LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸರ್ವೇ ಮೇಲ್ವಿಚಾರಕ ಹಾಗು ಪರವಾನಿಗೆ ಭೂ ಮಾಪಕ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹರಿಹರ : 
ನಗರದ ಸಹಾಯಕ ಭೂದಾಖಲೆಗಳ ನಿರ್ದೇಶಕರ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ನೆ  ನಡೆಸಿದ ಕಾರ್ಯಾಚರಣೆಯಲ್ಲಿ 5 ಸಾವಿರ ರೂ
,ಲಂಚ ಪಡೆಯುವ ಕೃತ್ಯ ಎಸಗುವಾಗ ಸರ್ವೆ ಮೇಲ್ವಿಚಾರಕ ಹಾಗೂ ಸರ್ಕಾರಿ ಪರವಾನಿಗೆ  ಭೂಮಾಪಕ ಬಲೆಗೆ ಬಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.

ತಾಲೂಕು ಸಹಾಯಕ ಭೂದಾಖಲೆಗಳ ನಿರ್ದೇಶಕ ಕಚೇರಿ ಯಲ್ಲಿ ಭೂ ಅಳತೆ ಮಾಡಿ ಕೊಡುವ ಸಂಬಂಧ ರೈತನಿಂದ 5 ಸಾವಿರ ರೂ, ಲಂಚ ಸ್ವೀಕರಿಸುತ್ತಿದ್ದ ವೇಳೆ ಬಲೆ ಬೀಸಿ ಇಬ್ಬರು ಅಧಿಕಾರಿಗಳಾದ ಸರ್ವೆ ಸೂಪರ್‌ವೈಸರ್ ರಾಮಪ್ಪ ಅಡಿವೆಪ್ಪ ದಾಸರ್ ಮತ್ತು ಸರ್ಕಾರಿ ಪರವಾನಗಿ ಭೂಮಾಪಕ ಆನಂದಪ್ಪ ನಾಯಕ್ ರೆಡ್‌ಹ್ಯಾಂಡ್ ಆಗಿ ಹಣದ ಸಮೇತ ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ : ತಾಲೂಕಿನ ಸ್ಥಳೀಯ ರೈತ ರುದ್ರೇಶ್ 11ಇ ಅಡಿ ಸ್ಕೆಚ್ ತಯಾರಿಸಿ ತಮ್ಮ ಜಮೀನಿನ ಅಳತೆ ಮಾಡಿಕೊಡು ವಂತೆ ಹಲವು ದಿನ ಗಳಿಂದ ಕಚೇರಿಗೆ ಅಲೆದಾಡುತ್ತಿದ್ದರು. ಆದರೆ ಕೆಲಸ ಪೂರ್ಣ ಗೊಳಿಸಲು ಸರ್ವೆ ಸೂಪರ್‌ವೈಸರ್ ರಾಮಪ್ಪ ದಾಸರ್ ಹಾಗೂ ಪರವಾನಗಿ ಭೂಮಾಪಕ ಆನಂದಪ್ಪ ನಾಯಕ್ ಅವರು 5 ಸಾವಿರ ರೂ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ರೈತ ರುದ್ರೇಶ್ ಲಂಚ ನೀಡಲು ನಿರಾಕರಿಸಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಅಧಿಕಾರಿಗಳು ಕಾರ್ಯಾಚರಣೆಗೆ ಯೋಜನೆ ರೂಪಿಸಿ ರೆಡ್‌ಹ್ಯಾಂಡ್ ಆಗಿ  ಯೋಜನೆಯಂತೆ ಶನಿವಾರ ರೈತ ರುದ್ರೇಶ್ ಆರೋಪಿಗಳಿಗೆ 5 ಸಾವಿರ ರೂ, ಲಂಚದ ಹಣ ನೀಡುತ್ತಿದ್ದ ವೇಳೆ,ಹೊಂಚು ಹಾಕಿ ಕಾಯುತ್ತಿದ್ದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಕೃತ್ಯ ಎಸೆಗುವ ವೇಳೆ  ಬಂಧಿಸಿದ್ದಾರೆ.

ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡ ಭಾಗವಹಿಸಿ ಪ್ರಕರಣ ದಾಖಲಿಸಿ ಕೊಂಡಿರುವ ಲೋಕಾಯುಕ್ತ ಪೊಲೀಸರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು, ಪರಿಷತ್‌ನಲ್ಲಿ, ಬಳ್ಳಾರಿಯಲ್ಲಿ ಅಹೋರಾತ್ರಿ ಧರಣಿ!ಪ್ರಿಯಕರನ ಜೊತೆ ಸೇರಿ ಪುತ್ರ, ಪತಿಯನ್ನೇ ಕೊಂದ ಪತ್ನಿ ಬಂಧನ!"ನೀವು ವೇದಾಂತಿ ಆಗಿ, ಸಿಎಂ ಸ್ಥಾನ ಸೆಟ್ ಆಗ್ತಿಲ್ಲ": ಡಿಕೆಶಿಗೆ ಸುನೀಲ್ ಕುಮಾರ್ ಸಲಹೆ, ಸದನದಲ್ಲಿ ನಗೆಯ ಅಲೆ!ಕಾಂಗ್ರೆಸ್‌ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್KPSC ನೇಮಕಾತಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ, ಕಚೇರಿ ಸೇರಿ 21 ಕಡೆ ಇಡಿ ದಾಳಿ‘ನಮ್ಮ ರಾಜ್ಯ ರಕ್ಷಣೆ ನಮಗೆ ಗೊತ್ತು, ಹಸ್ತಕ್ಷೇಪ ಬೇಡ’: ತಮಿಳುನಾಡು ನಾಯಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆವಿದ್ಯಾರ್ಥಿ ಪ್ರತಿಭಟನೆ ಮೇಲಿನ ಪೊಲೀಸ್ ದೌರ್ಜನ್ಯ: ಉನ್ನತಾಧಿಕಾರ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ಧಾರ‘ವಂದೇ ಮಾತರಂ’ ವಿವಾದ: ಸೋನಿಯಾ-ರಾಹುಲ್ ವಿರುದ್ಧ ದೂರು, ಖರ್ಗೆ ವಾಗ್ದಾಳಿKPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಆದೇಶ ವಜಾ: ಮರುನೇಮಕಕ್ಕೆ ಹೈಕೋರ್ಟ್ ನಿರ್ದೇಶನ ‘ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ’: ಕಾಂಗ್ರೆಸ್‌ನಾಯಕರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು!