LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೈಸ್ ಸಂಸ್ಥೆಯಿಂದ ಲೂಟಿ: ಸಿಬಿಐ ತನಿಖೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
​ನೈಸ್ ಸಂಸ್ಥೆಯು ಟೋಲ್ ಸಂಗ್ರಹದ ಹೆಸರಿನಲ್ಲಿ ಕರ್ನಾಟಕದ ಜನರ ಹಣವನ್ನು ಸಾರಾಸಾಗಟಾಗಿ ಲೂಟಿ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

​30 ವರ್ಷಗಳ ಅವಧಿಗೆ ಮಾತ್ರ ಟೋಲ್ ಸಂಗ್ರಹಿಸಲು ಕರಾರು ಮತ್ತು ಒಪ್ಪಂದವಿದ್ದರೂ, ಆ ಅವಧಿ ಮುಗಿದ ಮೇಲೆಯೂ ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಟೋಲ್ ವಸೂಲಿ ಮಾಡುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

​​ಕೋಟ್ಯಂತರ ರೂಪಾಯಿ ಅಕ್ರಮ: ಒಪ್ಪಂದದ ಅವಧಿ ಮುಕ್ತಾಯಗೊಂಡರೂ ಜನರಿಂದ ಅನಧಿಕೃತವಾಗಿ ಕೋಟ್ಯಂತರ ರೂಪಾಯಿ ಹಣವನ್ನು ವಸೂಲಿ ಮಾಡಲಾಗುತ್ತಿದೆ.

​ಸಿಬಿಐ ತನಿಖೆಗೆ ಆಗ್ರಹ: ನೈಸ್ ಸಂಸ್ಥೆಯ ಟೋಲ್ ಸಂಗ್ರಹದಲ್ಲಿ ನಡೆದಿದೆ ಎನ್ನಲಾದ ಸಂಪೂರ್ಣ ಅವ್ಯವಹಾರ ಮತ್ತು ಲೂಟಿಯ ಕುರಿತು ಸಿಬಿಐ ತನಿಖೆ ನಡೆಸಬೇಕು.

​ಸತ್ಯ ಬಯಲಾಗಲಿ: ಜನರ ಆಸ್ತಿ ಮತ್ತು ಹಣದ ಲೂಟಿಗೆ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ಅಸಲಿ ಸತ್ಯವನ್ನು ರಾಜ್ಯದ ಜನತೆಯ ಮುಂದೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು, ಪರಿಷತ್‌ನಲ್ಲಿ, ಬಳ್ಳಾರಿಯಲ್ಲಿ ಅಹೋರಾತ್ರಿ ಧರಣಿ!ಪ್ರಿಯಕರನ ಜೊತೆ ಸೇರಿ ಪುತ್ರ, ಪತಿಯನ್ನೇ ಕೊಂದ ಪತ್ನಿ ಬಂಧನ!"ನೀವು ವೇದಾಂತಿ ಆಗಿ, ಸಿಎಂ ಸ್ಥಾನ ಸೆಟ್ ಆಗ್ತಿಲ್ಲ": ಡಿಕೆಶಿಗೆ ಸುನೀಲ್ ಕುಮಾರ್ ಸಲಹೆ, ಸದನದಲ್ಲಿ ನಗೆಯ ಅಲೆ!ಕಾಂಗ್ರೆಸ್‌ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್KPSC ನೇಮಕಾತಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ, ಕಚೇರಿ ಸೇರಿ 21 ಕಡೆ ಇಡಿ ದಾಳಿ‘ನಮ್ಮ ರಾಜ್ಯ ರಕ್ಷಣೆ ನಮಗೆ ಗೊತ್ತು, ಹಸ್ತಕ್ಷೇಪ ಬೇಡ’: ತಮಿಳುನಾಡು ನಾಯಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆವಿದ್ಯಾರ್ಥಿ ಪ್ರತಿಭಟನೆ ಮೇಲಿನ ಪೊಲೀಸ್ ದೌರ್ಜನ್ಯ: ಉನ್ನತಾಧಿಕಾರ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ಧಾರ‘ವಂದೇ ಮಾತರಂ’ ವಿವಾದ: ಸೋನಿಯಾ-ರಾಹುಲ್ ವಿರುದ್ಧ ದೂರು, ಖರ್ಗೆ ವಾಗ್ದಾಳಿKPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಆದೇಶ ವಜಾ: ಮರುನೇಮಕಕ್ಕೆ ಹೈಕೋರ್ಟ್ ನಿರ್ದೇಶನ ‘ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ’: ಕಾಂಗ್ರೆಸ್‌ನಾಯಕರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು!