Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Business News

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ 46 ಲಕ್ಷ ನಿವ್ವಳ ಲಾಭ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರೈತರ ಹಾಗೂ ಸಾರ್ವಜನಿಕರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಸದಸ್ಯರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು 2024-25ನೇ ಸಾಲಿನಲ್ಲಿ 46.34 ಲಕ್ಷ ಲಾಭಗಳಿಸಿದೆ ಎಂದು ಸಂಘದ ಪ್ರಭಾರ ಕಾರ್ಯದರ್ಶಿ ಕೆ.ಆನಂದ ಹೇಳಿದರು.

ಅವರು ನಗರದ ಒಕ್ಕಲಿಗರ ಸಂಘದಲ್ಲಿ ಗುರುವಾರ ನಡೆದ 2024-25ನೇ ಸಾಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ಲೆಕ್ಕಪತ್ರ ಮಂಡಿಸಿ ಮಾತನಾಡಿದರು.

ಸರ್ಕಾರ ಸರಬರಾಜು ಮಾಡುವ ದರದಲ್ಲಿ ತಾಲ್ಲೂಕಿನ ರೈತರಿಗೆ ಸಕಾಲದಲ್ಲಿ ರಸಗೊಬ್ಬರವನ್ನು ಮಾರಾಟ ಮಾಡುವಲ್ಲಿ ಇಡೀ ಜಿಲ್ಲೆಯಲ್ಲೇ ಸಂಘವು ಪ್ರಥಮ ಸ್ಥಾನದಲ್ಲಿದೆ. ಸಾರ್ವಜನಿಕರಿಗೆ ಗೃಹಬಳಕೆಯ ಗುಣಮಟ್ಟದ ಹಾಗೂ ರಿಯಾಯಿತಿ ದರದಲ್ಲಿ ದಿನಸಿ ವಸ್ತುಗಳು ದೊರೆಯುವಂತೆ ನಗರದ ವಿವಿಧಡೆಗಳಲ್ಲಿನ 5 ಜತನಾ ಬಜಾರ್ ಶಾಖೆಗಳನ್ನು ತೆರೆಯಲಾಗಿದೆ.

ಶೇ10 ರಷ್ಟು ರಿಯಾಯಿತಿ ದರದಲ್ಲಿ ಜನರ ಆರೋಗ್ಯಕ್ಕೆ ಸಂಬಂಧಿಸಿದ  ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲವನ್ನು ತ್ವರಿತವಾಗಿ ನೀಡುವ ಮೂಲಕ ಆರ್ಥಿಕ ಪ್ರಗತಿಗೆ ಸಹಕಾರ ನೀಡಲಾಗುತ್ತಿದೆ. ಸಂಘದ ಲಾಭದ ಹಣದಲ್ಲಿ ಸದಸ್ಯರ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ನಗದು ಪ್ರೋತ್ಸವವನ್ನು ನೀಡಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದರು.

ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಂಘದ ನಿರ್ದೇಶಕ ವಿ.ಆಂಜನೇಗೌಡ, ಎನ್.ರಂಗಪ್ಪ,ಚುಂಚೇಗೌಡ,80ರ ದಶಕದಲ್ಲಿ ಪ್ರಥಮ ಅಧ್ಯಕ್ಷರಾಗಿದ್ದ  ಮಾಜಿ ಸಚಿವರಾದ ಜಿ.ರಾಮೇಗೌಡರಿಂದ ಪ್ರಾರಂಭವಾಗಿರುವ ಸಂಘವು ಪ್ರತಿ ವರ್ಷವು ವೃದ್ಧಿಯಾಗುತ್ತಲೇ ಬರುತ್ತಿದೆ.

ಇದಕ್ಕೆ ಬೆನ್ನೆಲುಬಾಗಿ ಸಂಘದ ಸದಸ್ಯರು ನಿಂತಿದ್ದಾರೆ. ಸಂಘವು ಮತ್ತಷ್ಟು ಅಭಿವೃದ್ದಿಯಾಗಲು ಹಾಗೂ ಸದಸ್ಯರಿಗೆ ಮತದಾನದ ಹಕ್ಕು ದೊರೆಯಲು ಕಡ್ಡಾಯವಾಗಿ ಸಂಘದಲ್ಲಿನ ವ್ಯಾಪಾರ ಮಳಿಗೆಗಳಲ್ಲಿ ವಹಿವಾಟು ನಡೆಸಬೇಕು ಹಾಗೂ ವಾರ್ಷಿಕ ಮಹಾಸಭೆಗಳಿಗೆ ಹಾಜರಾಗಬೇಕು ಎಂದರು. 

ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ವೆಂಕಟೇಶ್ ವಹಿಸಿದ್ದರು. ಉಪಾಧ್ಯಕ್ಷ ಕೆ.ಸಿ.ಲಕ್ಷ್ಮೀನಾರಾಯಣ್, ನಿರ್ದೇಶಕರಾದ ಜಿ.ಮಾರೇಗೌಡ, ಡಿ.ಸಿದ್ದರಾಮಯ್ಯ, ಚಂದ್ರಕಲಾ, ಎಂ.ಗೋವಿಂದರಾಜು, ಎಸ್.ದಯಾನಂದ, ಲಕ್ಷ್ಮೀ, ಎಂ.ಆನಂದ, ಎ.ರಾಮಾಂಜಿನಪ್ಪ, ಎ.ಎನ್.ಹರೀಶ್ ಕುಮಾರ್ ಇದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಸಭಾ ಚುನಾವಣೆ ಹಾಗೂ ಬಂಗಾಳ ಉಪಚುನಾವಣೆ ಘೋಷಣೆ ಸಚಿವ ಶಿವಲಿಂಗೇಗೌಡರ ವಿವಾದಾತ್ಮಕ ಹೇಳಿಕೆ: ಲೋಕಾಯುಕ್ತಕ್ಕೆ ದೂರು ದಾಖಲು, ರಾಜೀನಾಮೆಗೆ ಆಗ್ರಹಬೆಂಗಳೂರು ವಿಮಾನ ನಿಲ್ದಾಣದಲ್ಲಿ 28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಚಿನ್ನ ವಶ, 6 ಜನರ ಬಂಧನಶ್ರೀ ರಾಘವೇಂದ್ರ ಸೌಹಾರ್ದ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ತಂತ್ರಜ್ಞಾನ ಆಧಾರಿತ ಸೇವೆಗಳ ಭರವಸೆಹಿರಿಯೂರು:ಪೌರಕಾರ್ಮಿಕರ ದಿನಾಚರಣೆ ಕ್ರೀಡಾಕೂಟಕ್ಕೆ ಭಕ್ತಿಗೆ ಚಾಲನೆ ನೀಡಿದ ಪೌರಾಯುಕ್ತ ಎ. ವಾಸೀಂಬದುಕನ್ನು ಅಳೆಯಬೇಡ — ಬದುಕಿನ ಅರ್ಥವನ್ನು ಅರಿತುಕೋಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ದೆಹಲಿಯಲ್ಲಿ ಪೇಜಾವರ ಶ್ರೀಗಳ ಭೇಟಿ: ಶ್ರೀ ವಿಶ್ವಪ್ರಸನ್ನ ತೀರ್ಥರ ಆಶೀರ್ವಾದ ಪಡೆದ ದಿವ್ಯಕ್ಷಣಚಿತ್ರದುರ್ಗ: 25,000 ಲಂಚ ಸ್ವೀಕರಿಸುತ್ತಿದ್ದ ಎಫ್‌ಡಿಎ ಲೋಕಾಯುಕ್ತ ಬಲೆಗೆಏಷ್ಯನ್ ಗೇಮ್ಸ್ 2026: ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಚಾರಿತ್ರಿಕ ಚಿನ್ನದ ಪದಕ, ಹೆಚ್.ಡಿ. ಕುಮಾರಸ್ವಾಮಿ ಅಭಿನಂದನೆಜಿಬಿಎಯಿಂದ 'ಇ-ಆಸ್ತಿ 2.0' ಆಸ್ತಿ ಮತ್ತು ಇ-ಖಾತಾ ವ್ಯವಸ್ಥೆ ಲೋಕಾರ್ಪಣೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ