ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ದಾಖಲೆ ಗಾತ್ರದ ಬಜೆಟ್‌ಮಂಡಿಸಿದ್ದಾರೆ. ಹಾಗೇ ಸಾಲ ಪ್ರಮಾಣವು ದಾಖಲೆಯಾಗಿದೆ. ರಾಜ್ಯದ ಮೇಲೆ ಸಾಲದ ಹೊರೆ ಶೇ.7.6 ಲಕ್ಷ ಕೋಟಿ ಹೆಚ್ಚಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಸಾಲದ ಹೊರೆ ತಗ್ಗಿಸುವ ಸಲುವಾಗಿ ಯಾವುದೇ ಹಣಕಾಸು ಸಚಿವರು ಯಾವುದೇ ಹೊಸ ಕಾರ್ಯಕ್ರಮ ಘೋಷಿಸದಿರುವುದು ಕಳವಳಕಾರಿಯಾಗಿದೆ. ಒಟ್ಟು ಈ ಬಜೆಟ್‌ನಲ್ಲಿ ಸರ್ಕಾರದ ಬದ್ಧವೆಚ್ಚ ಗ್ಯಾರಂಟಿಗಳ ಯೋಜನೆ ಮೊತ್ತ ಕೂಡ ಬಜೆಟ್ನ ಶೇ.80ರಷ್ಟು ಆಗಿದೆ. ಇದರಿಂದ ಬಂಡವಾಳ ವೆಚ್ಚಕ್ಕೆ ಕಡಿಮೆ ಅನುದಾನ ಸಿಗುತ್ತಿದೆ. 2025-26ರ ಸಾಲಿನಲ್ಲಿ ರಾಜ್ಯ ಸರ್ಕಾರವು ಒಟ್ಟು 45 ಸಾವಿರಕ್ಕೂ ಅಧಿಕ ಬಡ್ಡಿ ಪಾವತಿಸಬೇಕಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
2027-28ಕ್ಕೆ ಸುಮಾರು 60 ಸಾವಿರ ಕೋಟಿಗೂ ಅಧಿಕ ಬಡ್ಡಿಗೆ ಮೀಸಲಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 2028ಕ್ಕೆ ರಾಜ್ಯದ ಒಟ್ಟು ಸಾಲ 9 ಲಕ್ಷ ಕೋಟಿಗೂ ಅಧಿಕವಾಗಲಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.