ದೇವೇಗೌಡರು ಪ್ರಧಾನಿಯಾದ ಮೇಲೆ ಪಂಚತಾರಾ ಹೋಟೇಲ್‌ಗಳಲ್ಲೂ ರಾಗಿ ಮುದ್ದೆ ಸಿಗುವಂತಾಯ್ತು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನ ಪರಿಷತ್‌ನಲ್ಲಿ ಕೃಷಿ ವಿಶ್ವವಿದ್ಯಾಲಯಗಳ ವಿಧೇಯಕ-2025ರ ಕುರಿತ ಚರ್ಚೆಯಲ್ಲಿ, ವಿಧಾನ ಪರಿಷತ್‌ಸದಸ್ಯರಾದ ಎಸ್.ಎಲ್ ಭೋಜೇಗೌಡ ಅವರು ಮಾತನಾಡಿದರು.  

- Advertisement - 

ಪೌಷ್ಠಿಕಾಂಶಯುಕ್ತ ಆಹಾರ ಧಾನ್ಯವಾದ ರಾಗಿಯ ಮಹತ್ವವನ್ನು ಸದನದಲ್ಲಿ ವಿವರಿಸಿದ ಅವರು, ಹೆಚ್‌.ಡಿ. ದೇವೇಗೌಡರು ಪ್ರಧಾನಿಯಾದ ಮೇಲೆ ಪಂಚತಾರಾ ಹೋಟೇಲ್‌ಗಳಲ್ಲೂ ರಾಗಿ ಮುದ್ದೆ ಸಿಗುವಂತಾಯ್ತು ಎಂದು ನೆನೆದರು.

- Advertisement - 

 ಮಂಡ್ಯದಲ್ಲಿ ನೂತನ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು. ಯುವಕರು ಕೃಷಿಯತ್ತ ಮುಖಮಾಡಬೇಕು, ಕೃಷಿ ಕ್ಷೇತ್ರ ಪ್ರಗತಿ ಸಾಧಿಸಲು ಮತ್ತು ಲಾಭದಾಯಕ ಕ್ಷೇತ್ರವಾಗಲು, ಆಹಾರ ಧಾನ್ಯಗಳ ಗುಣಮಟ್ಟ ಸುಧಾರಿಸಲು ಕೃಷಿ ವಿವಿಗಳು ಬೇಕು ಎಂದು ಭೋಜೇಗೌಡ ಒತ್ತಾಯಿಸಿದರು.

 

- Advertisement - 

 

 

Share This Article
error: Content is protected !!
";