ಕಾಂಗ್ರೆಸ್‌ ಪರ ಯತ್ನಾಳ್‌ ಕೆಲಸ

News Desk

ಚಂದ್ರವಳ್ಳಿ ನ್ಯೂಸ್, ಕೋಲಾರ:
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಶಾಸಕ ಬಸನಗೌಡ ಪಾಟೀಲ್‌ಯತ್ನಾಳ್‌ಮಧ್ಯೆ ನಡೆಯುತ್ತಿರುವ ವಾಕ್ ಸಮರ ಜೋರಾಗಿದೆ. ಬಿಜೆಪಿಯಲ್ಲಿ ಎರಡು ತಂಡ ಹುಟ್ಟುಕೊಂಡಿದ್ದು
, ಯತ್ನಾಳ್‌ಬಣ ಯಾವಾಗಲೂ ವಿಜಯೇಂದ್ರ ಅವರ ವಿರುದ್ಧ ಹೇಳಿಕೆ ನೀಡುತ್ತಲೆ ಇರುತ್ತದೆ. ಇವರಿಬ್ಬರ ಕಚ್ಚಾಟ ಕಾಂಗ್ರೆಸ್‌ಅವರಿಗೆ ಅನುಕೂಲವಾಗಿದೆ.
ಈ ಕುರಿತು ಮಾಜಿ ಸಚಿವ ರೇಣುಕಾಚಾರ್ಯ ಅವರು ಬಸವಗೌಡ ಪಾಟೀಲ್ ಯತ್ನಾಳ್ ವಿರುದ್ದ ವಾಗ್ದಾಳಿ ನಡೆಸಿ, ಕಾಂಗ್ರೆಸ್‌ಪರ ಯತ್ನಾಳ್‌ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ರೇಣುಕಾಚಾರ್ಯ ಕುರುಡುಮಲೆ ದೇಗುಲದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಯತ್ನಾಳ್ ಹಿಂದೂ ಹುಲಿಯಲ್ಲ, ಹಿಂದೂ ಇಲಿ. ಬಿಜೆಪಿಗೆ ಹೊರಗಿನ ದುಷ್ಟಶಕ್ತಿ ಕಾಂಗ್ರೆಸ್, ಒಳಗಿನ ದುಷ್ಟಶಕ್ತಿ ಪಕ್ಷ ವಿರೋಧಿಗಳು. ಕಾಂಗ್ರೆಸ್ ಮುಖವಾಣಿಯಂತೆ ಯತ್ನಾಳ್ ಕೆಲಸ ಮಾಡ್ತಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಿಂದ ಸುಪಾರಿ ಪಡೆದುಕೊಂಡಂತೆ ಕೆಲಸ ಮಾಡ್ತಿದ್ದಾರೆ. ಇನ್ನು ಲಫೂಟ್ ಎಂಬ ಯತ್ನಾಳ್ ಹೇಳಿಕೆಗೆ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಬಗ್ಗೆ ಹಗುರವಾಗಿ ಮಾತನಾಡ ಬೇಡ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.

ನೀನೊಬ್ಬ ಗೋಮುಖ ವ್ಯಾಘ್ರ, ನೀವು ಮುಖವಾಡ ಹಾಕಿಕೊಂಡಿದ್ದೀರಾ. ನೀನು ಪಕ್ಷದಿಂದ ಸಸ್ಪೆಂಡ್ ಆಗಿದ್ದಾಗ ಇಪ್ತಿಯಾರ್ ಕೂಟ ಮಾಡಿದ್ದೆ. ಪಕ್ಷದಲ್ಲಿ ಸ್ವಯಂ ಘೋಷಿತ ಹಿಂದೂ ಹುಲಿ ಎಂದು ಹೇಳ್ತೀಯ, ನಿನಗೆ ಮಾನ ಮರ್ಯಾದೆ ಇದ್ರೆ, ಬಾಯಿ ಬಿಚ್ಚಿದ್ರೆ ಅಷ್ಟೇ. ನಾವೂ ನಾಟಿ, ನಾನು ಮಾತನಾಡ್ತೀನಿ ಎಂದು ರೇಣುಕಾಚಾರ್ಯ ಯತ್ನಾಳ್‌ವಿರುದ್ಧ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.

ರಾಜ್ಯದಲ್ಲಿ ಸೈಕಲ್ ತುಳಿದು ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ. ಹಾಗೂ ದಿವಂಗತ ಅನಂತ್ ಕುಮಾರ್ ಪಕ್ಷ‌ಕಟ್ಟಿದ್ರು. ಭಾರತೀಯ ಜನತಾ ಪಾರ್ಟಿ ಕಟ್ಟಿದವ್ರ ವಿರುದ್ದ ಯತ್ನಾಳ್ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ್ ಸ್ವಯಂ ಘೋಷಿತ ಹಿಂದೂ ನಾಯಕ. ಯತ್ನಾಳ್ ಗೆ ಯಾವುದೇ ರಾಷ್ಟ್ರೀಯ ನಾಯಕರ ಬೆಂಬಲ ಇಲ್ಲ. ವಕ್ಪ್ ವಿರುದ್ದ ಹೋರಾಟ ಮಾಡು ಅಂತ, ರಾಷ್ಟ್ರೀಯ ನಾಯಕರು ಯಾರೂ ಹೇಳಿಲ್ಲ. ಬಿವೈ ವಿಜಯೇಂದ್ರ ಮುಂದೆ ರಾಜ್ಯದ ಸಿಎಂ ಆಗಲಿ ಎಂದು ಯತ್ನಾಳ್ ವಿರುದ್ದ ರೇಣುಕಾಚಾರ್ಯ ಗುಡುಗಿದ್ದಾರೆ.

ನಿಮ್ಮ ಹರಕು ಬಾಯಿ, ಹೊಲಸು ಬಾಯಿಯಿಂದಲೇ ಕಳೆದ ಚುನಾವಣೆಯಲ್ಲಿ ಪಕ್ಷ ಸೋಲು ಕಂಡಿದೆ. ಬಿಜೆಪಿಯ ಸೋಲಿಗೆ ನೀವೇ ಕಾರಣ, ನರೇಂದ್ರ ಮೋದಿಗಿಂತ ನೀನು ದೊಡ್ಡ ಮನುಷ್ಯನಾ? ವಕ್ಫ್ ಹೋರಾಟಕ್ಕೆ ಶೋಭಾ, ಪ್ರಹ್ಲಾದ್ ಜೋಷಿ ಬೆಂಬಲ ಕೊಟ್ಟಿದ್ದಾರೆ ವಿನಃ ನಿಮಗಲ್ಲ. ಪರ್ಯಾಯ ನಾಯಕತ್ವ ಸೃಷ್ಟಿಗೆ ಬೆಂಬಲ ಕೊಟ್ಟರಾ? ಪಕ್ಷ ಚಿಹ್ನೆ ನಿಮಗೆ ಕೊಟ್ಟವರು ಯಾರು? ವಿನಾಕಾರಣ ಸಂಘರ್ಷಕ್ಕೆ ಇಳಿದಿದ್ದೀರಿ. ನಿನಗೆ ತಾಕತ್ ಇದ್ದರೆ ಯಾರು ಆ ರಾಷ್ಟ್ರೀಯ ನಾಯಕ ನಿನಗೆ ಅನುಮತಿ ಕೊಟ್ಟರು ಹೇಳು? ನಿಮ್ಮ ನಡವಳಿಕೆ ಸರಿಯಾಗಿಲ್ಲ ಅಂದರೆ ವರಿಷ್ಠರ ಭೇಟಿ ಮಾಡಿ ನಿಮ್ಮ ಉಚ್ಚಾಟನೆಗೆ ಒತ್ತಾಯ ಮಾಡಬೇಕಾಗುತ್ತದೆ ಎಂದು ಯತ್ನಾಳ್ ವಿರುದ್ಧ ರೇಣುಕಾರ್ಯ ಆಕ್ರೋಶ ಹೊರಹಾಕಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";