ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾದಿಗ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಭಾನುವಾರ ಬೆಳಗ್ಗೆ 10:30ಕ್ಕೆ ಎಂ.ಪಿ ಕಾರ್ಯಾಲಯದ ಆವರಣ, ಹೊಸ ಪ್ರವಾಸಿ ಮಂದಿರ, ವಿ.ಪಿ ಬಡಾವಣೆ ಚಿತ್ರದುರ್ಗ ಇಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ಜಿ.ಹೆಚ್ ಸಿದ್ಧಾರ್ಥ ಗುಂಡಾರ್ಪಿ, ಬಿಜೆಪಿ ಮುಖಂಡ, ಉದ್ಯಮಿ ಬಿ.ಆರ್. ಅನಿತ್ ಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಬಿಜೆಪಿ ಮುಖಂಡರಾದ ಸೌಭಾಗ್ಯ ಬಸವರಾಜನ್ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ನಿರ್ವಹಣೆ:
ಪ್ರಾರ್ಥನೆ: ಕಲಾವಿದರು, ಗುತ್ತಿನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ.ಓ ಮುರಾರ್ಜಿ ಪ್ರಾರ್ಥನೆ ಮಾಡುವರು. ಸ್ವಾಗತ ಭಾಷಣ: ನಾಗರಾಜ. ಹೆಚ್,ಪ್ರಾಸ್ತಾವಿಕ ನುಡಿ: ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಪ್ಪ. ಬಿ. ನಿವೃತ್ತ ಪ್ರಾಧ್ಯಾಪಕ ಎಲ್. ನಾಗರಾಜಪ್ಪ ನಿರೂಪಿಸಲಿದ್ದಾರೆ. ಮಾಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ್ ಹೆಚ್. ಓ. ವಂದಿಸಲಿದ್ದಾರೆ.
ಸಭೆಯ ಉಸ್ತುವಾರಿಯನ್ನು ಬಿಜೆಪಿ ಕಾರ್ಯಕರ್ತ ಚೇತನ್ ಕುಮಾರ್. ಆರ್ ನೋಡಲಿದ್ದಾರೆ. ಕ್ಷೇತ್ರದ ಬಿಜೆಪಿ ಮಾದಿಗ ಕಾರ್ಯಕರ್ತರು ಈ ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೋರಲಾಗಿದೆ.



