ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಿಂತಿದ್ದ ಬೈಕ್ ಮೇಲೆ ಸಿಮೆಂಟ್ ಬಲ್ಕರ್ ಹರಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ಬಾಗೇಪಲ್ಲಿ ತಾಲೂಕಿನ ನಲ್ಲಾರೆಡ್ಡಿಪಲ್ಲಿ ಗ್ರಾಮದ ಬಾಬು (35) ಎಂದು ಗುರುತಿಸಲಾಗಿದೆ.
ತಪಸಿಹಳ್ಳಿಯ ಕಂಬಿ ನಾಗರಾಜು ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅಜೀಜ್ ತೀವ್ರವಾಗಿ ಗಾಯಗೊಂಡವರು.
ತಾಲೂಕಿನ ಗೊಲ್ಲಹಳ್ಳಿ ಬಳಿ ಇಂದು ಬೆಳಗ್ಗೆ ಐದು ಗಂಟೆ ಸುಮಾರಿನಲ್ಲಿ ಟೀ ಕುಡಿಯಲು ನಿಂತಿದ್ದಾಗ ಗೌರಿಬಿದನೂರು ಕಡೆಯಿಂದ ಅತಿ ವೇಗವಾಗಿ ಬಂದ ಸಿಮೆಂಟ್ ಬಲ್ಕರ್ ಲಾರಿ ಏಕಾಏಕಿ ನಿಂತಿದ್ದ ಬೈಕ್ ಮೇಲೆ ಹರಿದಿದೆ.
ಬೈಕ್ ಬಳಿಯಲ್ಲಿದ್ದ ಬಾಬು ಸ್ಥಳದಲ್ಲೇ ಮೃತಪಟ್ಟಿದ್ದು, ಬಲ್ಕರ್‌ಚಾಲಕ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.