ದಲಿತರಿಗೆ ಕ್ಷೌರ ಮಾಡದ ವ್ಯಕ್ತಿಗೆ ವ್ಯಾಪಕ ಖಂಡನೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆ  ಚಳ್ಳಕೆರೆ ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮದಲ್ಲಿ ಮಾದಿಗ ಸಮುದಾಯದವರಿಗೆ ಹೇರ್(ಕ್ಷೌರ) ಕಟಿಂಗ್ ಮಾಡಲು ಅಲ್ಲಿನ ಗ್ರಾಮದವರು ನಿರಾಕರಣೆ ಮಾಡುತ್ತಿದ್ದು ಈ ವಿಚಾರವಾಗಿ ಪ್ರಶ್ನೆ ಮಾಡಿದ ಮಾದಿಗ ಸಮುದಾಯದ ಯುವಕನಿಗೆ ಗ್ರಾಮದ ಕೆಲವು ಜನ ಪ್ರಾಣ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ ಎಂದು ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

 ಮಾದಿಗ ಸಮುದಾಯದ ಯುವಕರ ಜೊತೆ ಮಾತನಾಡಿರುವ ಮೊಬೈಲ್  ಆಡಿಯೋದಲ್ಲಿ ಗ್ರಾಮ ಪಂಚಾಯಿತಿಯ ನೀರುಗಂಟಿ ಒಬ್ಬ ಬೆದರಿಕೆ ಹಾಕುತ್ತಿರುವುದು ಸೇರಿದಂತೆ ನಾಲ್ಕೈದು ಜನ ಗ್ರಾಮದಲ್ಲಿ ನಡೆಯುವ  ಪಂಚಾಯಿತಿಗೆ ಮಾದಿಗರು ಬಾರದೇ ಹೋದರೆ ತಕ್ಕಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿರುತ್ತಾರೆ.

ಆ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಜೀವಂತವಾಗಿದ್ದು ಸಂಬಂಧಪಟ್ಟ ತಾವುಗಳು ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ಹಾಗೂ ಮಾಡಲು ಕುಮ್ಮಕ್ಕು ನೀಡುವ ಮತ್ತು ಮಾದಿಗ ಸಮುದಾಯದವರಿಗೆ ಪ್ರಾಣ ಬೆದರಿಕೆ ಹಾಕಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು  ದಲಿತಪರ ಸಂಘಟನೆ ಒಕ್ಕೂಟದಿಂದ ಹಿರಿಯೂರು  ತಹಶೀಲ್ದಾರ್ ರವರಿಗೆ ಮನವಿ ಪತ್ರ ನೀಡಲಾಯಿತು.

ದಲಿತ ಮುಖಂಡರಾದ ಜೀವೇಶ್ ಬೋರನಕುಂಟೆ, ಕೆ.ಪಿ.ಶ್ರೀನಿವಾಸ್, ಮಂಜುನಾಥ್ ಹೆಗ್ಗೆರೆ, ರಘುನಾಥ್ ಕೆ.ಆರ್.ಹಳ್ಳಿ, ಮಾರುತೇಶ್ ಕೂನಿಕೆರೆ, ಓಂಕಾರ್ ಮಸ್ಕಲ್ ಮಟ್ಟಿ, ಶಿವು ಖಂಡೇನಹಳ್ಳಿ, ಕರಿಯಪ್ಪ ಬೋರನಕುಂಟೆ, ಘಾಟ್ ರವಿ, ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಘವೇಂದ್ರ,ತಿಪ್ಪೇಸ್ವಾಮಿ ಫಿಟ್ಲಾಲಿ, ಲಕ್ಷ್ಮಣ್ ರಾವ್ಬೆಳ್ಳಿಯಪ್ಪ, ರಂಗಸ್ವಾಮಿ ಸೋಮೆರಹಳ್ಳಿ, ಲಿಂಗರಾಜ್ ಸೂರಗೊಂಡಹಳ್ಳಿ ಸೇರಿದಂತೆ ಮತ್ತಿತರರು ಮನವಿ ಸಲ್ಲಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";