Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎನ್. ಎಸ್. ಎಸ್.ಶಿಬಿರ ಸಮಾರೋಪ ಸಮಾರಂಭ

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ದೊಡ್ಡತಿಮ್ಮನಹಳ್ಳಿ ಗ್ರಾಮದಲ್ಲಿ.  ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ 7  ದಿನಗಳ ಎನ್ಎಸ್ಎಸ್ ರಾಷ್ಟ್ರಿಯ ಭಾವೈಕ್ಯತಾ ಶಿಬಿರದ ಸಮಾರೋಪ ನಡೆಯಿತು. ವಿದ್ಯಾರ್ಥಿಗಳು   ಶಿಬಿರದಲ್ಲಿ  ಬಾಗವಹಿಸಿ   "ನಾನಲ್ಲ, ನೀನು ಎಂಬ ಧ್ಯೇಯವಾಕ್ಯದೊಂದಿಗೆ, ಸಮಾಜ ಸೇವೆ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಶಿಸ್ತು, ನಾಯಕತ್ವದ ಗುಣ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ಕಾರ್ಯಕ್ಕೆ ಸಾಕ್ಷಿಯಾದರು. 

ಶಿಬಿರದಲ್ಲಿ ಭಾರತೀಯ ಕಿಸಾನ್ ಸಂಘದ ತಾಲ್ಲುಕು ಅಧ್ಯಕ್ಷ ನೆಲ್ಲುಗೆದಿಗೆ ಚಂದ್ರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ 1969 ರಲ್ಲಿ ಗಾಂಧೀಜಿಯವರ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಾರಂಭವಾದ ಒಂದು ಪ್ರಮುಖಸಂಘಟನೆ. ಸ್ವಯಂಪ್ರೇರಿತರಾಗಿ ಶ್ರಮದಾನ ಜೊತೆಯಲ್ಲಿ ಗ್ರಾಮದಲ್ಲಿ ನೈರ್ಮಲ್ಯ ದಿಂದ ನೊಣ ಸೂಳ್ಳೆಗಳಿಂದ ಬರುವಂತ ಸಾಂಕ್ರಾಮಿಕ ರೋಗದಿಂದ ದೂರ ಉಳಿಯ ಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಮಾಡಿಕೊಳ್ಳುವುದರಿಂದ  ನಮ್ಮ ಅರೋಗ್ಯ ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕು.

ಗಿಡ ಮರಗಳನ್ನು ಬೆಳೆಸುವುದರಿಂದ ಪರಿಸರದಲ್ಲಿ ಭೂಮಿಯ ವಾತಾವರಣವು ಗುರುತ್ವಾಕರ್ಷಣೆ ಯಿಂದ ಹಿಡಿದಿಟ್ಟುಕೊಂಡಿರುವ  ಮುಖ್ಯವಾಗಿ  ನೈಟ್ರೋಜನ್ ಆಮ್ಲಜನಕ ಆವರಣವಾಗಿದ್ದು, ಇದು ಜೀವಿಗಳಿಗೆ ಅಗತ್ಯವಾದ ಆಮ್ಲಜನಕ, ರಕ್ಷಣಾತ್ಮಕ ಓಝೋನ್ ಪದರ ಮತ್ತು ತಾಪಮಾನ ನಿಯಂತ್ರಣವನ್ನು ಒದಗಿಸುತ್ತದೆ. ಇದು ಹವಾಮಾನ ಬದಲಾವಣೆ ಮತ್ತು ಮಣ್ಣಿನ ಸವಕಳಿಯಂತಹ ಪರಿಸರ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಬಹುದು ಭೂಮಿಯ ಮೇಲೆ ಜೀವ ಜಂತು ಪ್ರಾಣಿ ಪಕ್ಷಿ ಕೀಟಗಳು ಇರುವುದರಿಂದ ಮನುಷ್ಯ ಜೀವಿಸಲು ಸಾದ್ಯ ಅದರೆ ಕೊರೊನಾ ಸಂದರ್ಭದಲ್ಲಿ ನಮಗೆ ಪರಿಸರ ಎಷ್ಟು ಮುಖ್ಯ ಎಂಬುದು ಪ್ರಕೃತಿ ತಿಳಿಸಿ ಕೊಟ್ಟಿದೆ ಎಂಬುದು ಮರೆಯಬಾರದು ಎಂದರು. 

ಕಾರ್ಯಕ್ರಮದಲ್ಲಿ  ತೂಬಗೆರೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್,ಮಾಜಿ ಗ್ರಾ ಪಂ ಸದಸ್ಯ ಅಶ್ವತ್ಥಪ್ಪ , ಶಿಭಿರದ ಪ್ರಧಾನ ನಿರ್ದೇಶಕರಾದ ದೊಡ್ಡಬಳ್ಳಾಪುರ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಪ್ರೊ. ಮಾಯಾ ಸಾರಂಗ ಪಾಣಿ, ಐ.ಕ್ಯೂ.ಎ.ಸಿ.ಸಂಚಾಲಕರುಡಾ. ಸುಷ್ಮಾ ಹೆಚ್, ಆಂಗ್ಲ ವಿಭಾಗ ಮುಖ್ಯಸ್ಥ ಪ್ರೊ. ಸಂತೋಷ್ ಆರ್.ಎನ್ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರು ಡಾ| ಕುಮಾರ ನಾಯ್ಕ  ಶಿಬಿರದ ಗೌರವ ಸಲಹೆಗಾರರು ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಕೃಷ್ಣಾನಾಯ್ಕ, ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಡಾ| ಜ್ಯೋತಿ ಬನಹಟ್ಟಿ, ಶ್ರೀಮತಿ ಗೋಮತಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಮುಂತಾದವರು ಭಾಗವಹಿಸಿದ್ದರು.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳಾ ಮೀಸಲಾತಿ ವಿಧೇಯಕದ ಸೋಲು-ಕೆ.ಟಿ ಶ್ರೀನಿವಾಸ್"ಹೇ ಬಾಬಾ"- ಭವ್ಯಶ್ರೀ ಎಂ. ಸಹಾಯಕ ಪ್ರಾಧ್ಯಾಪಕರು.."ವಿಶ್ವಗುರು ಬಸವಣ್ಣ"- ಕೆ.ಎಸ್.ತಿಪ್ಪಮ್ಮಚಿತ್ರದುರ್ಗದ ರೇಷ್ಮೆ ಕೃಷಿ ಸಂಶೋಧನಾ ವಿಸ್ತರಣ ಕೇಂದ್ರಕ್ಕೆ ಈಗ 'ಪ್ರಾದೇಶಿಕ' ಮಾನ್ಯತೆ: ಸಂಸದ ಗೋವಿಂದ ಕಾರಜೋಳಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಶನ್ - ದಕ್ಷಿಣ ಭಾರತದ ಧ್ವನಿ ಅಡಗಿಸುವ ಯತ್ನವೇ? ಸಂಸದೆ ಡಾ. ಪ್ರಭಾಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಡ್ಡಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿಅಮೆರಿಕದಲ್ಲಿ ಮೊಳಗಿದ ಬಸವ ಸಂದೇಶಮಹಿಳಾ ಮೀಸಲಾತಿ ಮಸೂದೆಗೆ ಹಿನ್ನಡೆ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶಕುಮಾರಸ್ವಾಮಿ ಕಾರ್ಯದಕ್ಷತೆ: ತೆಲಂಗಾಣ ಸಿಎಂ ಹಾಗೂ ಕೇಂದ್ರ ಸಚಿವರೊಂದಿಗೆ ಮಹತ್ವದ ಭೇಟಿಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಅಡ್ಡಿ: 'ಅಸಲಿ ಮುಖ' ಬಯಲು ಆರೋಪ