ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ಸ್ತಬ್ದ ಚಿತ್ರ ಮೆರವಣಿಗೆಯಲ್ಲಿ, “ನಿಮ್ಮ ಅಂಗಾಂಗ ದಾನ ಮಹಾದಾನ, ಮೊತ್ತೊಬ್ಬರಿಗೆ ಜೀವದಾನ” ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆ ಭಾಗವಹಿಸಿದ ಸ್ತಬ್ದ ಚಿತ್ರ ಅಂಗಾಗ ದಾನದ ಅರಿವು ಮೂಡಿಸುವುದರೊಂದಿಗೆ ಪ್ರಥಮ ಬಹುಮಾನಕ್ಕೆ ಭಾಜನವಾಯಿತು.
ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಮುರುಘರಾಜೇಂದ್ರ ಕ್ರೀಡಾಂಗಣದವರೆಗೆ ಸಾಗಿದ ಸ್ತಬ್ದ ಚಿತ್ರ ಪ್ರದರ್ಶನ ದಾರಿಯುದ್ದಕ್ಕೂ ಸಾರ್ವಜನಿಕರ ಹಾಗೂ ಎಲ್ಲ ಕನ್ನಡ ಅಭಿಮಾನಿಗಳ ಕಣ್ಮನ ಸೆಳೆಯಿತು. ಅಂಗಾಂಗ ದಾನದ ಪ್ರಾಮುಖ್ಯತೆಯನ್ನು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯಶಸ್ವಿಯಾಯಿತು.
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ.ವೈ.ಯುವರಾಜ್ ಹಾಗೂ ವೈದ್ಯಕೀಯ ಅಧೀಕ್ಷಕಿ ಡಾ. ಮೇಘಾ ಜಿ.ಹೆಚ್. ಅವರ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತವಾಯಿತು. ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಎಸ್.ರಮ್ಯಾ ಸೇರಿದಂತೆ ಗಣ್ಯರು ಪ್ರಥಮ ಬಹುಮಾನವನ್ನು ನೀಡಿ ಗೌರವಿಸಿದರು.
ಸ್ತಬ್ದ ಚಿತ್ರ ಮೆರವಣಿಗೆ ಆರಂಭಕ್ಕೂ ಮುನ್ನ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆ ಜರುಗಿದ ರಾಜ್ಯೋತ್ಸವ ದಿನಾಚರಣೆಯಲ್ಲಿ ನಿರ್ದೇಶಕ ಡಾ.ಬಿ.ವೈ.ಯುವರಾಜ್ ರಾಜರಾಜೇಶ್ವರಿ ಭಾವಚಿತ್ರಕ್ಕೆ ಪುಷ್ಟಾರ್ಚನೆ ಅರ್ಪಿಸಿ, ವೈದ್ಯಕೀಯ ಕಾರ್ಯಚಟುವಟಿಕೆಯಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಕಾಡೆಮಿಕ್ ರಿಜಿಸ್ಟಾರ್ ಡಾ.ವೇಣು, ಈ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ.ರವೀಂದ್ರ, ನಿವಾಸಿ ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ, ನೋಡಲ್ ಅಧಿಕಾರಿ, ಡಾ. ಪರಮಾನಂದ ರೆಡ್ಡಿ, ಡಾ.ಗಣೇಶ್, ಡಾ.ಪ್ರಜ್ವಲ್, ಹಾಗೂ ಶುಶ್ರೂಷಾಧಿಕಾರಿ ಆರ್.ತಿಪ್ಪೇಸ್ವಾಮಿ, ಪಿ.ಪಾಲಾಕ್ಷ, ಸುಷ್ಮಿತ ಸಿ.ಟಿ.. ಲಲಿತಾಎನ್. ಉಷಾ ಟಿ.ಪಿ. ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಶುಶ್ರೂಷಾ ವಿದ್ಯಾರ್ಥಿಗಳು ಒಳಗೊಂಡAತೆ ಸಿಬ್ಬಂದಿಗಳು ಹೊರಸಂಪನ್ಮೂಲ ಸಿಬ್ಬಂದಿ ಇದ್ದರು.




