ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿ ವಶ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲ್ಲೂಕು ಅಬಕಾರಿ ಉಪನಿರೀಕ್ಷಕರು ಹಾಗೂ ನಿರೀಕ್ಷಕರು ಭಾನುವಾರ ಮಧ್ಯಾಹ್ನ ಎಂದಿನಂತೆ ಬಳ್ಳಾರಿ ರಸ್ತೆಯ ನಾಯಕನಹಟ್ಟಿ ಕ್ರಾಸ್‌ಬಳಿ ವಾಹನ ತಪಾಸಣೆ ನಡೆಸವ ಸಂದರ್ಭದಲ್ಲಿ ದೇವರಹಟ್ಟಿಯ ಚನ್ನಯ್ಯ(೬೦) ಎಂಬ ವ್ಯಕ್ತಿ ತನ್ನ

- Advertisement - 

ಟಿವಿಎಸ್ ವಾಹನದಲ್ಲಿ ಅಬಕಾರಿ ನಿಯಮ ಉಲ್ಲಂಘಿಸಿ ಸುಮಾರು ೩೬೦೦ ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು, ವಾಹನ ಸಮೇತ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

- Advertisement - 

ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕ ಸಿ.ನಾಗರಾಜು, ಟಿ.ರಂಗಸ್ವಾಮಿ, ಎನ್.ನಾಗರಾಜು, ಸಿಬ್ಬಂದಿ ಟಿ.ಸೋಮಶೇಖರ್, ದರ್ಶನ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು.

 

- Advertisement - 

Share This Article
error: Content is protected !!
";