ಸ್ಥಗಿತಗೊಂಡ ಸಹಕಾರ ಸಂಘಗಳ ಸಮಾಪನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಸಹಕಾರ ಸಂಘಗಳು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, ನಿಯಮ, ಮತ್ತು ಸಂಘಗಳ ಬೈಲಾ ಪ್ರಕಾರ ಕಾರ್ಯನಿರ್ವಹಿಸದೇ ಸ್ಥಗಿತವಾಗಿರುವ ಕಾರಣ ಸಮಾಪನೆಗೊಳಿಸಲು ಕ್ರಮವಹಿಸಲಾಗಿದೆ. 

ಸದಸ್ಯರಿಂದ ಹಾಗೂ ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಪತ್ರಿಕಾ ಪಕಟಣೆಯಾದ 07 ದಿನಗಳೊಳಗಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಬಿ.ಎಲ್.ಗೌಡ ಲೇ ಔಟ್, ಚಿತ್ರದುರ್ಗ ಇವರಿಗೆ ಸಲ್ಲಿಸಲು ತಿಳಿಸಿದೆ.

- Advertisement - 

2025ರ ಜುಲೈ 31ರ ಅಂತ್ಯಕ್ಕೆ ಇದ್ದಂತೆ ಸಹಕಾರ ಸ್ಥಗಿತ ಸಂಘಗಳ ವಿವರ ಇಂತಿದೆ.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದನಾ ಮತ್ತು ಮಾರಾಟಗಾರರ ಸಹಕಾರ ಸಂಘ, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ನೇಲಗೇತನಹಟ್ಟಿ ಚನ್ನಕೇಶವಸ್ವಾಮಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ಜಾಜೂರು ಮಹಿಳಾ ಸಹಕಾರ ಸಂಘ,

ಪರಶುರಾಂಪುರ ಕರ್ನಾಟಕ ಸಹಕಾರ ಸಂಘ, ವೆಂಕಟಾಪುರ, ಜಾಗೀರ್‍ಬುಡ್ಡೆನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ರಾಯಪುರ, ಸೋಮೇನಹಳ್ಳಿ, ಭೈರಾಪುರ ಹಾಲು ಉತ್ಪಾದಕರ ಸಹಕಾರ ಸಂಘ, ಬೋಮ್ಮಲಿಂಗನಹಳ್ಳಿ ನುಂಕೇಮಲೆಸಿದ್ದೇಶ್ವರ ಮೀನುಗಾರಿಕೆ ಸಹಕಾರ ಸಂಘ, ಮೊಳಕಾಲ್ಮೂರು ಟೌನ್ ರೇಷ್ಮೆ ಕೈಮಗ್ಗದ ನೇಕಾರರ ಉತ್ಪಾದನಾ ಮತ್ತು ಮಾರಾಟಗಾರರ ಸಂಘ, ಐಮಂಗಲ ಎಣ್ಣೆ ಬೀಜ ಬೆಳೆಗಾರರ ಸಂಘ, ಚನ್ನಯ್ಯನಹಟ್ಟಿ ಶ್ರೀ ಚಿತ್ರಲಿಂಗೇಶ್ವರಸ್ವಾಮಿ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಮತ್ತು ಮಾರಾಟಗಾರರ ಸಂಸ್ಕರಣಾ ಸಹಕಾರ ಸಂಘ,

- Advertisement - 

ಸೊಂಡೆಕರೆ ಕನಕಶ್ರೀ ಕುರಿ ಮತ್ತು ಉಣ್ಣೇ ಉತ್ಪಾದಕರ ಸಹಕಾರ ಸಂಘ, ಗೂಡನೂರನಹಳ್ಳಿ, ಪರಮೇನಹಳ್ಳಿ ಕೋಳಿ ಸಾಕಾಣಿಕೆದಾರರ ಮತ್ತು ಮಾರಾಟಗಾರರ ಸಹಕಾರ ಸಂಘ, ಜವನಗೊಂಡನಹಳ್ಳಿ ಶ್ರೀ ದೇವಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ಖಂಡೇನಹಳ್ಳಿ ಪಾಳ್ಯ, ತಾಳವಟ್ಟಿ ಹಾಲು ಉತ್ಪಾದಕರ ಸಂಘ, ಆದಿವಾಲ ವಿ.ವಿ.ಸಾಗರ ಜಲಾಶಯ ನೀರು ಬಳಕೆದಾರರ ಸಂಘ, ಉಪ್ಪಳಗೆರೆ, ರಂಗನಾಥ ಪುರ ವಿ.ವಿ.ಸಾಗರ ಸಣ್ಣ ನೀರಾವರಿ ನೀರು ಬಳಕೆದಾರರ ಸಂಘ, ಜವಗೊಂಡನಹಳ್ಳಿ ಸಿದ್ದಿವಿನಾಯಕ ನೀರು ಬಳಕೆದಾರರ ಸಹಕಾರ ಸಂಘ,

ಮಸ್ಕಲ್  ಕರಿಯಮ್ಮ ಗ್ರಾಮ ದೇವತೆ ನೀರು ಬಳಕೆದಾರರ ಸಂಘ, ಕರಿಯಾಲ ಗಾಯತ್ರಿ ನೀರು ಬಳಕೆದಾರರ ಸಂಘ, ಬಿದರಕೆರೆ, ಹೊಸಯಳನಾಡು ನೀರು ಬಳಕೆದಾರರ ಸಹಕಾರ ಸಂಘ, ಕೂಡ್ಲಹಳ್ಳಿ ಪಾರ್ಥಲಿಂಗೇಶ್ವರ ನೀರು ಬಳಕೆದಾರರ ಸಂಘ, ಮಸ್ಕಲ್‍ಮಟ್ಟಿ ವಿನಾಯಕ ನೀರು ಬಳಕೆದಾರರ ಸಹಕಾರ ಸಂಘ, ವಾಣಿವಿಲಾಸಪುರ ನೀರು ಬಳಕೆದಾರರ ಸಹಕಾರ ಸಂಘ, ಲಕ್ಕವ್ವನಹಳ್ಳಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ನೀರು ಬಳಕೆದಾರರ ಸಹಕಾರ ಸಂಘ, ಹರ್ತಿಕೋಟೆ ಹತ್ತಿ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ, ಹಿರಿಯೂರು ಗಿರಿಜನ ಮಹಿಳಾ ವಿವಿದೊದ್ದೇಶ ಸಹಕಾರ ಸಂಘ, ಹೊಳಲ್ಕೆರೆ ಶ್ರೀ ವಿಜಯ ಸಂಗಮ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ,

ರಾಮಗಿರಿ ಹಾಲು ಉತ್ಪಾದಕರ ಸಹಕಾರ ಸಂಘ, ವನಕೆ ಮರಡಿ ಕಾವಲ್ ಅಂಜನಾಪುರ ಸಂಯುಕ್ತ ಬೇಸಾಯ ಸಹಕಾರ ಸಂಘ, ಚಿಕ್ಕಜಾಜೂರು ಕಾಟನ್ ಹ್ಯಾಂಡ್ ಲೂಮ್ ವೀವರ್ಸ್ ಕೋ ಆಪರೇಟಿವ್ ಪ್ರೋಡಕ್ಷನ್ ಅಂಡ್ ಸೇಲ್ಸ್ ಸೋಸೈಟಿ, ಹೊಳಲ್ಕೆರೆ ಕುಂಬಾರ ಕುಶಲ ಕೈಗಾರಿಕೆ ಸಹಕಾರ ಸಂಘ, ಹೊಳಲ್ಕೆರೆ ವಿಶ್ವಪ್ರಿಯ ಮಹಿಳಾ ಸಹಕಾರ ಸಂಘ, ಹೊಸಕೆರೆ ಹಾಲು ಉತ್ಪಾದಕರ ಸಹಕಾರ ಸಂಘ, ಹೊಸದುರ್ಗ ಶ್ರೀಗುರು ಒಪ್ಪತ್ತಿನಸ್ವಾಮಿ ಪತ್ತಿನ ಮಹಿಳಾ ಗ್ರಾಹಕರ ಸಹಕಾರ ಸಂಘಗಳು ಬೈಲಾ ಪ್ರಕಾರ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿದ್ದು, ಇವುಗಳನ್ನು ಸಮಾಪನೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

 

 

Share This Article
error: Content is protected !!
";