ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದ ಬಳಿ ಇರುವ ಜಿಲ್ಲಾ ಸ್ತ್ರೀಶಕ್ತಿ ಶಾಪಿಂಗ್ ಕಾಂಪ್ಲೆಕ್ಸ್‍ನಲ್ಲಿನ ಲಿಡ್‍ಕರ್ ಲೆದರ್ ಎಂಪೋರಿಯಂ ನ ಮಾರಾಟ ಮಳಿಗೆಯಲ್ಲಿ ವರ್ಷಾಂತ್ಯದ ತೀರುವಳಿ ಪ್ರಯುಕ್ತ ಅಪ್ಪಟ ಚರ್ಮದ ಬ್ರಾಂಡೆಡ್ ಉತ್ಪನ್ನಗಳು ಮಾ. 03 ರಿಂದ 23 ರವರೆಗೆ ಶೇ. 20 ರಿಯಾಯಿತಿ ದರದಲ್ಲಿ ದೊರೆಯಲಿದೆ.
ಡಾ.ಬಾಬು ಜಗಜೀವನ ರಾಂ ಅಭಿವೃದ್ಧಿ ನಿಗಮ ನಿಯಮಿತದ ಲಿಡ್ಕರ್ ಲೆದರ್ ಎಂಪೋರಿಯಂ ಮಾರಾಟ ಮಳಿಗೆಯಲ್ಲಿ ವರ್ಷಾಂತ್ಯದ ತಿರುವಳಿ ಪ್ರಯುಕ್ತ 20% ರಿಯಾಯಿತಿ ದರದಲ್ಲಿ ಗುಣಮಟ್ಟ ಹೊಂದಿರುವ ಚರ್ಮದ ಬ್ರಾಂಡೆಡ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9380501076 ಕ್ಕೆ ಸಂಪರ್ಕಿಸಬಹುದು ಎಂದು ಲಿಡ್‍ಕರ್ ಲೆದರ್ ಎಂಪೋರಿಯಂ ನ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.