Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತುಂಗಭದ್ರಾ ಡ್ಯಾಂಗೆ ನೂತನ ಕ್ರೆಸ್ಟ್‌ಗೇಟ್‌ಅಳವಡಿಸುವ ಕಾರ್ಯ ಪೂರ್ಣ

Advertisement

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ತುಂಗಭದ್ರಾ ಅಣೆಕಟ್ಟೆಗೆ ನೂತನ ಕ್ರೆಸ್ಟ್‌ಗೇಟ್‌ಗಳನ್ನು ಅಳವಡಿಸುವ ಕೆಲಸ ಶನಿವಾರ ಸಂಜೆ ಕೊನೆಗೊಂಡಿದ್ದು
, ಈ ಮೂಲಕ ಈ ಬಾರಿಯ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾದರೆ ಅಣೆಕಟ್ಟೆ ಭರ್ತಿಯಾಗುವುದಕ್ಕೆ ಅವಕಾಶ ಲಭಿಸಿದೆ.

ಕ್ರೆಸ್ಟ್‌ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರು ಇದೇ 14ರಂದು ಅಣೆಕಟ್ಟೆಗೆ ಭೇಟಿ ನೀಡಿ, ಗೇಟ್‌ಗಳ ವಿನ್ಯಾಸ, ನಿರ್ಮಾಣ ಕಾಮಗಾರಿಗೆ ತೃಪ್ತಿ ವ್ಯಕ್ತಪಡಿಸಿದ್ದರು. ಈ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಶನಿವಾರ ಸಂಜೆ ಕೊನೆಯ ಕ್ರೆಸ್ಟ್‌ಗೇಟ್‌ಗೆ ಸ್ಲಿಮ್‌ಪ್ಲೇಟ್ ಅಳವಡಿಸುವ ಕೆಲಸ ಕೊನೆಗೊಂಡಿತು.

 

ಪ್ರಮುಖ ಕೆಲಸ ಇದೀಗ ಕೊನೆಗೊಂಡಿದೆ. ವೆಲ್ಡಿಂಗ್‌, ಪೇಂಟಿಂಗ್‌ನಂತಹ ಕೆಲವು ಕೆಲಸಗಳು ಉಳಿದಿದ್ದು, ಮೇ 2ನೇ ವಾರ ಚೈನ್‌ಲಿಂಕ್‌ಗಳು ಸಹ ಬರಲಿವೆ. ಒಟ್ಟಾರೆ ಮೇ ಅಂತ್ಯದೊಳಗೆ ಅಣೆಕಟ್ಟೆ ಪೂರ್ಣ ಪ್ರಮಾಣದಲ್ಲಿ ನೀರು ಭರ್ತಿ ಮಾಡುವುದಕ್ಕೆ ಸಜ್ಜಾಗಲಿದೆಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹಿನ್ನೆಲೆ: 2024ರ ಆಗಸ್ಟ್ 10ರಂದು ತುಂಗಭದ್ರಾ ಅಣೆಕಟ್ಟೆಯಲ್ಲಿ ಗರಿಷ್ಠ ಪ್ರಮಾಣದ ಅಂದರೆ 1,633 ಅಡಿ ಮಟ್ಟದಲ್ಲಿ (105.75 ಟಿಎಂಸಿ ಅಡಿ) ನೀರು ಸಂಗ್ರಹವಾಗಿತ್ತು. ಅದೇ ದಿನ ರಾತ್ರಿ 19ನೇ ಕ್ರೆಸ್ಟ್‌ಗೇಟ್‌ನೀರಲ್ಲಿ ಕೊಚ್ಚಿಕೊಂಡು ಹೋಗಿತ್ತು. ಕನ್ಹಯ್ಯ ನಾಯ್ಡು ಅವರನ್ನು ಕರೆಸಿಕೊಂಡು ಅವರ ಮಾರ್ಗದರ್ಶನದಲ್ಲಿ ಒಂದೇ ವಾರದಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ನೀರು ಪೋಲಾಗುವುದನ್ನು ತಡೆಹಿಡಿಯಲಾಗಿತ್ತು. ಮತ್ತೆ ಮಳೆ ಸುರಿದ ಕಾರಣ ಜಲಾಶಯ ಭರ್ತಿಯಾಗಿ ಎರಡನೇ ಬೆಳೆಗೂ ಆ ವರ್ಷ ನೀರು ಸಿಕ್ಕಿತ್ತು.

73 ವರ್ಷ ಹಳೆಯದಾದ ಅಣೆಕಟ್ಟೆಯ ಇತರ ಕ್ರೆಸ್ಟ್‌ಗೇಟ್‌ಗಳನ್ನು ಬದಲಿಸಬೇಕು, ಇಲ್ಲದಿದ್ದರೆ ಅಪಾಯ ನಿಶ್ಚಿತ ಎಂಬ ತಜ್ಞರ ವರದಿಯ ಹಿನ್ನೆಲೆಯಲ್ಲಿ ಎಲ್ಲಾ ಗೇಟ್‌ಗಳನ್ನು ಬದಲಿಸುವ ಯೋಜನೆ ರೂಪಿಸಲಾಯಿತು. ಆದರೆ 2025ರಲ್ಲಿ ಗೇಟ್‌ಅಳವಡಿಕೆ ಸಾಧ್ಯವಾಗದ ಕಾರಣ ಮಳೆಗಾಲದಲ್ಲಿ ಗರಿಷ್ಠ 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಿಸಿ ಉಳಿದ ನೀರನ್ನು ನದಿಗೆ ಹರಿಸಲಾಗಿತ್ತು. ಹೀಗಾಗಿ ಕಳೆದ ಬಾರಿ ರೈತರಿಗೆ ಒಂದು ಬೆಳೆಗೆ ಮಾತ್ರ ನೀರು ಸಿಕ್ಕಿತ್ತು. 2025ರ ಡಿಸೆಂಬರ್ 5ರಂದು ಹೊಸ ಗೇಟ್ ಅಳವಡಿಕೆಗೆ ಪೂಜೆ ನೆರವೇರಿಸಲಾಗಿತ್ತು ಹಾಗೂ ಡಿಸೆಂಬರ್ 24ರಿಂದ ಕಾಮಗಾರಿ ಆರಂಭವಾಗಿತ್ತು.

ಕೊನೆಯ ದಿನದ ಕಾಮಗಾರಿ ವೇಳೆ ಸ್ಥಳದಲ್ಲಿ ಕಾರ್ಯದರ್ಶಿ ರೆಡ್ಡಿ ಅವರಲ್ಲದೆ, ಅಧೀಕ್ಷಕ ಎಂಜಿನಿಯರ್ ಎಸ್.ನಾರಾಯಣ ನಾಯ್ಕ್‌, ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಚಂದ್ರಶೇಖರ್, ಎಸ್‌ಡಿಒಗಳಾದ ಕೆ. ಜ್ಞಾನೇಶ್ವರ ಮತ್ತು ಕೆ.ಕೆ.ಕೃಷ್ಣಕುಮಾರ್, ಸೆಕ್ಷನ್ ಎಂಜಿನಿಯರ್‌ಗಳಾಧ ಜಿ.ಕಿರಣ್‌ಮತ್ತು ಡಿ.ಕೆ.ಪಂಪಾಪತಿ ಇದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್. ಜೆ. ಸಿ. ಎಸ್ ಪ್ರೌಢಶಾಲೆಗೆ ಶೇ. ನೂರು ಫಲಿತಾಂಶಟ್ರಾಕ್ಟರ್ ಬೈಕ್ ಡಿಕ್ಕಿ ಬೈಕ್ ಸವಾರರ ಸಾವುಬಡಪ್ಪನಕಟ್ಟೆ  ಕಥೆ ಭಾಗ-5: ಕುಮಾರ್ ಬಡಪ್ಪಸಮಯ ಬಂದಾಗ ಎಲ್ಲವೂ ಗೊತ್ತಾಗಲಿದೆ; ನಾಯಕತ್ವ ಬದಲಾವಣೆಗೆ ಶಿವಕುಮಾರ್ ಮಾರ್ಮಿಕ ನುಡಿಶೃಂಗೇರಿ ಅಂಚೆ ಮತಗಳ ಮರು ಎಣಿಕೆ: ಮೇ 2ಕ್ಕೆ ಹೈಕೋರ್ಟ್ ಆದೇಶದಂತೆ ಪ್ರಕ್ರಿಯೆ ಆರಂಭಟಿಸಿಎಸ್ ವರ್ಲ್ಡ್ 10K ಮ್ಯಾರಥಾನ್: ದಾಖಲೆ ಬರೆದ ಕ್ವಿಜೆರಾ; ಸಂಜೀವನಿ ಜಾಧವ್‌ಗೆ ಹ್ಯಾಟ್ರಿಕ್ ಸಾಧನೆಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ: ಡಿಸಿಎಂ ಶಿವಕುಮಾರ್ಸಾಂಬಾರ್ ಮಾಡಿಲ್ಲವೆಂದು ತಂದೆ ಬೈದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ3ನೇ ಬಾರಿಯೂ ತಪ್ಪಿದ ವಿಮಾನದ ಸಕಾಲಿಕ ಲ್ಯಾಂಡಿಂಗ್; ಆಕಾಶದಲ್ಲೇ 40 ನಿಮಿಷ ಸುತ್ತಾಡಿದ ಪ್ರಯಾಣಿಕರು!ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90.47 ಫಲಿತಾಂಶ: ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ