Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಾಕ್ಷರತೆಯೇ ಸಮರ್ಥ ಬದುಕಿನ ಅಡಿಪಾಯ: ಮುಖ್ಯೋಪಾಧ್ಯಾಯ ಟಿ.ಪಿ. ಉಮೇಶ್

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಸಾಕ್ಷರತೆ ಎಂದರೆ ಕೇವಲ ಅಕ್ಷರಗಳನ್ನು ಓದಲು ಮತ್ತು ಬರೆಯಲು ಕಲಿಯುವುದಷ್ಟೇ ಅಲ್ಲ. ಅದು ಮಗುವಿನ ಚಿಂತನೆಗೆ ರೆಕ್ಕೆ ನೀಡುವ ಶಕ್ತಿ. ಓದು-ಬರಹದ ಮೂಲಕ ಜ್ಞಾನವನ್ನು ಪಡೆದು, ತನ್ನ ಹಕ್ಕು-ಕರ್ತವ್ಯಗಳನ್ನು ಅರಿತು, ಆತ್ಮವಿಶ್ವಾಸದಿಂದ ಬದುಕುವ ಸಾಮರ್ಥ್ಯವನ್ನು ಸಾಕ್ಷರತೆ ನೀಡುತ್ತದೆ ಎಂದು ಮುಖ್ಯೋಪಾಧ್ಯಾಯ ಟಿ.ಪಿ. ಉಮೇಶ್ ಹೇಳಿದರು.

ಹೊಳಲ್ಕೆರೆ ತಾಲ್ಲೂಕು ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 60 ನೇ ವರ್ಷದ ಅಂತರಾಷ್ಟ್ರೀಯ ಸಾಕ್ಷರತೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಮಗು ಅಕ್ಷರ ಕಲಿತಾಗ ಅದರ ಬದುಕಿನ ಹೊಸ ಬಾಗಿಲೊಂದು ತೆರೆದುಕೊಳ್ಳುತ್ತದೆ.

Advertisement

ಪುಸ್ತಕಗಳು ಮಕ್ಕಳಿಗೆ ಜ್ಞಾನದ ಗೆಳೆಯರಾಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿದಿನವೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ಕಲಿತ ಅಕ್ಷರಜ್ಞಾನವನ್ನು ಜೀವನದಲ್ಲಿ ಬಳಸಿಕೊಳ್ಳುವ ಮೂಲಕ ಕುಟುಂಬ ಮತ್ತು ಸಮಾಜದ ಪ್ರಗತಿಗೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ವಿದ್ಯಾರ್ಥಿಗಳಲ್ಲಿ ಓದುವಿಕೆ, ಬರವಣಿಗೆ ಮತ್ತು ಜ್ಞಾನಾಭಿರುಚಿ ಬೆಳೆಸುವ ಉದ್ದೇಶದಿಂದ ವಿವಿಧ ಸಾಕ್ಷರತಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಸಾಕ್ಷರತೆಯ ಮಹತ್ವ ಸಾರುವ ಘೋಷಣೆಗಳು, ಮಾತುಗಳು ಹಾಗೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಕ್ಷರ ಕಲಿಯೋಣ, ಜ್ಞಾನ ಬೆಳೆಸೋಣ, ಓದುವ ಹವ್ಯಾಸ ಬೆಳೆಸಿ, ಉತ್ತಮ ಸಮಾಜ ನಿರ್ಮಿಸೋಣ ಎಂಬ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಸಹಶಿಕ್ಷಕಿ ಜಿ.ಎನ್.ರೇಷ್ಮಾ ಅಕ್ಷರ ದಾಸೋಹ ಕಾರ್ಯಕರ್ತರಾದ ತಿಮ್ಮಕ್ಕ, ಶಾರದಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಇಂದು ಕೌರವರ ಸ್ಥಾನದಲ್ಲಿ ಕಾಂಗ್ರೆಸ್': 2028ಕ್ಕೆ ರಾಜಕೀಯ 'ಕುರುಕ್ಷೇತ್ರ' ಯುದ್ಧ ಎಂದ ಸಿ.ಟಿ. ರವಿ  'ಬಳ್ಳಾರಿ ಚಲೋ'ಗೆ ಜನಸಾಗರದ ಬೆಂಬಲ; ಬುಡ್ಗ ಜಂಗಮ ಸಮಾಜದ ಸಮಸ್ಯೆಗಳಿಗೆ ಧ್ವನಿಯಾದ ಬಿ.ವೈ. ವಿಜಯೇಂದ್ರಥೇಲ್ಸ್ ಗ್ರೂಪ್‌ನಿಂದ ಕರ್ನಾಟಕದಲ್ಲಿ ಸೋರ್ಸಿಂಗ್, ಹೂಡಿಕೆ ವಿಸ್ತರಣೆಗೆ ಉತ್ಸುಕತೆ: ಸಚಿವ ಎಂ. ಬಿ. ಪಾಟೀಲ್ಕರ್ನಾಟಕದಲ್ಲಿ ಉತ್ಪಾದನೆ, ಸ್ಥಳೀಯ ಅಸೆಂಬ್ಲಿ ಘಟಕ ಸ್ಥಾಪನೆಗೆ ‘ಸೊಮ್ಫಿ’ಗೆ ಆಹ್ವಾನ: ಸಚಿವ ಎಂ. ಬಿ. ಪಾಟೀಲ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ ಸಿ.ಎಂ ಡಿ.ಕೆ.ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ ಸಿ.ಎಂ ಡಿ.ಕೆ.ಶಿವಕುಮಾರ್ ಸಾಕ್ಷರತೆಯೇ ಸಮರ್ಥ ಬದುಕಿನ ಅಡಿಪಾಯ: ಮುಖ್ಯೋಪಾಧ್ಯಾಯ ಟಿ.ಪಿ. ಉಮೇಶ್ನೈಸರ್ಗಿಕ ಕೃಷಿಗೆ ಉತ್ತೇಜನ-ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು-ನೂತನ ಜಿಲ್ಲಾಧಿಕಾರಿ ಎಸ್.ರಮ್ಯ ಶಾಲಾ ಹಂತದಲ್ಲೇ ತಂಬಾಕು, ಮಾದಕ ವ್ಯಸನದ ವಿರುದ್ಧ ಜಾಗೃತಿ ಅಗತ್ಯ