E-PAPER
24 Nov 2026, 05:13:00 AM|
Gold₹12536/gGold24K ₹12,536/g - 22K ₹11,481/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಹೊಸ ವಿವಾದ ಸದ್ದು: ಸಚಿವ ಯತೀಂದ್ರ ಫೋಟೋ ನಾಪತ್ತೆ, ನಂದಿಧ್ವಜ ಪೂಜೆಗೆ ತೆರಳುತ್ತಿದ್ದವರಿಗೆ ತಡೆ!

ಚಂದ್ರವಳ್ಳಿ ನ್ಯೂಸ್, ಮೈಸೂರು:
11 ದಿನಗಳ ಕಾಲ ಅತ್ಯಂತ ವೈಭವ ಹಾಗೂ ಅದ್ಧೂರಿಯಾಗಿ ಜರುಗಿದ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ತೆರೆ ಕಂಡಿದೆ. ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದ ನವರಾತ್ರಿ ಉತ್ಸವ ಪೂರ್ಣಗೊಂಡ ಬೆನ್ನಲ್ಲೇ, ಮೈಸೂರಿನಲ್ಲಿ ಕೆಲ ಅಸಮಾಧಾನ ಹಾಗೂ ವಿವಾದಗಳು ಸ್ಫೋಟಗೊಂಡಿದ್ದು, ಚರ್ಚೆಗೆ ಗ್ರಾಸವಾಗಿವೆ.

ಸರ್ಕಾರಿ ಜಾಹೀರಾತಿನಲ್ಲಿ ಉಸ್ತುವಾರಿ ಸಚಿವರ ಫೋಟೋ ಗೈರು:
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ವಾರ್ತಾ ಇಲಾಖೆಯಿಂದ ಪತ್ರಿಕೆಗಳಲ್ಲಿ ಪ್ರಕಟವಾದ ಸರ್ಕಾರದ ಅಧಿಕೃತ ಜಾಹೀರಾತಿನಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಕೈಬಿಟ್ಟಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಜಾಹೀರಾತಿನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಫೋಟೋ ಮಾತ್ರ ಮುದ್ರಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದ್ದು, “ಸಿದ್ದರಾಮಯ್ಯರವರ ಸಿದ್ದಾಂತಗಳಿಗೆ ಈ ಗ್ರೂಪ್” ಎಂಬ ಫೇಸ್‌ಬುಕ್ ಪುಟದಲ್ಲಿ ಪ್ರಕಟಿತ ಜಾಹೀರಾತನ್ನು ಹಂಚಿಕೊಂಡು ಅಧಿಕಾರಿಗಳ ನಡೆಯನ್ನು ಕಟುವಾಗಿ ಟೀಕಿಸಲಾಗಿದೆ. ಇದರ ಬೆನ್ನಲ್ಲೇ ಮೈಸೂರಿನಲ್ಲಿ ಅಹಿಂದ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ. ವಾರ್ತಾ ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ಜಿಲ್ಲಾ ಉಸ್ತುವಾರಿ ಸಚಿವರ ಫೋಟೋ ಕೈಬಿಟ್ಟಿದ್ದಾರೆ ಎಂದು ಆರೋಪಿಸಿರುವ ಸಂಘಟನೆಯ ಮುಖಂಡರು, ಈ ನಿರ್ಲಕ್ಷ್ಯದ ಹಿಂದೆ ಇರುವ ಷಡ್ಯಂತ್ರವನ್ನು ಪತ್ತೆಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ನಂದಿಧ್ವಜ ಪೂಜೆಗೆ ತೆರಳುತ್ತಿದ್ದವರಿಗೆ ತಡೆ ಆರೋಪ:
ಮತ್ತೊಂದೆಡೆ, ಅಕ್ಟೋಬರ್ 21ರಂದು ಜರುಗಿದ ನಂದಿಧ್ವಜ ಪೂಜಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮೂವರು ಪ್ರಮುಖ ಸವಾರರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್ಪಿ) ತಡೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೂ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ತೀವ್ರ ಚರ್ಚೆಗಳು ಆರಂಭವಾಗಿದ್ದು, ದಸರಾ ಸಂಭ್ರಮದ ನಡುವೆಯೂ ಈ ಘಟನೆಗಳು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿವೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಗಳ ಜಪಾನ್ ಪ್ರವಾಸ, ರೈತರು, ಆಶಾ ಕಾರ್ಯಕರ್ತೆಯರ ಸಂಕಷ್ಟದ ಕುರಿತು ವಿಜಯೇಂದ್ರ ಟೀಕೆಟೊಯೋಟಾ ವಿಸ್ತರಣಾ ಯೋಜನೆಗೆ ರಾಜ್ಯದ ಸಂಪೂರ್ಣ ಬೆಂಬಲ: ಸಿಎಂ ಡಿ.ಕೆ. ಶಿವಕುಮಾರ್ನೀರಾವರಿ ಜಾಲಕ್ಕೆ ಆಸ್ಟ್ರೇಲಿಯಾ ತಂತ್ರಜ್ಞಾನ ಬಲ; 'ವಾಟರ್ ಟ್ರೇಡಿಂಗ್' ಅಧ್ಯಯನಕ್ಕೆ ಸಚಿವ ಚಲುವರಾಯಸ್ವಾಮಿ ಸಮ್ಮತಿಮಾತೃಭಾಷೆ ಬಳಸಿದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ: ಬಸವಮೂರ್ತಿ ಮಾದಾರ ಚೆನ್ನಯ್ಯಶ್ರೀಕಾಡಾನೆ ಸ್ಥಳಾಂತರಕ್ಕೆ ಆಕ್ರೋಶ: ಶಾಸಕ ಸ್ಥಾನಕ್ಕೆ ನಯನಾ ಮೋಟಮ್ಮ ರಾಜೀನಾಮೆಮೂರು ಕರಡಿಗಳೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ರೈತ; ತಲೆಗೆ ಗಂಭೀರ ಗಾಯ, ಸ್ಥಿತಿ ಚಿಂತಾಜನಕ!ಹಿರಿಯೂರಿನಲ್ಲಿ ಪುಂಗಿ ಊದಿ ಹೋದ ಸಿಎಂ: ಗೋವಿಂದ ಕಾರಜೋಳ ಕಿಡಿಸಂಭ್ರದಿಂದ ನಡೆದ ತುಳಸಿ ಹಬ್ಬದ ಆಚರಣೆಭೀಕರ ರಸ್ತೆ ಅಪಘಾತ: ದೇಗುಲ ದರ್ಶನ ಮುಗಿಸಿ ಮರಳುತ್ತಿದ್ದ ಒಂದೇ ಕುಟುಂಬದ 9 ಮಂದಿ ದುರ್ಮರಣಹಿರಿಯೂರು ಉಪಚುನಾವಣೆ: ಅಮಿತ್ ಶಾ ಅಂಗಳಕ್ಕೆ ಅಭ್ಯರ್ಥಿ ಆಯ್ಕೆ ಚೆಂಡು