Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಾಸಕ ಎಂ. ಚಂದ್ರಪ್ಪ ಪುತ್ರನ ವಿವಾಹ ಆರತಕ್ಷತೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಭಾಗಿ

Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಹಿರಿಯ ಬಿಜೆಪಿ ಮುಖಂಡರಾದ ಎಂ. ಚಂದ್ರಪ್ಪ ಅವರ 2ನೇ ಪುತ್ರನ ವಿವಾಹ ಆರತಕ್ಷತೆ ಕಾರ್ಯಕ್ರಮವು ಭಾನುವಾರ ಅವರ ಶಾಲಾ ಆವರಣದಲ್ಲಿ ಅದ್ಧೂರಿಯಾಗಿ ಜರುಗಿತು. 

ಈ ಸಂಭ್ರಮದ ಕ್ಷಣಕ್ಕೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಸಾಕ್ಷಿಯಾದರು.

ಚಿತ್ರದುರ್ಗದಲ್ಲಿ ನಡೆದ ಈ ಸಮಾರಂಭಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ನೂತನ ವಧು-ವರರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಶುಭ ಹಾರೈಸಿದರು.
 "ನನ್ನ ಆತ್ಮೀಯರಾದ ಶಾಸಕ ಚಂದ್ರಪ್ಪ ಅವರ ಪುತ್ರನ ವಿವಾಹದ ಸಂಭ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ನೂತನ ದಂಪತಿಗಳ ಜೀವನ ಸುಖ-ಶಾಂತಿಯಿಂದ ಕೂಡಿರಲಿ
," ಎಂದು ಅವರು ಈ ಸಂದರ್ಭದಲ್ಲಿ ಹಾರೈಕೆಯ ಸಂದೇಶ ನೀಡಿದರು.

ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಶಾಸಕ ಎಂ. ಚಂದ್ರಪ್ಪ ಅವರ ಕುಟುಂಬದವರು
, ವಿವಿಧ ಮಠಗಳ ಸ್ವಾಮೀಜಿಗಳು, ಜೆಡಿಎಸ್ ಪಕ್ಷದ ಮುಖಂಡ ಎಂ.ರವೀಂದ್ರಪ್ಪ, ನಿಕಟಪೂರ್ವ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ,  ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಅಭಿಮಾನಿಗಳು ಹಾಗೂ ಅಪಾರ ಸಂಖ್ಯೆಯ ಹಿತೈಷಿಗಳು ಭಾಗವಹಿಸಿದ್ದರು. ಕುಮಾರಸ್ವಾಮಿ ಅವರು ಚಂದ್ರಪ್ಪ ಅವರ ಕುಟುಂಬದೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಕುಟುಂಬಸ್ಥರಿಗೆ ಶುಭ ಕೋರಿದರು.

ಚಿತ್ರದುರ್ಗ ಜಿಲ್ಲೆಯ ರಾಜಕೀಯ ವಲಯದ ಪ್ರಮುಖ ಗಣ್ಯರ ಆಗಮನದಿಂದ ಮದುವೆಯ ಅರತಕ್ಷತೆ ಕಾರ್ಯಕ್ರಮವು ಕಳೆಗಟ್ಟಿತ್ತು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್. ಜೆ. ಸಿ. ಎಸ್ ಪ್ರೌಢಶಾಲೆಗೆ ಶೇ. ನೂರು ಫಲಿತಾಂಶಟ್ರಾಕ್ಟರ್ ಬೈಕ್ ಡಿಕ್ಕಿ ಬೈಕ್ ಸವಾರರ ಸಾವುಬಡಪ್ಪನಕಟ್ಟೆ  ಕಥೆ ಭಾಗ-5: ಕುಮಾರ್ ಬಡಪ್ಪಸಮಯ ಬಂದಾಗ ಎಲ್ಲವೂ ಗೊತ್ತಾಗಲಿದೆ; ನಾಯಕತ್ವ ಬದಲಾವಣೆಗೆ ಶಿವಕುಮಾರ್ ಮಾರ್ಮಿಕ ನುಡಿಶೃಂಗೇರಿ ಅಂಚೆ ಮತಗಳ ಮರು ಎಣಿಕೆ: ಮೇ 2ಕ್ಕೆ ಹೈಕೋರ್ಟ್ ಆದೇಶದಂತೆ ಪ್ರಕ್ರಿಯೆ ಆರಂಭಟಿಸಿಎಸ್ ವರ್ಲ್ಡ್ 10K ಮ್ಯಾರಥಾನ್: ದಾಖಲೆ ಬರೆದ ಕ್ವಿಜೆರಾ; ಸಂಜೀವನಿ ಜಾಧವ್‌ಗೆ ಹ್ಯಾಟ್ರಿಕ್ ಸಾಧನೆಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ: ಡಿಸಿಎಂ ಶಿವಕುಮಾರ್ಸಾಂಬಾರ್ ಮಾಡಿಲ್ಲವೆಂದು ತಂದೆ ಬೈದಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ3ನೇ ಬಾರಿಯೂ ತಪ್ಪಿದ ವಿಮಾನದ ಸಕಾಲಿಕ ಲ್ಯಾಂಡಿಂಗ್; ಆಕಾಶದಲ್ಲೇ 40 ನಿಮಿಷ ಸುತ್ತಾಡಿದ ಪ್ರಯಾಣಿಕರು!ಹರಿಯಬ್ಬೆ ಕರ್ನಾಟಕ ಪಬ್ಲಿಕ್ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90.47 ಫಲಿತಾಂಶ: ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ