ಕನ್ನಡ ದ್ರೋಹಿ ಸಿದ್ದರಾಮಯ್ಯ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ದ್ರೋಹಿ ಸಿದ್ದರಾಮಯ್ಯ! ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ ರಾಜಕಾರಣ ಮಾಡಲು ಸಮಯವಿದೆ.

ಎಐಸಿಸಿ ಅಧಿವೇಶನಕ್ಕೆ ಹೋಗಲು ಸಮಯವಿದೆ. ಜಾತಿ ಜನಗಣತಿ ನೆಪದಲ್ಲಿ ವಿಶೇಷ ಸಂಪುಟ ಸಭೆ ಕರೆದು ಜನರ ದಿಕ್ಕು ತಪ್ಪಿಸಲು ಸಮಯವಿದೆ. ಸ್ಟೇಡಿಯಂಗೆ ಹೋಗಿ ಐಪಿಲ್ ಮ್ಯಾಚ್ ನೋಡಲು ಸಮಯವಿದೆ. ಆದರೆ 2024-25 ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಶಸ್ತಿಗಳು ಪ್ರಕಟವಾಗಿ ಎರಡು ತಿಂಗಳಾದರೂ ಪ್ರಶಸ್ತಿ ಪ್ರದಾನಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು

ಸಿಎಂ ಸಿದ್ದರಾಮಯ್ಯ ನವರೇ, ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ನೆಲ ಜಲ ಅಂದರೆ ನಿಮಗೆ ಯಾಕಿಷ್ಟು ತಾತ್ಸಾರ? ಅಥವಾ ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ಕೊಡಲೂ ಸಾಧ್ಯವಾಗದಷ್ಟು ದಿವಾಳಿ ಆಗಿದೆಯೇ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

 

Share This Article
error: Content is protected !!
";