Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕುಮಾರಸ್ವಾಮಿ ಕಾರ್ಯದಕ್ಷತೆ: ತೆಲಂಗಾಣ ಸಿಎಂ ಹಾಗೂ ಕೇಂದ್ರ ಸಚಿವರೊಂದಿಗೆ ಮಹತ್ವದ ಭೇಟಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ನವದೆಹಲಿ: 
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಷ್ಟ್ರ ರಾಜಧಾನಿಯಲ್ಲಿ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು
, ವಿವಿಧ ರಾಜ್ಯಗಳ ಮುಖಂಡರು ಹಾಗೂ ಸಹೋದ್ಯೋಗಿಗಳನ್ನು ಭೇಟಿ ಮಾಡಿ ಸೌಜನ್ಯಯುತ ಮಾತುಕತೆ ನಡೆಸಿದರು.

​​ಭೂಪತಿರಾಜು ಶ್ರೀನಿವಾಸ ವರ್ಮಾ: ತಮ್ಮ ಇಲಾಖೆಯ ಸಹೋದ್ಯೋಗಿ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಇಲಾಖೆಯ ರಾಜ್ಯ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮಾ ಅವರ ನಿವಾಸಕ್ಕೆ ಕುಮಾರಸ್ವಾಮಿ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಇಲಾಖೆಯ ಅಭಿವೃದ್ಧಿ ಹಾಗೂ ಸಮನ್ವಯದ ಕುರಿತು ಚರ್ಚಿಸಿದರು.

​ರೇವಂತ್ ರೆಡ್ಡಿ ಭೇಟಿ: ತೆಲಂಗಾಣದ ಮುಖ್ಯಮಂತ್ರಿ ರೇವಂತ್ ಅನ್ಮುಲ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಅವರು, ಉಭಯ ರಾಜ್ಯಗಳ ಹಿತದೃಷ್ಟಿಯಿಂದ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಕೆಲಕಾಲ ಸಮಾಲೋಚನೆ ನಡೆಸಿದರು.

​ಸಂಸದರು ಮತ್ತು ಶಾಸಕರ ಭೇಟಿ: ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಸಂಸದರು ಹಾಗೂ ಶಾಸಕರನ್ನು ಭೇಟಿ ಮಾಡಿದ ಸಚಿವರು, ವಿವಿಧ ವಿಷಯಗಳ ಕುರಿತು ಸಂವಾದ ನಡೆಸಿದರು.

​ಸಚಿವರ ಮಾತು:
​ಈ ಭೇಟಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೆಚ್.ಡಿ. ಕುಮಾರಸ್ವಾಮಿ ಅವರು,
​"ಇಂತಹ ರಚನಾತ್ಮಕ ಸಭೆಗಳು ಮತ್ತು ಸಂವಾದಗಳು ಉತ್ತಮ ಸಮನ್ವಯಕ್ಕೆ ದಾರಿಯಾಗುತ್ತವೆ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಸಹಕಾರಿಯಾಗುತ್ತವೆ." ಎಂದು ತಿಳಿಸಿದ್ದಾರೆ.

​ಈ ಭೇಟಿಗಳು ದಕ್ಷಿಣ ಭಾರತದ ರಾಜ್ಯಗಳ ನಡುವಿನ ಬಾಂಧವ್ಯ ವೃದ್ಧಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಜಾರಿಯಲ್ಲಿ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಪ್ರಮುಖವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಟ್ರಬಲ್ ಶೂಟರ್’ ಡಿ.ಕೆ. ಶಿವಕುಮಾರ್: ಮುಖ್ಯಮಂತ್ರಿ ಹುದ್ದೆಯ ಹಾದಿ ಮತ್ತು ಮಹತ್ವದ ವಿಶ್ಲೇಷಣೆ‘ಕನಕಪುರ ಬಂಡೆ’ ಡಿ.ಕೆ. ಶಿವಕುಮಾರ್ ರಾಜಕೀಯ ಜೀವನದ ರೋಚಕ ಹಾದಿಅಧಿಕಾರದ ಗದ್ದುಗೆಗೆ ತಾಳ್ಮೆ ಮತ್ತು ಹೋರಾಟದ ಪರ್ಯಾಯ ಹೆಸರು: ‘ಕನಕಪುರ ಬಂಡೆ’ ಡಿ.ಕೆ. ಶಿವಕುಮಾರ್ಎನ್.ವೈ.ಜಿ ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ನಾಯಕರಾದ ಜಿ.ಒ ನಾಗರಾಜ್, ಕೆ.ಟಿ ರುದ್ರಮುನಿ ಒತ್ತಾಯಬತ್ತಿದ ನೆಲದ ಒಡಲಲ್ಲಿ ಚಿಗುರಿದ ಆಶಾಕಿರಣ: ಹಿರಿಯೂರಿನ ‘ಮುಕ್ತ ವಿಚಾರ ವೇದಿಕೆ’ ತಂದ ದೀಪದ ಕುಡಿಹಿರಿಯ ಮುತ್ಸದ್ದಿ ಎನ್.ವೈ. ಗೋಪಾಲಕೃಷ್ಣಗೆ ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ನಾಯಕರ ಒತ್ತಾಯಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯಯುತ ಪ್ರಾತಿನಿಧ್ಯಕ್ಕೆ ಆಗ್ರಹ:ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಷರತ್ತುಗಳನ್ನು ಸರಳೀಕರಣ ಮಾಡಿ ಆದೇಶ: ಕೆಯುಡಬ್ಲ್ಯೂಜೆ ಸ್ವಾಗತಜೆಡಿಎಸ್ ಬೂತ್ ಮಟ್ಟದ ಏಜೆಂಟ್‌ಗಳ ಕಾರ್ಯಾಗಾರ ಯಶಸ್ವಿ; ನಿಖಿಲ್ ಅಭಿನಂದನೆಜೋಧಪುರದಲ್ಲಿ ಕ್ರಾಂತಿ: ಸ್ವದೇಶಿ ನಿರ್ಮಿತ ‘ದಿವ್ಯಾಸ್ತ್ರ ಎಂಕೆ-1’ ಯುಎವಿ ಯಶಸ್ವಿ ಪರೀಕ್ಷೆ!