Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಸಕ ಧೀರಜ್ ಮುನಿರಾಜ್ ರವರಿಂದ ಗ್ರಾಮ ಪರಿವರ್ತನಾ ಯಾತ್ರೆ

Advertisement
Advertisement

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲೂಕಿನ ಪ್ರತಿ ಗ್ರಾಮದ ಪ್ರತಿ ಮನೆಗಳಿಗೆ ತೆರಳುವ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಈ ನಿಟ್ಟಿನಲ್ಲಿ ಗ್ರಾಮ ಪರಿವರ್ತನೆ ಯಾತ್ರೆ ಆರಂಭಿಸಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ಪರಿವರ್ತನೆ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದವರು ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿವೆ . ಹಾಗಾಗಿ ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ ಕಾರ್ಯಕ್ರಮದ ಮುಖಾಂತರ ತಾಲೂಕಿನ ಜನತೆಯ ಸಮಸ್ಯೆ ಆಲಿಸಿ , ಪರಿಹಾರ ನೀಡಲು ಪ್ರಯತ್ನ ಮಾಡಲಾಗುವುದು ಸ್ಥಳದಲ್ಲೇ ಅಧಿಕಾರಿಗಳಿಗೆ ಸಮಸ್ಯೆಗಳಿಗೆ ಪರಿಹಾರ ಇರುವಂತೆ ಸೂಚಿಸಲಾಗುವುದು ಅಧಿಕಾರಿಗಳು ನಿರ್ಲಕ್ಷ ತೋರಿದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಹಿಂದೂ ಪ್ರಥಮವಾಗಿ ನನ್ನ ಭೂತ್ ವಡ್ರಹಳ್ಳಿ ಗ್ರಾಮದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಪ್ರತಿ ವಾರಕ್ಕೆ ಗರಿಷ್ಠ 3 ದಿನ ಕನಿಷ್ಠ 2 ಈ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಿದ್ದೇವೆ ಎಂದರು.

 ತಾಲೂಕಿನ ಎಲ್ಲ ಹಳ್ಳಿಗಳಿಗೂ ಭೇಟಿಕೊಟ್ಟು ಜನರೊಂದಿಗೆ ಬೆರೆತು ಅವರ ಸಮಸ್ಯೆಯನ್ನು ಆಲಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ರೂಪಿಸಿದ್ದು. ಈ ಪರಿವರ್ತನ ಯಾತ್ರೆ ಮೂಲಕ ಗ್ರಾಮದಲ್ಲಿನ ಸೂಕ್ಷ್ಮ ಸಮಸ್ಯೆಗಳ ಕಡೆಗೆ ಗಮನ ಹರಿಸಲಿದ್ದೇವೆ.

 ವಡ್ಡರಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅನುದಾನದ ಅಡಿಯಲ್ಲಿ 1ಕೋಟಿ ಅನುದಾನ ನೀಡಿದ್ದು ಸರ್ಕಾರದ ಇತರೆ ಸಾಮಾನ್ಯ ಅನುದಾನದ ಅಡಿಯಲ್ಲಿ ಒಂದು ಕೋಟಿ ಹರಿದಾಡುವ ಮೂಲಕ ಗ್ರಾಮಕ್ಕೆ ಉತ್ತಮ ಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮಕ್ಕೆ ಸ್ವಾಗತ ಕಮಾನು ನಿರ್ಮಾಣ ಮಾಡುವಂತೆ ಗ್ರಾಮಸ್ಥರು  ಮನವಿ ಮಾಡಿದ್ದಾರೆ ಅಲ್ಲದೆ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ ನಾವು ಈಗಾಗಲೇ ಮುಜರಾಯಿ ಇಲಾಖೆಗೆ 5 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ  ಪತ್ರ ರವಾನೆ ಮಾಡಿದ್ದೇವೆ ಎಂದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಂಗಾರದ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 5.76 ಲಕ್ಷ ರೂ. ಮೌಲ್ಯದ ಚಿನ್ನಾಬರಣ ವಶಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಗುರುರಕ್ಷೆ ನೀಡಿ ಗೌರವ, ಆಶೀರ್ವಾದಿಸಿದ ವೀರಶೈವ ಶಿವಾಚಾರ್ಯರುಕಾರ್ಮಿಕರ ರಕ್ಷಣಾ ಕಿಟ್ ವಿತರಣೆಯಲ್ಲಿ ನೂರಾರು ಕೋಟಿ ಹಗರಣ: ಜೆಡಿಎಸ್ ವಾಗ್ದಾಳಿ ‘ರೌಡಿ ನಿಗ್ರಹ ದಳ’ ರಚನೆ ರಾಜಕೀಯ ಗಿಮಿಕ್-ಅಶೋಕ್ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಕಾಯುತ್ತಿರುವೆ-ರಾಮಲಿಂಗಾರೆಡ್ಡಿಸಿಎಂ ಸಂಧಾನ ಯಶಸ್ವಿ, ಖಾತೆ ಹಂಚಿಕೆ ಬಿಕ್ಕಟ್ಟು ಸದ್ಯಕ್ಕೆ ಸುಖಾಂತ್ಯಖಾತೆಗಾಗಿ ಕಿತ್ತಾಟ, ವಿಪಕ್ಷಗಳ ನಾಟಕ: ಜನಪರ ಕಾರ್ಯದ ಆಧಾರದ ಮೇಲೆ ಖಾತೆ ಹಂಚಿಕೆಯಾಗಲಿಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟ ಸೇರ್ಪಡೆಗೆ ಪ್ರಾಮಾಣಿಕ ಪ್ರಯತ್ನಅಂಡಮಾನ್ ಕಡಲಾಚೆ ಪ್ರದೇಶದಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆವಿಧಾನ ಪರಿಷತ್ ಗೆ 5ನೇ ಅಭ್ಯರ್ಥಿ ಹೆಸರು ಘೋಷಿಸಿದ ಕಾಂಗ್ರೆಸ್