ: 1980ರ ದಶಕದಲ್ಲಿ ಬಿ. ಜನಾರ್ದನ ಪೂಜಾರಿ ಅವರ ಅವಧಿಯಲ್ಲೂ ರಾಜಕೀಯ ಲಾಭಕ್ಕಾಗಿ ಸಾಲ ಹಂಚಲು ಬ್ಯಾಂಕ್‌ಗಳ ಮೇಲೆ ಒತ್ತಡ ಹೇರಲಾಗಿತ್ತು.

ಮೋದಿ ಸರ್ಕಾರದಿಂದ ಬ್ಯಾಂಕ್ ಪುನರುಜ್ಜೀವನ:
ಬ್ಯಾಂಕ್‌ಗೆ 25,000 ಕೋಟಿ ರೂ.ಗಳಿಗೂ ಹೆಚ್ಚು ಮರು ಬಂಡವಾಳೀಕರಣ ಹಾಗೂ ವೃತ್ತಿಪರ ನಿರ್ವಹಣೆಯ ಮೂಲಕ ಮೋದಿ ಸರ್ಕಾರವು ಐಡಿಬಿಐ ಬ್ಯಾಂಕ್ ಅನ್ನು ಪುನರುಜ್ಜೀವನಗೊಳಿಸಿದೆ. ಪ್ರಸ್ತುತ ಕೈಗೊಂಡಿರುವ ಹೂಡಿಕೆ ಹಿಂತೆಗೆತ ಪ್ರಕ್ರಿಯೆಯು ಎಲ್ಲಾ ನಿಯಮಾನುಸಾರವೇ ನಡೆಯುತ್ತಿದೆ ಎಂದು ಸಚಿವೆ ಸಮರ್ಥಿಸಿಕೊಂಡಿದ್ದಾರೆ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೊಡ್ಡ ತಿಮ್ಮನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಸಾಮಾಜಿಕ ಅನಿಷ್ಟ ತಡೆಗಟ್ಟಲು ಕಾನೂನಿನ ಅರಿವು ಅತ್ಯಗತ್ಯ:ದಾಸರಿ ಕ್ರಾಂತಿ ಕಿರಣ್ಹಿರಿಯ ರಂಗಭೂಮಿ ಕಲಾವಿದ ಜಿ.ಡಿ. ತಿಮ್ಮಯ್ಯ ಅವರ ಸಾಧನೆ ಮತ್ತು ಪರಿಚಯಹಿರಿಯ ಪತ್ರಕರ್ತ ಚಿತ್ರದುರ್ಗದ  ಉಮಾಪತಿ ಅವರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಗೌರವಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುಖಭಂಗ: ಬೆಂಬಲವಿದ್ದರೂ ಎಡವಿದ್ದೆಲ್ಲಿ?ರಾಹುಲ್ ಗಾಂಧಿ ನೇತೃತ್ವದ ಒಕ್ಕೂಟದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನ: ಶೋಭಾ ಕರಂದ್ಲಾಜೆಬದರಿನಾಥದಿಂದ ಹೊರಟ ಹೆಲಿಕಾಪ್ಟರ್ ಜೋಶಿಮಠ ಬಳಿ ಪತನ: ಆರು ಮಂದಿ ಪ್ರಯಾಣಿಕರ ಸಾವುನ್ಯಾಯಾಂಗದ ವಿರುದ್ಧ ಹೇಳಿಕೆ: CJP ನಾಯಕ ಸೌರವ್ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ಯುವಕನಿಗೆ ಚಾಕು ತೋರಿಸಿ 20 ಲಕ್ಷ ಮೌಲ್ಯದ ಚಿನ್ನ ದೋಚಿದ ಡೇಟಿಂಗ್ ಬಂದಿದ್ದ ಯುವತಿಮುಖ್ಯ ಚುನಾವಣಾ ಆಯುಕ್ತರ ವಿರುದ್ಧ 'ಸಾರ್ವಜನಿಕ ದೋಷಾರೋಪಣೆ' ಮುಂದೂಡಿದ 'ಇಂಡಿಯಾ' ಒಕ್ಕೂಟ