ರೌಂಡ್ ಆಫ್ ದಿ ವರ್ಲ್ಡ್ ಸ್ಕಾಲರ್ಸ್ ಕಪ್‌ ನಲ್ಲಿ ಚಿನ್ನದ ಪದಕ ಪಡೆದ ವೀಕ್ಷಾ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರ್ಯ ನಿಮಿತ್ತ ದುಬೈನಲ್ಲಿ ವಾಸ ಮಾಡುತ್ತಿರುವ ನಮ್ಮೂರಿನ ಕಾರ್ತಿಕ್ ಗೌಡರ ಮಗಳು ಕುಮಾರಿ ವೀಕ್ಷಾ ಚಿಕ್ಕಮಾಗರವಳ್ಳಿ ಕಾರ್ತಿಕ್, ನನ್ನ ಸೋದರ ಸಂಬಂಧಿ, ವಾರಿಗೆಯಲ್ಲಿ ನನ್ನ ಮೊಮ್ಮಗಳು. “ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು” ಎನ್ನುವಂತೆ “ರೌಂಡ್ ಆಫ್ ದಿ ವರ್ಲ್ಡ್ ಸ್ಕಾಲರ್ಸ್ ಕಪ್‌” ನ ಜ್ಯೂನಿಯರ್ ವಿಭಾಗದಲ್ಲಿ ಸಮಗ್ರ ಪ್ರದರ್ಶನಕ್ಕಾಗಿ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನಳಾಗಿದ್ದಾಳೆ ಎಂದು ವಿಪ ಸದಸ್ಯ ಸಿ.ಟಿ ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚರ್ಚೆ, ಬರವಣಿಗೆ ಮತ್ತು ಸ್ಕಾಲರ್ಸ್ ಚಾಲೆಂಜ್‌ನಲ್ಲಿ ವೀಕ್ಷಾ ನೀಡಿದ ಅಸಾಧಾರಣ ಪ್ರದರ್ಶನ ಪ್ರೇರಣಾದಾಯಿ.

ದುಬೈ ಒಕ್ಕಲಿಗರ ಸಂಘ ಆಯೋಜಿಸಿದ್ದ, ಕುವೆಂಪು ಉತ್ಸವ ಹಾಗೂ ವಿಶ್ವ ಒಕ್ಕಲಿಗರ ವೈಭವ ಕಾರ್ಯಕ್ರಮಕ್ಕೆ ದುಬೈಗೆ ಹೋದಾಗ ಕಾರ್ತಿಕ್ ಕುಟುಂಬವನ್ನು ಭೇಟಿಯಾಗಿ ವೀಕ್ಷಾಳನ್ನು ಮತ್ತು ಅವರ ಮನೆಯವರನ್ನು ಅಭಿನಂದಿಸಿದೆ.

ಇಂಥಹ ಪ್ರತಿಭೆಗಳಿಗೆ ಎಳೆ ವಯಸ್ಸಿನಲ್ಲಿಯೇ ಉತ್ತಮ ಅವಕಾಶಗಳು ದೊರೆತು, ಅದರ ಸದುಪಯೋಗ ಮಾಡಿದರೆ ಮಕ್ಕಳಲ್ಲಿರುವ ಪ್ರತಿಭೆಗಳು ಪ್ರಕಟಗೊಂಡು ದೊಡ್ಡ ಮಟ್ಟದ ಸಾಧನೆಯೊಂದಿಗೆ ಹೊರಬರುತ್ತವೆ ಎಂಬುದಕ್ಕೆ ಇವಳ ಸಾಧನೆ ಉತ್ತಮ ದೃಷ್ಟಾಂತ ಎಂದು ರವಿ ಅವರು ತಿಳಿಸಿದ್ದಾರೆ.

 

Share This Article
error: Content is protected !!
";