E-PAPER
23 Nov 2026, 06:39:54 PM|
Gold₹12413/gGold24K ₹12,413/g - 22K ₹11,369/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Business News

ಮೆಟ್ರೋ ಪ್ರಯಾಣ ದರ ಏರಿಕೆ ಅಧಿಕಾರ ಕೇಂದ್ರದ ಅಧೀನಕ್ಕೆ-ರಾಮಲಿಂಗಾರೆಡ್ಡಿ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಅಧೀನಕ್ಕೆ ಬರುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದು ಸಾರಿಗೆ ಸಚಿವ ಆರ್.ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ದರ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರವು 'ದರ ನಿಗದಿ ಸಮಿತಿ'ಯನ್ನು ರಚಿಸುತ್ತದೆ. ಈ ಸಮಿತಿಯು ನೀಡುವ ವರದಿಯ ಆಧಾರದ ಮೇಲೆ ದರಗಳು ನಿರ್ಧಾರವಾಗುತ್ತವೆ.

ಪ್ರತಿಪಕ್ಷಗಳು ಮೆಟ್ರೋ ದರ ಏರಿಕೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವುದು ಸರಿಯಲ್ಲ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ತಾಂತ್ರಿಕ ಮತ್ತು ಕೇಂದ್ರದ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ ಎಂದು ಸಚಿವರು ತಿಳಿಸಿದರು.

ಬಿಎಂಆರ್‌ಸಿಎಲ್ ಮೆಟ್ರೋ ದರ ನಿಗದಿಗಾಗಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿಯ ಸದಸ್ಯರ ಹೆಸರುಗಳು ಈ ಕೆಳಗಿನಂತಿವೆ:

ನ್ಯಾಯಮೂರ್ತಿ ಆರ್. ಥಾರಣಿ - ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಈ ಸಮಿತಿಯ ಅಧ್ಯಕ್ಷರು.

ಸತೀಂದರ್ ಪಾಲ್ ಸಿಂಗ್ - ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು.
ಡಾ. ಇ.ವಿ. ರಮಣರೆಡ್ಡಿ - ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು.

 

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂರು ಕರಡಿಗಳೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ರೈತ; ತಲೆಗೆ ಗಂಭೀರ ಗಾಯ, ಸ್ಥಿತಿ ಚಿಂತಾಜನಕ!ಹಿರಿಯೂರಿನಲ್ಲಿ ಪುಂಗಿ ಊದಿ ಹೋದ ಸಿಎಂ: ಗೋವಿಂದ ಕಾರಜೋಳ ಕಿಡಿಸಂಭ್ರದಿಂದ ನಡೆದ ತುಳಸಿ ಹಬ್ಬದ ಆಚರಣೆಭೀಕರ ರಸ್ತೆ ಅಪಘಾತ: ದೇಗುಲ ದರ್ಶನ ಮುಗಿಸಿ ಮರಳುತ್ತಿದ್ದ ಒಂದೇ ಕುಟುಂಬದ 9 ಮಂದಿ ದುರ್ಮರಣಹಿರಿಯೂರು ಉಪಚುನಾವಣೆ: ಅಮಿತ್ ಶಾ ಅಂಗಳಕ್ಕೆ ಅಭ್ಯರ್ಥಿ ಆಯ್ಕೆ ಚೆಂಡುಡಿ.ಕೆ. ಶಿವಕುಮಾರ್ ಔತಣಕೂಟ ವಿವಾದ: ಬಿ.ವೈ ವಿಜಯೇಂದ್ರ ಅಸಮಾಧಾನಕ್ಕೆ ಜನಾರ್ದನ ರೆಡ್ಡಿ ತಿರುಗೇಟುಭಾರತ್ ಜೋಡೋ ಯೋಜನೆಯಲ್ಲಿ ಪಕ್ಷಪಾತ ಆರೋಪ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ6ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ: ಪ್ರತಿಭಟನೆ ಮತ್ತಷ್ಟು ತೀವ್ರಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ರೇವಣ್ಣ ಕಡ್ಡಾಯ ಜಾಮೀನಿಗೆ ಹೈಕೋರ್ಟ್ ಅಸ್ತು!ರೌಡಿಗಳಿಗೆ ಖಾಕಿ ಶಾಕ್: 30ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ, ಆರ್ಥಿಕ ಮೂಲಗಳಿಗೂ ಕತ್ತರಿ!