ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೊಕಿನ ತೂಬಗೆರೆ ಹೋಬಳಿಯ ನಂದಿಗುದ ಗ್ರಾಮದಲ್ಲಿ ಸುಮಾರು 100 ಕೋಟಿ ಬೆಲೆಬಾಳುವ ಗೂಳ್ಯ ನಂದಿಗುಂದ ಗ್ರಾಮದ ಸರ್ವೆ ನಂ 28 ಹೊಸ ಸರ್ವೆ ನಂ 181 ರಲ್ಲಿ 4-02 ಎ/ಗುಂಟೆ, 182 ರಲ್ಲಿ 4-06 ಎ/ಗುಂಟೆ ಮತ್ತು ಸರ್ವೆ ನಂ. 30 ರಲ್ಲಿ 4 ಎಕರೆ 30 ಗುಂಟೆ ಸರ್ಕಾರಿ ಜಮೀನನ್ನು ಕೆಲವು ಪ್ರಭಾವಿಗಳು ಭೂ ಕಬಳಿಕೆ ಮಾಡಿದ್ದು, ಈ ಕಬಳಿಕೆಯನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಭೂ ಕಬಳಿಕೆದಾರರ ಪರವಾಗಿ ಹೋರಾಟ ಮಾಡುವುದು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಕೆಲ ಸಂಘಟನೆಗಳ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈವರೆಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಅಲ್ಲದೆ ಎಫ್ ಐ ಆರ್ ಕೂಡ ಮಾಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅಗ್ರಹಿಸಿದರು.
ಸುಮಾರು 60-70 ವರ್ಷಗಳಿಂದ ಸ್ವಾಧೀನದಲ್ಲಿರುವವರು ಜಮೀನಿನಲ್ಲಿ ಬೆಳೆಯನ್ನು ಬೆಳೆದುಕೊಂಡು ಜೀವನ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಿ ಭೂಗಳ್ಳರು.ಕಬಳಿಸಲು ಹುನ್ನಾರ ನಡೆಸುತ್ತಿರುವ ಜಮೀನನ್ನು ಕೂಡಲೇ ಸರ್ಕಾರ ವಶಕ್ಕೆ ಪಡೆದುಕೊಳ್ಳಬೇಕು ಇದರಲ್ಲಿ ಸ್ವಾಧೀನದಲ್ಲಿರುವ ರೈತರಿಗೆ ಅವಕಾಶ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.
ನಮ್ಮ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ಮತ್ತೆ ಇವರ ಕುಟುಂಬದವರಿಗೆ ಹಾಗೂ ಫಾರಂ ನಂ. 50, 53, 57 ಅರ್ಜಿ ಹಾಕಿಕೊಂಡಿರುವ ಅರ್ಜಿದಾರರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು.
ಜಮೀನುಗಳ ಕಬಳಿಕೆಗೆ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು, 2 ಸಂಘಟನೆಗಳನ್ನು ಹುಟ್ಟುಹಾಕಿ, ಸರ್ಕಾರಕ್ಕೆ ನೂರಾರು ಕೋಟಿ ನಷ್ಟ ಉಂಟುಮಾಡಿರುವ ಪ್ರಭಾವಿಗಳು ಕಬಳಿಕೆ ಮಾಡಿರುವ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಲು ಪತ್ರಿಕಾಗೋಷ್ಠಿ ಮೂಲಕ ಆಗ್ರಹ ಮಾಡುತ್ತೇವೆ ಎಂದರು.
ಈ ವೇಳೆ ಈ ವೇಳೆ ಅಂಬೇಡ್ಕರ್ ಸೇನೆ ದಲಿತ ಸಂಘರ್ಷ ಸಮಿತಿಯ (ಕೃಷ್ಣಪ್ಪ ಬಣ )ರಾಜ್ಯಾಧ್ಯಕ್ಷ ಕೊಡಿಗಲ್ ರಮೇಶ್, ಆಲ್ ಇಂಡಿಯಾ ಬಿ ಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್, ಬೆಂಗಳೂರು ಗ್ರಾಮಂತರ ಜಿಲ್ಲಾಧ್ಯಕ್ಷ ಪಿ ಮಹಾದೇವ, ಬಸವರಾಜು, ತಾ! ಅಧ್ಯಕ್ಷ ನಂಜೇಶ್, ಪದಾಧಿಕಾರಿಗಳು ಹಾಜರಿದ್ದರು.



