ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಚಿತ್ರದುರ್ಗದ ವಿಜ್ಞಾನಿಗೆ ಸ್ಥಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದ ಶಿವಾನಂದಪ್ಪ ಕೆ ಸಿ ಇವರ ಪುತ್ರ ಡಾ. ಗಣೇಶ್ ಕುಮಾರ್ ಕೆ ಇವರು ಗಣಿತಶಾಸ್ತ್ರ ವಿಭಾಗದಲ್ಲಿ ಸತತ ಐದು ಬಾರಿಗೆ (೨೦೨೦
, ೨೦೨೧, ೨೦೨೨, ೨೦೨೩ & ೨೦೨೪) ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವ ವಿದ್ಯಾಲಯ ಹೊರ ತಂದಿರುವ ವಿಶ್ವದ ಟಾಪ್ ಶೇ.2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ೩೩೬೬೦ನೇ ಸ್ಥಾನ ಪಡೆದಿರುವುದರ ಜೊತೆಗೆ ಜೀವಮಾನದ ಶ್ರೇಷ್ಠ ಸಾಧನೆಯ ಪಟ್ಟಿಯಲ್ಲಿಯೂ ಸಹ ಡಾ. ಗಣೇಶ್ ಕುಮಾರ್ ಆಯ್ಕೆಯಾಗಿರುತ್ತಾರೆ.

ಡಾ. ಗಣೇಶ್ ಕುಮಾರ್ ಅವರು ಎಸ್.ಜೆ.ಎಂ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಲೋಕೇಶ್ ಹೆಚ್ ಜೆ ಇವರ ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿಯೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ಶ್ರೀಯುತರ ಸಾಧನೆ ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆಯೆಂದು  ಡಾ.ಲೋಕೇಶ್ ಹೆಚ್ ಜೆ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.  

 

 

- Advertisement -  - Advertisement - 
Share This Article
error: Content is protected !!
";