ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತಾಲ್ಲೂಕು ಕಚೇರಿ ಹಿಂಭಾಗದಲ್ಲಿರುವ ಕಣಿವೆಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಸ್ಥಳೀಯರು ಮನವಿ ಮಾಡಿಕೊಂಡಿರುವುದರಿಂದ ಭಕ್ತಾಧಿಗಳ ಹಿತದೃಷ್ಠಿಯಿಂದ ಕಣಿವೆಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಗೋವಿಂದ ಎಂ.ಕಾರಜೋಳರವರು ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಸೂಚಿಸಿದ್ದಾರೆ.
ಪ್ರತಿ ಅಮಾವಾಸೆ, ಹುಣ್ಣಿಮೆಯಂದು ನೂರಾರು ಭಕ್ತರಿಗೆ ಇಲ್ಲಿ ಪ್ರಸಾದದ ವ್ಯವಸ್ಥೆಯಿರುತ್ತದೆ. ಅದರಂತೆ ಭಕ್ತರಿಗೆ ಯಾವುದೇ ರೀತಿಯ ಮೂಲ ಸೌಕರ್ಯವಿರುವುದಿಲ್ಲ. ಸ್ವಚ್ಚತೆ ಮರೀಚಿಕೆಯಾಗಿದೆ.
ಭಕ್ತರಿಂದ ಸಂಗ್ರಹವಾಗುವ ದೇಣಿಗೆ, ಆಹಾರ ಧಾನ್ಯಗಳಿಗೆ ಲೆಕ್ಕವಿಲ್ಲ. ಪಾರದರ್ಶಕತೆ ಕಾಪಾಡುವ ಅಗತ್ಯವಿದೆ. ಹಾಗಾಗಿ ಕಣಿವೆಮಾರಮ್ಮ ದೇವಸ್ಥಾನವನ್ನು ಮುಜರಾಯಿಗೆ ಸೇರಿಸಬೇಕೆಂದು ಜಿ.ಎನ್.ಬಸವರಾಜ್, ತಿಪ್ಪೇಸ್ವಾಮಿ, ಆರ್.ಮೂರ್ತಿ, ಶಾಂತರಾಜ್, ಮಂಜುನಾಥ್, ಲಿಲಿತಮ್ಮ, ಪಾರ್ವತಮ್ಮ, ಶಿವಮ್ಮ ಇವರುಗಳು
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿನ ವ್ಯವಸ್ಥೆಯ ಸುಧಾರಣೆಗಾಗಿ ಮುಜರಾಯಿ ಇಲಾಖೆಗೆ ಸೇರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಸದರು ಜಿಲ್ಲಾಧಿಕಾರಿಗೆ ಸೂಚಿಸಿರುವ ಪತ್ರದಲ್ಲಿ ಅಪೇಕ್ಷಿಸಿದ್ದಾರೆ.




