ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಡವರ, ವೃದ್ಧರ ಮಾಸಿಕ ಪಿಂಚಣಿಗೂ ಕನ್ನ ಹಾಕಲು ಸಿದ್ದವಾಗಿದೆ ಕರ್ನಾಟಕ ಕಾಂಗ್ರೆಸ್ ಸರ್ಕಾರ!! ಎಂದು ಬಿಜೆಪಿ ಟೀಕಿಸಿದೆ.
ಬಡವರ ಬಗ್ಗೆ ಸಹಾನುಭೂತಿ, ಕಾಳಜಿ ಇರಲಿ ಎಂದು ಬೊಗಳೆ ಬಿಡುವ ಸಿಎಂ ಸಿದ್ದರಾಮಯ್ಯ ಅವರೆ, ಬಡವರ, ವೃದ್ಧರ ಮಾಸಿಕ ಪಿಂಚಣಿ ಮೇಲೆಯೂ ನಿಮ್ಮ ಸರ್ಕಾರದ ಕಲೆಕ್ಷನ್-ಕಮಿಷನ್-ಕರಪ್ಷನ್ ಕಣ್ಣು ಬಿದ್ದಿರುವುದು ನಿಜಕ್ಕೂ ಅತ್ಯಂತ ನಾಚಿಕೆಗೇಡು ಎಂದು ಬಿಜೆಪಿ ಟೀಕಿಸಿದೆ.
ಆರ್ಥಿಕವಾಗಿ ದಿವಾಳಿ ಆಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿ ಫಲಾನುಭವಿಗಳ ಹೊಟ್ಟೆ ಮೇಲೆ ಹೊಡೆದಿತ್ತು.
ಇದೀಗ ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಿದ್ದರಾಮಯ್ಯ ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ಅಭಿವೃದ್ಧಿಯೂ ಇಲ್ಲ, ಗ್ಯಾರಂಟಿಯೂ ಇಲ್ಲ, ಫಲಾನುಭವಿಗಳಿಗೆ ಪಿಂಚಣಿಯೂ ಇಲ್ಲ ಎಂದು ಬಿಜೆಪಿ ಹರಿಹಾಯ್ದಿದೆ.