ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಜೈಲಿನಲ್ಲಿರುವ ಕೈದಿಗಳಿಗೆ ಮದ್ಯ, ಗಾಂಜಾ, ಸಿಗರೇಟು, ಮಾರಕಾಸ್ತ್ರ, ರಾಜಾತಿಥ್ಯ ಸಿಗುತ್ತಿದೆ. ಈ ಕುರಿತಂತೆ ಪದೇ ಪದೇ ವರದಿಗಳು ಪ್ರಕಟವಾಗುತ್ತಿದ್ದರೂ ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಈ ಕುರಿತಂತೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಜೈಲು ಎಂಬುದು ಕೈದಿಗಳ ಪಾಲಿಗೆ ಸ್ವರ್ಗವಾದರೆ, ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ತಡೆಯಲು ಸಾಧ್ಯವೇ?
ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವ, ಸಮಾಜಘಾತುಕರನ್ನು ಪೋಷಿಸುತ್ತಿರುವ ಆಕಸ್ಮಿಕ ಗೃಹ ಸಚಿವರು ರಾಜೀನಾಮೆ ನೀಡಿದರೆ ರಾಜ್ಯದ ಜನತೆಗೆ ಒಳಿತು ಎಂದು ಬಿಜೆಪಿ ಆಗ್ರಹ ಮಾಡಿದೆ.