ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸಾಕಪ್ಪ ಸಾಕು, ಕಾಂಗ್ರೆಸ್‌ಸರ್ಕಾರ” ದರಾಸುರ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಗ್ಯಾರಂಟಿ ಮೂಲಕವೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಅದು ಯಾವ ಪರಿ ಎಂದರೇ ಕಸ ಸಂಗ್ರಹ ನೆಪದಲ್ಲಿ ಜನಸಾಮಾನ್ಯರಿಂದ ಸಾವಿರಾರು ಕೋಟಿ ರೂ. ವಸೂಲಿಗೆ ಇಳಿದಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
30*40 ಅಳತೆಯ ನಿವೇಶನಕ್ಕೆ 2024ರಲ್ಲಿ ಘನ ತ್ಯಾಜ್ಯ ಉಪಕರ 600 ರೂ. ವಿಧಿಸಲಾಗುತ್ತಿತ್ತು. 2025ರಲ್ಲಿ ಹೊಸ ಆದೇಶದ ಪ್ರಕಾರ 30*40 ಅಳತೆಯ ನಿವೇಶನಕ್ಕೆ ಬರೋಬ್ಬರಿ 3,000 ರೂ. ವಸೂಲಿ ಮಾಡಲಾಗುತ್ತಿದೆ.
ಬ್ರ್ಯಾಂಡ್‌ಬೆಂಗಳೂರು ಹೆಸರಲ್ಲಿ ಹಗಲು ದರೋಡೆ ಮಾಡುತ್ತಿರುವ ಡಿ.ಕೆ ಶಿವಕುಮಾರ್ ಬೆಂಗಳೂರನ್ನು “ತೆರಿಗೆಯೂರು” ಮಾಡಿದ್ದೆ ಸಾಧನೆಯಾಗಿದೆ.
ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು ಇನ್ನೂ ದುರಸ್ತಿಯಾಗಿಲ್ಲ, ಎಲ್ಲೆಂದರಲ್ಲಿ ಕಸದ ರಾಶಿಯೇ ತುಂಬಿದೆ. ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ದಿನ ಬೆಳಗಾದರೇ ಒಂದಲ್ಲ ಒಂದು ಟ್ಯಾಕ್ಸ್‌ಹೆಚ್ಚಿಸಿ, ಜನಸಾಮಾನ್ಯರ ಬದುಕನ್ನು ನರಕಮಾಡಿದೆ ಎಂದು ಜೆಡಿಎಸ್ ಆರೋಪ ಮಾಡಿದೆ.