Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿವಿ ಸಾಗರ ಜಲಾಶಯಕ್ಕೆ ನೀರು ಲಿಫ್ಟ್ ಮಾಡಿ:ಲಿಂಗಾರೆಡ್ಡಿ ಆಗ್ರಹ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
     ಭದ್ರಾ ಜಲಾಶಯದಿಂದ ನೀರನ್ನು ಲಿಫ್ಟ್ ಮಾಡಿ  ತುಮಕೂರು ಶಾಖಾ ಕಾಲುವೆ ಮೂಲಕ ವಿವಿ ಸಾಗರ ಜಲಾಶಯಕ್ಕೆ ಹರಿಸುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.

      ಮುಂಗಾರು ವೈಫಲ್ಯದಿಂದಾಗಿ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಇಪ್ಪತ್ತು ದಿನಗಳ ಹಿಂದೆ ನೀರಿನ ಮಟ್ಟ 134 ಅಡಿಗೆ ಇಳಿದಿತ್ತು. ಆದರೆ ಕಳೆದ ವಾರದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯಕ್ಕೆ ಒಳ  ಹರಿವು ಹೆಚ್ಚಾಗಿದೆ. ಜುಲೈ 9 ರ ಗುರುವಾರ ಜಲಾಶಯದ ನೀರಿನ ಮಟ್ಟ 144 ಅಡಿ ದಾಟಿದ್ದು ಒಳ ಹರಿವು 16 ಸಾವಿರ ಕ್ಯೂಸೆಕ್ಸ್ ನಷ್ಟಿದೆ. ಇನ್ನೂ ಮಳೆ ಬರುತ್ತಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿವೆ.

   ಭದ್ರಾ ಜಲಾಶಯದ ಒಟ್ಟಾರೆ ನೀರಿನ ಸಂಗ್ರಹ 71 ಟಿಎಂಸಿ. ಜಲಾಶಯದ ಗರಿಷ್ಟ ನೀರಿನ ಸಂಗ್ರಹ 186 ಅಡಿ. ಭದ್ರಾ ಮೇಲ್ದಂಡೆಗಾಗಿ  12.50 ಟಿಎಂಸಿ ನೀರನ್ನು ಜಲಾಶಯದಿಂದ ಹಂಚಿಕೆ ಮಾಡಲಾಗಿದೆ. ಭದ್ರಾ ಜಲಾಶಯದ ನೀರಿನ ಗರಿಷ್ಟ ಮಟ್ಟ 186 ಅಡಿಗಳಷ್ಟಿದ್ದರೆ ಭದ್ರಾ  ಮೇಲ್ದಂಡೆ ಯೋಜನೆಗಾಗಿ ನೀರನ್ನು ಡ್ರಾ ಮಾಡುವ ಪಾಯಿಂಟನ್ನು 144 ಅಡಿಗೆ ಸೀಮಿತಗೊಳಿಸಲಾಗಿದೆ. ಅಂದರೆ ಭದ್ರಾ ಜಲಾಶಯದಲ್ಲಿ 144 ಅಡಿಗಳಿಗೆ ಮೇಲ್ಪಟ್ಟು ನೀರಿದ್ದರೆ ಮಾತ್ರ ಭದ್ರಾ ಮೇಲ್ಡಂಡೆಗೆ ಪಡೆಯುವ ಸಾಧ್ಯತೆಗಳಿವೆ. ಈ  ರೀತಿ ಡಿಸೈನ್ ಮಾಡಿ ನೀರನ್ನು ಡ್ರಾ ಮಾಡಲಾಗುತ್ತದೆ.

  ಜಲಾಶಯದಲ್ಲಿ ನೀರಿನ ಸಂಗ್ರಹ 144 ಅಡಿ ದಾಟಿರುವುದರಿಂದ ಭದ್ರಾ ಮೇಲ್ದಂಡೆಗೆ ನೀರನ್ನು ಲಿಫ್ಟ ಮಾಡಲು ಯಾವುದೇ ತೊಂದರೆಗಳಿಲ್ಲ. ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಇಲ್ಲಿ ನೀರು ಹರಿಸಲು ಸಾಧ್ಯವಿಲ್ಲ. ಆದರೆ ತುಮಕೂರು ಬ್ರಾಂಚ್ ಕಾಲುವೆ ಮೂಲಕ ನೀರು ಹರಿಸಲು ಯಾವುದೇ ತೊಂದರೆಗಳಿಲ್ಲ. ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಪೂರ್ಣಗೊಳ್ಳುವ ತನಕ ವಿವಿ ಸಾಗರ ಜಲಾಶಯಕ್ಕೆ ನೀರು ಹಾಯಿಸಬೇಕೆಂದು ಸಮಿತಿ ಆಗ್ರಹಿಸುತ್ತದೆ.

    ವಿವಿ ಸಾಗದ ಜಲಾಶಯದ ಗುರುವಾರದ ನೀರಿನ  ಸಂಗ್ರಹ 122 ಅಡಿಗಳಷ್ಟಿದೆ. ಅಂದರೆ ಜಲಾಶಯ ಭರ್ತಿಗೆ ಹದಿಮೂರು ಅಡಿ ಬಾಕಿ ಇದೆ. ಮಳೆಗಾಲದಲ್ಲಿ ಈ ಜಲಾಶಯಕ್ಕೆ ಇದುವರೆಗೂ ಒಂದು ಬೊಗಸೆ ಒಳಹರಿವು ಬಂದಿಲ್ಲ.ಹಾಗಾಗಿ ಭದ್ರಾ ಮೇಲ್ದಂಡೆಯಡಿ ಕನಿಷ್ಟ ಎರಡು ತಿಂಗಳು ನೀರು ಲಿಫ್ಟ್ ಮಾಡಿದರೆ  ನಾಲ್ಕು ಟಿಎಂಸಿ ಯಷ್ಟು ಸಂಗ್ರಹವಾಗುತ್ತದೆ. ಭವಿಷ್ಯದ ಆತಂಕ ನಿವಾರಣೆಯಾಗುತ್ತದೆ.

      ಹಾಲಿ ಮುಂಗಾರು ಹಂಗಾಮಿನಲ್ಲಿ ನೀರು ಪಡೆಯಲು ಯಾವುದೇ ಅಡ್ಡಿಇಲ್ಲ. ಯಾವ ರೈತರ ವಿರೋಧವೂ ಇಲ್ಲ. ಜಲ ಸಂಪನ್ಮೂಲ ಇಲಾಖೆ ಉನ್ನತ ಅಧಿಕಾರಿಗಳು ತಕ್ಷಣವೇ ಭದ್ರಾ ಜಲಾಶಯದಿಂದ ನೀರು ಲಿಫ್ಟ ಮಾಡಿ  ತುಮಕೂರು ಶಾಖಾ ಕಾಲುವೆ ಮೂಲಕ ವಿವಿ ಸಾಗರಕ್ಕೆ ಹಾಯಿಸಬೇಕೆಂದು ಒತ್ತಾಯಿಸುತ್ತೇವೆ.
ಬಿ.ಎ.ಲಿಂಗಾರೆಡ್ಡಿ ಕಾರ್ಯಾಧ್ಯಕ್ಷ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರುಗಳಾದ ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹುಣಿಸೆಕಟ್ಟೆ ಕಾಂತರಾಜ್, ಮಲ್ಲಾಪುರ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.