ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಾಯಸಂದ್ರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವವು ದಿನಾಂಕ 01-05-2026 ರಿಂದ 08-05-2026ರವರೆಗೆ ಅತ್ಯಂತ ಸಡಗರ-ಸಂಭ್ರಮದಿಂದ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಹಾಗೂ ಗ್ರಾಮಸ್ಥರು ವಿನಂತಿಸಿದ್ದಾರೆ.
ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳು:
ಜಾತ್ರೆಯ ಅಂಗವಾಗಿ ವಾರದ ಕಾಲ ವಿವಿಧ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ಜರುಗಲಿವೆ.
ಮೇ 1 (ಶುಕ್ರವಾರ): ಮದಲಿಂಗಿತ್ತಿ ಶಾಸ್ತ್ರ ಮತ್ತು ಕಂಕಣ ಕಟ್ಟುವುದು.
ಮೇ 2 (ಶನಿವಾರ): ಜಲ್ಲಿ ಪೂಜೆ, ಅಮ್ಮನವರ ಮೆರವಣಿಗೆ ಹಾಗೂ ದೊಡ್ಡ ಪೂಜೆ.ಮೇ 3 (ಭಾನುವಾರ): ಗ್ರಾಮಸ್ಥರಿಂದ ಆರತಿ, ಬಾನ ಮತ್ತು ಬೇವಿ ಉಡಿಕೆ ಸೇವೆ. ಬೆಳಿಗ್ಗೆ 9-00 ಗಂಟೆಗೆ ದಾಸೋಹ ಭವನ ಉದ್ಘಾಟನೆ ನೆರವೇರಲಿದೆ.
ಮೇ 4 (ಸೋಮವಾರ): ಮೇಟಿಕುರ್ಕೆ ಎ.ಕೆ. ಕಾಲೋನಿ ಗ್ರಾಮಸ್ಥರಿಂದ ಅಮ್ಮನವರ ಸಿಡಿ ಉತ್ಸವ. ಬೆಳಿಗ್ಗೆ 10-00ಕ್ಕೆ ಗೋಪುರ ಕಳಸ ಸ್ಥಾಪನೆಯ ವರ್ಷದ ಪೂಜೆ.
ಮೇ 5 (ಮಂಗಳವಾರ): ಭಕ್ತಾದಿಗಳಿಂದ ಆರತಿ ಮತ್ತು ಮುಡಿ ಸೇವೆ.
ಮೇ 6 (ಬುಧವಾರ): ಬೆಳಗಿನ ಜಾವ 4 ಗಂಟೆಗೆ 101 ಎಡೆ ಪೂಜೆ, ಬೆಳಿಗ್ಗೆ 7 ಗಂಟೆಗೆ ನಂಜಯ್ಯನಕೊಟ್ಟಿಗೆ ಗ್ರಾಮಸ್ಥರಿಂದ "ಗಾವು" ಸೇವೆ ಮತ್ತು 8-30 ರಿಂದ ಗ್ರಾಮ ಪ್ರವೇಶ.
ಮೇ 8 (ಶುಕ್ರವಾರ): ದೊಡ್ಡ ಪೂಜೆ, ಚಪ್ಪರ ಇಳಿಸುವುದು ಮತ್ತು ಕಂಕಣ ಬಿಚ್ಚುವ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ.
ವಿಶೇಷ ಸೂಚನೆಗಳು:
ಮುಡಿ ಸೇವೆ: ಮುಡಿ (ಮಂಡೆ) ತೆಗೆಸುವ ಭಕ್ತರು 201-00 ರೂಪಾಯಿಗಳನ್ನು ಪಾವತಿಸಿ ರಸೀದಿ ಪಡೆಯತಕ್ಕದ್ದು.
ಅನ್ನದಾಸೋಹ: ಜಾತ್ರೆಯ ಎಲ್ಲಾ ದಿನಗಳಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇರಲಿದ್ದು, ದಾನಿಗಳು ಅಕ್ಕಿ, ಬೇಳೆ, ಬೆಲ್ಲದ ರೂಪದಲ್ಲಿ ಸಹಾಯ ಮಾಡಬಹುದಾಗಿದೆ. ಅಲ್ಲದೆ ಪ್ರತಿ ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ಅನ್ನದಾಸೋಹ ನಡೆಯಲಿದೆ.
ಸಹಾಯ: ದೇವಾಲಯದ ಜೀರ್ಣೋದ್ದಾರಕ್ಕಾಗಿ ಭಕ್ತರು ತನು-ಮನ-ಧನದಿಂದ ಸಹಕರಿಸಲು ಕೋರಿದ್ದಾರೆ.
ಶ್ರೀ ಕರಿಯಮ್ಮದೇವಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ, ಮಾಯಸಂದ್ರ ಹಾಗೂ ಶಿಡ್ಲಯ್ಯನಹಟ್ಟಿ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಮನವಿ ಮಾಡಿದ್ದಾರೆ.


