ಚಂದ್ರವಳ್ಳಿ ನ್ಯೂಸ್, ಹಾಸನ:
ಹಾಸನದ ಪುರದೇವಿ ಶ್ರೀ ಹಾಸನಾಂಬಾ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಪ್ರವಾಸ ಕಾರ್ಯಕ್ರಮದ ಪಟ್ಟಿಯಲ್ಲಿ 'ಅಮೀರ್ ಮೊಹಲ್ಲಾ' ಎಂದು ಉಲ್ಲೇಖಿಸಿರುವುದಕ್ಕೆ ಬಿಜೆಪಿ ನಾಯಕ ಸಿ.ಟಿ ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಸಿಎಂ ಅವರು ಹಾಸನಾಂಬೆಯ ದರ್ಶನಕ್ಕೆ ತೆರಳುತ್ತಿರುವುದು ಸಂತೋಷದ ವಿಚಾರ. ಆದರೆ ಶತಮಾನಗಳಿಂದ ಪೂಜಿಸಿಕೊಂಡು ಬರುತ್ತಿರುವ ಐತಿಹಾಸಿಕ ಹಾಸನಾಂಬಾ ದೇವಾಲಯದ ಬೀದಿಗೆ ಅಮೀರ್ ಮೊಹಲ್ಲಾ ಎಂದು ಹೆಸರು ಬದಲಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
'ಹಾಸನಾಂಬಾ ದೇವಾಲಯದ ಬೀದಿ'ಯನ್ನು ಅಮೀರ್ ಮೊಹಲ್ಲಾ ಎಂದು ಕರೆಯಲು ಅಥವಾ ಬದಲಾಯಿಸಲು ಯಾವುದೇ ಆಸ್ತಿಕ ಹಿಂದೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಸರ್ಕಾರದ ಅಧಿಕೃತ ಪ್ರವಾಸ ಪಟ್ಟಿಯಲ್ಲಿ ಹೀಗೆ ನಮೂದಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.




