LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

'ನಾಗೇಂದ್ರ ಅಪರಾಧಿ' ಎಂದ ಸಚಿವ ಶಿವಲಿಂಗೇಗೌಡ: ಕಾಂಗ್ರೆಸ್‌ಗೆ ಮುಜುಗರ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯ ನಡುವೆಯೇ, ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ನೀಡಿದ ಹೇಳಿಕೆಯೊಂದು ಆಡಳಿತರೂಢ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

  ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರದಲ್ಲಿ ನೀಡಿದ ಹೇಳಿಕೆಯಿಂದ ಸ್ವತಃ ಪೇಚಿಗೆ ಸಿಲುಕಿದರು.

  ಘಟನೆಯ ವಿವರ:ವಾಲ್ಮೀಕಿ ಹಗರಣದ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರ ರಾಜೀನಾಮೆಯನ್ನು ಸಿದ್ದರಾಮಯ್ಯ ಸರ್ಕಾರ ಏಕೆ ಪಡೆಯಿತು ಎಂಬ ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ ಉತ್ತರಿಸಿದ ಶಿವಲಿಂಗೇಗೌಡ, "ನಾಗೇಂದ್ರ ವಿರುದ್ಧ ಆಪಾದನೆ ಬಂದಾಗ ಸದನದಲ್ಲಿ ಚರ್ಚೆಯಾಗಿತ್ತು, ಆದರೆ ಸತ್ಯಾಸತ್ಯತೆಗಳು ತಿಳಿದಿರಲಿಲ್ಲ" ಎಂದರು. 

ಇದಕ್ಕೆ ಮರುಪ್ರಶ್ನೆ ಹಾಕಿದ ವರದಿಗಾರ, "ಸತ್ಯ ತಿಳಿಯದೆ ನಾಗೇಂದ್ರ ಅವರನ್ನು ಬಲಿಪಶು ಮಾಡಲಾಯಿತೇ?" ಎಂದು ಕೇಳಿದಾಗ, "ನಾಗೇಂದ್ರ ಮೇಲ್ನೋಟಕ್ಕೆ ಅಪರಾಧಿ ಎಂಬ ಶಂಕೆ ಇದ್ದಿದ್ದರಿಂದ ಅವರ ರಾಜೀನಾಮೆ ಪಡೆಯಲಾಯಿತು" ಎಂದು ಸಚಿವರು ನಾಲಗೆ ಹಾರಿಸಿದರು. 

ತಪ್ಪು ತಿದ್ದುಕೊಂಡ ಸಚಿವರು: ಮಾಜಿ ಸಚಿವ ನಾಗೇಂದ್ರ ಅವರನ್ನು 'ಅಪರಾಧಿ' ಎಂದು ಕರೆದ ಹೇಳಿಕೆ ತಕ್ಷಣವೇ ಚರ್ಚೆಗೆ ಗ್ರಾಸವಾಯಿತು. ಸಚಿವರ ಪಕ್ಕದಲ್ಲಿದ್ದ ಶಾಸಕರು ತಕ್ಷಣವೇ ಈ ತಪ್ಪನ್ನು ಗಮನಕ್ಕೆ ತಂದ ಬಳಿಕ ಎಚ್ಚೆತ್ತುಕೊಂಡ ಶಿವಲಿಂಗೇಗೌಡರು, "ನಾಗೇಂದ್ರ ಆರೋಪಿ ಇರಬಹುದೆಂಬ ಶಂಕೆಯಿಂದ ರಾಜೀನಾಮೆ ಪಡೆಯಲಾಗಿತ್ತು" ಎಂದು ತಮ್ಮ ಹೇಳಿಕೆಯನ್ನು ತಿದ್ದುಕೊಂಡರು.  ಪ್ರಸ್ತುತ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷಗಳಿಗೆ ಮತ್ತೆ ಹೊಸ ಆಸ್ತ್ರ ಸಿಕ್ಕಂತಾಗಿದೆ. 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆ. 25ರಂದು ನೇರ ನೇಮಕಾತಿ ಸಂದರ್ಶನಆ.23ರಂದು ‘ನಾನು, ನೀನು ಮತ್ತು ಸ್ಕಿಜೋಫ್ರೇನಿಯಾ' ಕವನ ಸಂಕಲನ ಲೋಕಾರ್ಪಣೆಆದಿಜಾಂಬವ ಮಠದಲ್ಲಿ ಏಕಪಕ್ಷೀಯ ಸಮಾರಂಭ: ಸಮುದಾಯದ ಮುಖಂಡರಿಂದ ಕಾರ್ಯಕ್ರಮ ಬಹಿಷ್ಕಾರಕಾಯಕದಿಂದ ಮಾತ್ರ ಲಕ್ಷ್ಮಿ ಪ್ರಾಪ್ತಿ; ಶ್ರೀ ಮಾದರ ಚನ್ನಯ್ಯ ಸ್ವಾಮೀಜಿಕರ್ನಾಟಕದ ಬುಡಕಟ್ಟು ಸಮುದಾಯಗಳ ಹಕ್ಕು ಮತ್ತು ಅಭಿವೃದ್ಧಿಗೆ ಸಂಸದ ಗೋವಿಂದ ಕಾರಜೋಳ ಧ್ವನಿಹಿರಿಯ ನಟಿ, ಪದ್ಮಶ್ರೀ ಪುರಸ್ಕೃತೆ 'ಸಾಹುಕಾರ್ ಜಾನಕಿ' ನಿಧನ:ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಶಾಸಕರಿಂದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಕ್ವಿನ್ ಸಿಟಿಯಲ್ಲಿ ವಿದೇಶಿ ವಿವಿಗಳ ಕ್ಯಾಂಪಸ್, ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್: ಸಚಿವ ಎಂ.ಬಿ. ಪಾಟೀಲ್ ಘೋಷಣೆಐಸಿಎಐ 'ಸಂವಾದ' ಸಮ್ಮೇಳನ ಉದ್ಘಾಟನೆ: ಸಿಎ ವೃತ್ತಿಪರರ ಜ್ಞಾನ ಹಂಚಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಶ್ಲಾಘನೆಪ್ಯಾರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕೆ.ಎಸ್. ಶಿಲ್ಪಾಗೆ ಸನ್ಮಾನ: ಗ್ರೂಪ್ 'ಬಿ' ಉದ್ಯೋಗ ಘೋಷಣೆ