ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇದೇನ್ರಿ ಸಿದ್ದರಾಮಯ್ಯ? ಪಾಕಿಸ್ತಾನದ ಮೇಲಿನ ನಿಮ್ಮ ಪ್ರೇಮ, ಪಾಕಿಸ್ತಾನದ ಮಾಧ್ಯಮಗಳಲ್ಲಿಯೂ ಕೊಂಡಾಡುತ್ತಿದ್ದಾರೆ.
ಮನೆಗೆ ಮಾರಿ ಪರರಿಗೆ ಉಪಕಾರಿ ಎಂಬಂತೆ ಬಾಂಧವರ ಮೇಲೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣ ಈಗ ಉಗ್ರ ಪೋಷಕ ಪಾಕಿಸ್ತಾನ, ಭಾರತದ ವಿರುದ್ಧವೇ ಧ್ವನಿ ಎತ್ತುವಂತೆ ಮಾಡಿದೆ ಎಂದು ಜೆಡಿಎಸ್ ಆರೋಪಿಸಿದೆ.
ಸಿದ್ದರಾಮಯ್ಯ ಅವರೇ ಮುಂದೆ ನಿಮಗೆ ಪಾಕಿಸ್ತಾನ ಸರ್ಕಾರ ಗೋಲ್ಡನ್ ವಿಸಾ ಕೊಟ್ಟು, ಅಲ್ಲಿನ ಪೌರತ್ವ ನೀಡಿ ಸನ್ಮಾನಿಸಿದರೂ ಆಶ್ಚರ್ಯವಿಲ್ಲ.
ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ನಡೆಸಿದ ಪಾಪಿ ಪಾಕಿಸ್ತಾನದ ಮತಾಂಧ ಉಗ್ರರಿಗೆ ಮಿಡಿಯುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರ ಹೃದಯಗಳು, ಭಾರತೀಯರಿಗೆ ಹೃದಯವನ್ನು ಘಾಸಿಗೊಳಿಸುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.