ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೊಕಿನತೂಬಗೆರೆ ಹೋಬಳಿಯಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಇಲಾಖೆ ವತಿಯಿಂದ ಮೇಲಿನ ಜೂಗಾನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಭೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮೇಲಿನ ಜೂಗಾನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮಿತಾ ಮಾತನಾಡಿ ನಮ್ಮ ಪರಿಸರದಲ್ಲಿ ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು ಅಥವಾ ವಿಶೇಷ ಸಂದರ್ಭಗಳಲ್ಲಿ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು, ಅದನ್ನು ಮರವಾಗುವವರೆಗೆ ಪೋಷಿಸಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ಗಿಡಗಳನ್ನು ನೆಟ್ಟು ಸಣ್ಣ ಪ್ರಯತ್ನಗಳ ಮೂಲಕ ದೊಡ್ಡ ಬದಲಾವಣೆಯನ್ನು ತರಲು ಸಾಧ್ಯವಿದೆ.ಕೊನೆಯದಾಗಿ, ಪ್ರಕೃತಿಯಿಲ್ಲದೆ ಮಾನವನ ಅಸ್ತಿತ್ವವಿಲ್ಲ. ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾವೆಲ್ಲರೂ ಒಟ್ಟಾಗಿ ಕೈಜೋಡಿಸಿ, ನಮ್ಮ ಭೂಮಿಯನ್ನು ಹಸಿರು ಮಯವಾಗಿಡಲು ಪ್ರತಿಜ್ಞೆ ಮಾಡೋಣ ಎಂದರು.
ಜಿಲ್ಲಾ ಮಿಷನ್ ಶಕ್ತಿ ಸಂಯೋಜಕರಾದ ರಾಜಶೇಖರ್ ಮಾತನಾಡಿ ಬಾಲ್ಯ ವಿವಾಹವು ಮಕ್ಕಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಸಾಮಾಜಿಕ ಪಿಡುಗು. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ನಡೆಯುವ ವಿವಾಹಗಳು ಹೆಣ್ಣುಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿಲಿದೆ ಎಂದರು.
ಕಾರ್ಯಕ್ರಮದಲ್ಲಿ ಮೇಲಿನ ಜೂಗಾನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮಿತಾ , ಜಿಲ್ಲಾ ಮಹಿಳಾ ಮಿಷನ್ ಶಕ್ತಿ ಸಂಯೋಜಕರಾದ ರಾಜ ಶೇಖರ್, ಜಿಲ್ಲಾ ಮಿಷನ್ ಶಕ್ತಿ ಫೈನಾನ್ಸಿಯಲ್ ಲಿಟ್ರಸಿ ಅಂಡ್ ಅಕೌಂಟೆಂಟ್ ಸುರೇಶ್, ಮೇಲಿನ ಜೂಗಾನಹಳ್ಳಿ ಬಿಲ್ ಕಲೆಕ್ಟರ್ ಶ್ರೀನಿವಾಸ ಯಾದವ್, ಅಕ್ಕ ಪಡೆ ಸಿಬ್ಬಂದಿ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೊಹ್ಸಿನ್ ತಾಜ್, ಎಸ್.ಡಿ ಎಂ ಸಿ ಸದಸ್ಯರು, ಪಂಚಾಯತಿ ಮಾಜಿಸದಸ್ಯರು, ,ಅಂಗನವಾಡಿ ಕಾರ್ಯಕರ್ತೆಯರು, ಶಾಲೆಯ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



