Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾವು ಬೆಳೆಗಾರರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ: ಪ್ರತಿ ಕ್ವಿಂಟಾಲ್‌ಗೆ 437.50 ಸಹಾಯಧನ ಘೋಷಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಗಲ್ಫ್ ಯುದ್ಧದ ಪರಿಣಾಮದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮಾವು ಬೆಳೆಗಾರರ ಹಿತರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿ ಪ್ರತಿ ಕ್ವಿಂಟಾಲ್ ಮಾವಿಗೆ 437.50 ನೇರ ಆರ್ಥಿಕ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.

ಈ ನಿರ್ಧಾರದಿಂದಾಗಿ ತಲಾ 200 ಕ್ವಿಂಟಾಲ್‌ವರೆಗೆ ಮಾವು ಬೆಳೆದ ಪ್ರತಿಯೊಬ್ಬ ಬೆಳೆಗಾರನಿಗೂ ನೇರ ಆರ್ಥಿಕ ನೆರವು ಸಿಗಲಿದೆ.

​ಕೇಂದ್ರದ ಪಾಲು ಸೇರಿ ₹58 ಕೋಟಿ ಭರಿಸಲಿರುವ ರಾಜ್ಯ!
​ಮಾರುಕಟ್ಟೆ ಹಸ್ತಕ್ಷೇಪಕ್ಕಾಗಿ ರಾಜ್ಯ ಸರ್ಕಾರವು ತನ್ನ ಪಾಲಿನ 29 ಕೋಟಿ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲಿದೆ. ಇದರೊಂದಿಗೆ, ಕೇಂದ್ರ ಸರ್ಕಾರದಿಂದ ಬರಬೇಕಾದ ಸಹಾಯಧನ ವಿಳಂಬವಾಗಿ ರೈತರು ತೊಂದರೆಗೆ ಸಿಲುಕುವುದನ್ನು ತಪ್ಪಿಸಲು ಮುಖ್ಯಮಂತ್ರಿಗಳು ಬಿಗ್ ಗಿಫ್ಟ್ ನೀಡಿದ್ದಾರೆ. ಕೇಂದ್ರದ ಪಾಲಿನ 29 ಕೋಟಿ ಹಣವನ್ನೂ ಸಹ ಸದ್ಯಕ್ಕೆ ರಾಜ್ಯ ಸರ್ಕಾರವೇ ಮೊದಲು ಪಾವತಿಸಲು ತೀರ್ಮಾನಿಸಿದೆ. ಇದರಿಂದಾಗಿ ಒಟ್ಟು 58 ಕೋಟಿ ಹಣವನ್ನು ಬಿಡುಗಡೆ ಮಾಡಿ ರೈತರ ಕೈ ಹಿಡಿಯಲು ಸರ್ಕಾರ ಮುಂದಾಗಿದೆ.

​"ರಾಜ್ಯದ ರೈತರ ಹಿತಕಾಪಾಡುವ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿಯಿಲ್ಲದ ಬದ್ಧತೆ ಹೊಂದಿದೆ. ಸಂಕಷ್ಟದ ಸಮಯದಲ್ಲಿ ರೈತರಿಗೆ ಸಕಾಲದಲ್ಲಿ ಸಾಧ್ಯವಾಗುವ ಎಲ್ಲಾ ರೀತಿಯ ಸಹಾಯವನ್ನು ಮಾಡಲು ನಮ್ಮ ಸರ್ಕಾರ ಸದಾ ಸಿದ್ಧವಾಗಿದೆ."
ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ.

​ಈ ಯೋಜನೆಯು ಗಲ್ಫ್ ಬಿಕ್ಕಟ್ಟಿನಿಂದಾಗಿ ರಫ್ತು ಪ್ರಕ್ರಿಯೆಯಲ್ಲಿ ತೊಂದರೆ ಅನುಭವಿಸಿ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಮಾವು ಬೆಳೆಗಾರರಿಗೆ ದೊಡ್ಡ ಮಟ್ಟದ ಸಮಾಧಾನ ತರಲಿದೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿತ್ರದುರ್ಗಕ್ಕೆ ಆಗಮಿಸಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಗುರು ಸದ್ಗುರು ಶ್ರೀ  ಜಗ್ಗಿ ವಾಸುದೇವ್ಹಾಡೋನಹಳ್ಳಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆಕೆಂಪೇಗೌಡರ ಜಾತ್ಯತೀತ ಕಲ್ಪನೆ ಇಂದಿಗೂ ಆದರ್ಶ-ಡಾ.ಕೆ.ಸುಧಾಕರ್ಪಲ್ಸ್ ಪೋಲಿಯೋ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆಹಿರಿಯ ಪತ್ರಕರ್ತ, ನಿರ್ದೇಶಕ ಎನ್.ಎಸ್.ಶಂಕರ್ ನಿಧನ: ಕೆಯುಡಬ್ಲ್ಯೂಜೆ ತೀವ್ರ ಸಂತಾಪಯೋಗಭ್ಯಾಸವು ಮಾನವನಲ್ಲಿ ಅಳತೆ ಮತ್ತು ಪ್ರಮಾಣಗಳ ವಿವೇಕಜ್ಞಾನ ಮೂಡಿಸುತ್ತದೆ: ಯೋಗಾಚಾರ್ಯ ಚಿನ್ಮಯಾನಂದಜೆಡಿಎಸ್ ಬೂತ್ ಮಟ್ಟದ ಏಜೆಂಟರ ಕಾರ್ಯಾಗಾರ: ಮುಂಬರುವ ಚುನಾವಣಾ ಸಿದ್ಧತೆ ಕುರಿತು ತೀವ್ರ ಚರ್ಚೆಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಬಿಜೆಪಿಯಿಂದ 'ಮತ ದ್ರೋಹ': ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪಹಸಿರು ಅಭಿಯಾನಕ್ಕೆ ಜಾಗತಿಕ ಗಿನ್ನಿಸ್ ರೆಕಾರ್ಡ್ ಮನ್ನಣೆ: ಮುಖ್ಯಮಂತ್ರಿ ಶಿವಕುಮಾರ್ ಹೆಮ್ಮೆಯ ಘೋಷಣೆಕಾರ್ಮಿಕರ ಘನತೆ, ಹಕ್ಕುಗಳ ರಕ್ಷಣೆಗೆ ಕರ್ನಾಟಕ ಬದ್ಧ: ಮುಖ್ಯಮಂತ್ರಿ ಶಿವಕುಮಾರ್