LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳಿಗೆ ಮಾನಸಿಕವಾಗಿ ಧೈರ್ಯ ತುಂಬಲು ಬೇಸಿಗೆ ಶಿಬಿರಗಳು ಅತ್ಯಗತ್ಯ: ಡಾ.ಐಶ್ವರ್ಯ

Advertisement
Advertisement
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಮಾನಸಾಧಾರ ಟ್ರಸ್ಟ್, ಮನಃಸ್ಫೂರ್ತಿ ಮಕ್ಕಳ ಕಲಿಕಾ ಕೇಂದ್ರ ಹಾಗೂ ನಮ್ಮ ಹಳ್ಳಿ ಥಿಯೇಟರ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮನಃಸ್ಫೂರ್ತಿ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಪಾಸಿಟಿವ್ ಮೈಂಡ್ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಡಾ.ಐಶ್ವರ್ಯ ರವರು "ಮಕ್ಕಳಿಗೆ ಪ್ರಸ್ತುತ ಒತ್ತಡದ ಬದುಕಿದೆ. ಅದನ್ನು ದೂರಗೊಳಿಸಲು ಬೇಸಿಗೆ ಶಿಬಿರಗಳ ಪಾತ್ರ ಬಹಳ ಮುಖ್ಯ.

ಪೋಷಕರು ಇದನ್ನು ಮನಗಂಡು ಇಂತಹ ಶಿಬಿರಗಳಿಗೆ ಮಕ್ಕಳನ್ನು ಸೇರಿಸಬೇಕು, ಹಾಗೆಯೇ ಶಿಬಿರಗಳು ಮಕ್ಕಳಿಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ಮಾನಸಿಕವಾಗಿ ಧೈರ್ಯವನ್ನು ತುಂಬುತ್ತದೆ ಮತ್ತು ಅವರನ್ನು ಮೊಬೈಲ್ ನಿಂದ ದೂರವಿಡುವುದಕ್ಕೆ ಸಹಕಾರಿಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಈ ಶಿಬಿರ ಬಹಳ ಉಪಯುಕ್ತವಾಗಿದೆ" ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಜನಿ.ಎ.ಪೈ ರವರು ಮಾತನಾಡಿ "ಮನಃಸ್ಫೂರ್ತಿ ಬೇಸಿಗೆ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಇದು ಒಂಬತ್ತನೇ ವರ್ಷದ ಶಿಬಿರವಾಗಿದೆ. ಮುಖ್ಯವಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಈ ಶಿಬಿರವು ರೂಪುಗೊಂಡಿದ್ದು ನಾಟಕ, ಚಿತ್ರಕಲೆ, ಹಾಡು, ಕ್ರಾಫ್ಟ್, ಪರಿಸರದ ಅರಿವು.... ಹೀಗೆ ಇತ್ಯಾದಿ ವಿಷಯಗಳನ್ನು ಇಂದಿನಿಂದ ಹೇಳಿಕೊಡಲಾಗುತ್ತದೆ" ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಮಂಜುನಾಥ ಸ್ವಾಮಿ, ಶಿಬಿರದ ಸಂಚಾಲಕಿ ರಂಗನಾಯಕಿ, ಜ್ಯೋತಿ ಅರುಣ್ ಕುಮಾರ್, ಪ್ರತೀಕ್.ಸಿ.ಎಂ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಾದ ಸ್ಫೂರ್ತಿ.ವೈ.ಹೆಚ್, ಮಂಜುಳ, ಜ್ಯೋತಿ, ರಾಹುಲ್, ಶಶಾಂಕ್, ಮಂಜು.ಆರ್.ಪಿ, ನಮ್ಮ ಹಳ್ಳಿ ಥಿಯೇಟರ್ ನ ಸದಸ್ಯರು, ಮನಃಸ್ಫೂರ್ತಿ ಮಕ್ಕಳ ಕಲಿಕಾ ಕೇಂದ್ರದ ಶಿಕ್ಷಕರು ಉಪಸ್ಥಿತರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ