ಚಿತ್ರದುರ್ಗದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಛೇರಿ ತೆರೆಯಿರಿ: ಸಂಸದ ಕಾರಜೋಳ

News Desk

ಚಿತ್ರದುರ್ಗದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಛೇರಿ ತೆರೆಯಿರಿ: ಸಂಸದ ಕಾರಜೋಳ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಕಛೇರಿಯನ್ನು ತೆರೆಯಬೇಕು ಎಂಬುದು ಬಹಳ ದಿನಗಳ ಬೇಡಿಕೆಯಾಗಿದೆ.

ಈ ಕುರಿತು ಈ ಹಿಂದಿನ ಸಂಸದರು ಹಾಗೂ ಸಚಿವರಾಗಿದ್ದ ಎ.ನಾರಾಯಣಸ್ವಾಮಿಯವರು ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

ಸದರಿ ಮನವಿಗೆ ಉತ್ತರವಾಗಿ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಸಂಸದರಿಗೆ ಪತ್ರ ಬರೆದು ನಾಲ್ಕೈದು ತಿಂಗಳಲ್ಲಿ ಪ್ರಾದೇಶಿಕ ಕಛೇರಿಯನ್ನು ತೆರೆಯುವುದಾಗಿ ೨೦೨೧ ರಲ್ಲಿ ತಿಳಿಸಿದ್ದರು. ಆದರೆ, ನಾಲ್ಕು ವರ್ಷ ಕಳೆದರೂ ಈ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದುರಿಂದ ಸಂಸದರಾದ ಗೋವಿಂದ ಕಾರಜೋಳರವರು ಜನರಲ್ ಮ್ಯಾನೇಜರ್, ಎಸ್.ಬಿ.ಐ ಬೆಂಗಳೂರು ಇವರಿಗೆ ಈ ಹಿಂದಿನ ಕ್ರಮವನ್ನು ನೆನಪಿಸಿ ಆದಷ್ಟು ಶೀಘ್ರವಾಗಿ ಎಸ್.ಬಿ.ಐ. ಪ್ರಾದೇಶಿಕ ಕಛೇರಿ ತೆರೆಯುವಂತೆ ಒತ್ತಾಯ ಮಾಡಿದ್ದಾರೆ.

ಚಿತ್ರದುರ್ಗವು ಗಮನಾರ್ಹ ಜನಸಂಖ್ಯೆ ಹೊಂದಿದ್ದು, ಉತ್ತಮ ಆರ್ಥಿಕತೆಯೊಂದಿಗೆ ಅಭಿವೃದ್ದಿ ಹೊಂದುತ್ತಿರುವ ನಗರವಾಗಿದೆ, ನಮ್ಮ ಜನಗಳ ಆರ್ಥಿಕ ಪ್ರಗತಿಗಾಗಿ ಚಿತ್ರದುರ್ಗದಲ್ಲಿ ಎಸ್.ಬಿ.ಐ. ಪ್ರಾದೇಶಿಕ ಕಛೇರಿ ಹೊಂದುವುದು ಅತ್ಯಗತ್ಯವಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ಪ್ರಾದೇಶಿಕ ಕಛೇರಿಯನ್ನು ಚಿತ್ರದುರ್ಗದಲ್ಲಿ ತೆರೆಯುವುದರಿಂದ ಚಿತ್ರದುರ್ಗದ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಹೆಚ್ಚಿಸುವುದಲ್ಲದೇ ದೇಶದ ಆರ್ಥಿಕ ಪ್ರಗತಿಗೆ ನೀವೂ ಸಹ ಸಹಕರಿಸದಂತಾಗುತ್ತದೆ ಎಂಬುದನ್ನು ಪತ್ರದಲ್ಲಿ ವಿವರಿಸಿದ್ದಾರೆ. ಆದಷ್ಟು ತ್ವರಿತವಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಸದರು ಪತ್ರದಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";