ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋದ ಯುವಕ ಶಿವಕುಮಾರ್(೨೦) ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ.
ಶನಿವಾರ ಮಧ್ಯಾಹ್ನ ಸುಮಾರು ಒಂದರ ಸಮಯದಲ್ಲಿ ಸ್ನೇಹಿತರೊಂದಿಗೆ ಗ್ರಾಮದ ಕೆರೆಯಲ್ಲಿ ಈಜಾಡಲು ಹೋಗಿದ್ದಾನೆ. ಬಹಳ ಹೊತ್ತಾದರೂ ಬಾರದ ಹಿನ್ನೆಲೆಯಲ್ಲಿ ಗಾಬರಿಗೊಂಡ ಸ್ನೇಹಿತರು ಪೋಷಕರು, ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ಧಾರೆ.
ಸ್ಥಳಕ್ಕೆ ಬಂದ ಅವರು ಕೆರೆಯಲ್ಲಿ ಹುಡುಕಾಡಿದ ನಂತರ ಸಂಜೆ ೬.೩೦ರ ವೇಳೆಗೆ ಮೃತದೇಹ ಪತ್ತೆಯಾಗಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ತಳಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ಧಾರೆ.
ಅಗ್ನಿಶಾಮಕ ಪಡೆಯ ಠಾಣಾಧಿಕಾರಿ ಮುಸ್ತಾಕೀಮ್ ಆಹಮ್ಮದ್, ಸಿಬ್ಬಂದಿಯಾದ ತಿಪ್ಪೇಶ್, ನಾಗರಾಜು, ಗುರು, ಅರವಿಂದ ಖಂಡೋಜಿ, ಬಸವಗೌಡ ಕಾರ್ಯಚರಣೆ ನಡೆಸಿದರು.