ಜಿ.ಆರ್.ಹಳ್ಳಿಯ 20 ವರ್ಷದ ರಕ್ಷಾ ಕಣ್ಮರೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿ ಗ್ರಾಮದ ರಕ್ಷ ಗಂಡ ಪರಶುರಾಮ (ಸು.20 ವರ್ಷ) ಎಂಬ ಮಹಿಳೆ ಕಾಣೆಯಾದ ಕುರಿತು ನ.26ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - 

ಕಾಣೆಯಾದ ರಕ್ಷ ಅವರು ಸು.4.5 ಅಡಿ ಎತ್ತರ, ದುಂಡು ಮುಖ, ದುಂಡು ಮೂಗು, ಸಾಧಾರಣ ಮೈಕಟ್ಟು, 14 ಇಂಚು ಉದ್ದದ ಕಪ್ಪು ಕೂದಲು, ಗೋದಿ ಮೈ ಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುವರು.

- Advertisement - 

ಮನೆಯಿಂದ ಹೋಗುವಾಗ ಹಸಿರು ಬಣ್ಣದ ಜಾಕೆಟ್, ಮೆರೂನ್ ಬಣ್ಣದ ಸೀರೆ ಧರಿಸಿರುತ್ತಾರೆ.
ಈ ಮೇಲ್ಕಂಡ ಮಹಿಳೆಯ ಕುರಿತು ಮಾಹಿತಿ ಕಂಡುಬಂದಲ್ಲಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- Advertisement - 
Share This Article
error: Content is protected !!
";