ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಾಲ್ಮದಲ್ಲಿಯೇ ಜನಿವಾರವ
ಕಿತ್ತೊಗೆದು ಜಾತಿ ಬೇಧದ
ಪೊರೆಯ ಕಳಚಲೆತ್ನಿಸಿದ
ಜಗದನಾಯಕ ಬಸವಣ್ಣ।।
ಮೌಢ್ಯತೆಯ ಕಿತ್ತೊಗೆದು
ವೈಚಾರಿಕತೆಯ ಬೆಳೆಸಿದ
ಮಹಾನಾಯಕ ಚಿಂತಕ
ವಿಶ್ವಗುರು ಬಸವಣ್ಣ।।
ಹರಳಯ್ಯ ಮಧುವರಸರ
ಮಕ್ಕಳಿಗೆ ಶುಭ ಲಗ್ನವ
ಮಾಡಿಸಿದ ಸಮಾನತೆಯ
ತತ್ವಕಾರ ಬಸವಣ್ಣ।।
ಅನುಭವ ಮಂಟಪದಿ
ಅಕ್ಕನ ವೈರಾಗ್ಯ ಪ್ರಶ್ನಿಸಿದ
ಅಲ್ಲಮಪ್ರಭುವಿನ ದಿಟ್ಟತನ
ಜಗತ್ತಿಗೆ ಬೆಳಕಾಯಿತಣ್ಣ।।
ಕಾಯಕವೇ ಕೈಲಾಸವೆಂದು
ದಾಸೋಹವೇ ದೇವರೆಂದು
ಅಂತರಂಗ ಬಹಿರಂಗ ಶುದ್ಧಿಗಳ
ಅರುಹಿದ ಮಹಾಶರಣ ಬಸವಣ್ಣ।।
ಇವ ನಮ್ಮವ ಇವ ನಮ್ಮವ
ಎನುತ ಮಾನವೀಯತೆಯ
ಮೆರೆದ ಯುಗಪುರುಷ ನೀ
ಜಗದಲೆಂದು ಅಜರಾಮರ।।
ಕವಿತೆ-ಕೆ.ಎಸ್.ತಿಪ್ಪಮ್ಮ ನಾಗರಾಜು, ಚಿತ್ರದುರ್ಗ.


