LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೂಳ್ಯ ಸರ್ಕಾರಿ ಗೋಮಾಳ ಜಮೀನಿನ ವಿಚಾರ, ಹೋರಾಟಗಾರರ ಮೇಲೆ ಸುಳ್ಳು ಆರೋಪ-ಮುನಿರಾಜು

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗೂಳ್ಯ ನಂದಗುಂದ ಗ್ರಾಮದ ಸರ್ವೆ ನಂಬರ್ 28 ಹಾಗೂ ಸರ್ವೆ ನಂಬರ್ 30 ಸರ್ಕಾರಿ ಗೋಮಾಳ ಜಮೀನಿನ ವಿಚಾರದಲ್ಲಿ ಹೋರಾಟ ಮಾಡಿದ ಪ್ರತಿಭಟನಾಕಾರರ ಮೇಲೆ ಕೆಲವರು ಸುಳ್ಳು ಆರೋಪ ಮಾಡಿದ್ದಾರೆ. ಎಲ್ಲಾ ಆರೋಪಗಳಿಗೆ  ನ್ಯಾಯಾಲಯ ಮೂಲಕ ಉತ್ತರಿಸಲಿದ್ದೇವೆ ಎಂದು ಪ್ರಬುದ್ಧ ಕರ್ನಾಟಕ ಭೀಮಸೇನೆಯ ರಾಜ್ಯ ಅಧ್ಯಕ್ಷ ಯು.ಮುನಿರಾಜು ತಿಳಿಸಿದರು.
 

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಜಮೀನಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗೆ ಸುಮಾರು ಎಂಟು ತಿಂಗಳ ಹಿಂದೆ ದೂರು ದಾಖಲು ಮಾಡಿದ್ದೇವೆ.ಆದರೆ ಇಲ್ಲಿಯವರೆಗೂ ಕ್ರಮಕೈಗೊಳ್ಳುವುದಿರಲಿ ಕನಿಷ್ಠ ಪಕ್ಷ ಮಾಹಿತಿ ಸಹ ನೀಡಿಲ್ಲ.ಅಲ್ಲದೆ ಇತ್ತೀಚಿನ ದಿನಗಳಲ್ಲೂ ಸಹ ಸ್ಥಳೀಯ ಅಧಿಕಾರಿಗಳಿಗೆ ದೂರು ದಾಖಲು ಮಾಡಿದ್ದು ,ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಸ್ಥಳೀಯ ತಹಸಿಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ನಾವು ಎಷ್ಟೇ ದೂರು ದಾಖಲಿಸಿದರೂ ಕ್ರಮ ಕೈಗೊಳ್ಳಲಿಲ್ಲ. ಇಲ್ಲಿಯವರೆಗೂ ತಪ್ಪಿತಸ್ಥರ ವಿರುದ್ಧ  ಎಫ್ ಐ ಆರ್ ದಾಖಲಾಗಿಲ್ಲ.ಈ ಕುರಿತು ಎಫ್ ಐ ಆರ್ ದಾಖಲು ಮಾಡುವಂತೆ, ಕ್ರಮ ಕೈಗೊಳ್ಳುವಂತೆ ಬೃಹತ್ ಪ್ರತಿಭಟನೆ ಧರಣಿ ಮಾಡಿದ ಪ್ರಬುದ್ಧ ಕರ್ನಾಟಕ ಭೀಮಸೇನೆ ಹಾಗೂ ಕರ್ನಾಟಕ ದಲಿತ ಸಂರಕ್ಷಣಾ ಸೇನೆ ಹೋರಾಟಗಾರರ ಮೇಲೆ ಕೆಲ ವ್ಯಕ್ತಿಗಳು ಸುಳ್ಳು ಆರೋಪಗಳನ್ನ ಮಾಡಿ ಅವಮಾನ ಹಾಗೂ ತೇಜೋವದೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಅವರಿಗೆ ಮುಂದಿನ ದಿನಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಾಲಯದ ಮುಖಾಂತರ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಸರ್ವೆ ನಂಬರ್ 28ರಲ್ಲಿ 8 ಎಕರೆ 14 ಗುಂಟೆ ಸರ್ವೆ ನಂಬರ್ 30ರಲ್ಲಿ 4 ಎಕರೆ 30ಗುಂಟೆ ಸರ್ಕಾರಿ ಗೋಮಾಳ ಜಮೀನನ್ನ ಅಕ್ರಮವಾಗಿ ಅತಿಕ್ರಮಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಲಪಟಾಯಿಸಿ ಉದ್ದೇಶ ಪೂರಕವಾಗಿ ಪ್ರತಿಭಟನಾಕಾರರ ಮೇಲೆ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೊಟ್ಟಿರುವ ಅಧಿಕಾರಿಗಳ ಮೇಲೆಯೂ ಸಹ ಎಫ್ಐಆರ್ ದಾಖಲಿಸಬೇಕು ಇಲ್ಲದಿದ್ದರೆ ಸ್ಥಳದಲ್ಲಿಯೇ ಅನಿರ್ದಿಷ್ಟಾವಧಿ ಧರಣಿಯನ್ನ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕರ್ನಾಟಕ ದಲಿತ ಸಂರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ರಾವಣ್ ಮಾತನಾಡಿ ಸರ್ಕಾರಿ ಭೂ ಕಬಳಿಕೆ ಮಾಡಲು ಹೊರಟಿರುವ ಪ್ರಭಾವಿಗಳ ವಿರುದ್ಧ ಧ್ವನಿಯಾಗಿ ನ್ಯಾಯ ಕೇಳಿದ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಹೋರಾಟ ಎಂದರೆ ನ್ಯಾಯದ ಪರ ನಿಲ್ಲುವುದು. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ.

ಮುಂಬರುವ ದಿನಗಳಲ್ಲಿ ಗೂಳ್ಯ ನಂದಗುಂದ ಗ್ರಾಮದ ಸರ್ವೆ ನಂಬರ್ 28 ಹಾಗೂ ಸರ್ವೆ ನಂಬರ್ 30 ಸರ್ಕಾರಿ ಗೋಮಾಳ ಜಮೀನಲ್ಲೆ ಹೋರಾಟ ನಡೆಸಲಾಗುವುದು. ಸುಕ್ತ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳಿಗೆ ಕೊಟ್ಟು ಸರ್ಕಾರಿ ಭೂಮಿ ವಶಕ್ಕೆ ಪಡೆಯುವಂತೆ ಆಗ್ರಹಿಸಲಾಗುವುದು.

ನಾವು ಯಾರ ಬಳಿಯೂ ಯಾವುದೇ ಬೇಡಿಕೆ ಇಟ್ಟಿಲ್ಲ, ಯಾರಿಗೂ ಬೆದರಿಕೆ ಕೂಡ ಹಾಕಿಲ್ಲ ಹಾಗೇನಾದರೂ ಇದ್ದಲ್ಲಿ ಸಾಬೀತುಪಡಿಸಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸೂಕ್ತವಲ್ಲ. ನಮ್ಮ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳಿಗೆ ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೂಲಕ ಉತ್ತರಿಸಲಾಗುವುದು ಎಂದರು.

ಈ ವೇಳೆ ಪ್ರಬುದ್ಧ ಕರ್ನಾಟಕ ಭೀಮಸೇನೆ ಸಂಘಟನೆಯ ಮುಖಂಡರಾದ ವಸಂತ್ ಕುಮಾರ್, ರಘುಕುಮಾರ್, ಮಂಜುನಾಥ್, ಮತ್ತು ಭರತ್ ಕುಮಾರ್ ಸೇರಿದಂತೆ ಹಲವರು ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು, ಪರಿಷತ್‌ನಲ್ಲಿ, ಬಳ್ಳಾರಿಯಲ್ಲಿ ಅಹೋರಾತ್ರಿ ಧರಣಿ!ಪ್ರಿಯಕರನ ಜೊತೆ ಸೇರಿ ಪುತ್ರ, ಪತಿಯನ್ನೇ ಕೊಂದ ಪತ್ನಿ ಬಂಧನ!"ನೀವು ವೇದಾಂತಿ ಆಗಿ, ಸಿಎಂ ಸ್ಥಾನ ಸೆಟ್ ಆಗ್ತಿಲ್ಲ": ಡಿಕೆಶಿಗೆ ಸುನೀಲ್ ಕುಮಾರ್ ಸಲಹೆ, ಸದನದಲ್ಲಿ ನಗೆಯ ಅಲೆ!ಕಾಂಗ್ರೆಸ್‌ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್KPSC ನೇಮಕಾತಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ, ಕಚೇರಿ ಸೇರಿ 21 ಕಡೆ ಇಡಿ ದಾಳಿ‘ನಮ್ಮ ರಾಜ್ಯ ರಕ್ಷಣೆ ನಮಗೆ ಗೊತ್ತು, ಹಸ್ತಕ್ಷೇಪ ಬೇಡ’: ತಮಿಳುನಾಡು ನಾಯಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆವಿದ್ಯಾರ್ಥಿ ಪ್ರತಿಭಟನೆ ಮೇಲಿನ ಪೊಲೀಸ್ ದೌರ್ಜನ್ಯ: ಉನ್ನತಾಧಿಕಾರ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ಧಾರ‘ವಂದೇ ಮಾತರಂ’ ವಿವಾದ: ಸೋನಿಯಾ-ರಾಹುಲ್ ವಿರುದ್ಧ ದೂರು, ಖರ್ಗೆ ವಾಗ್ದಾಳಿKPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಆದೇಶ ವಜಾ: ಮರುನೇಮಕಕ್ಕೆ ಹೈಕೋರ್ಟ್ ನಿರ್ದೇಶನ ‘ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ’: ಕಾಂಗ್ರೆಸ್‌ನಾಯಕರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು!