ದಲಿತ ವಿರೋಧಿ ಶಾಸಕ ಮುನಿರತ್ನ ಅವರನ್ನು ಕೂಡಲೇ ಬಂಧಿಸಿ- ಗೋವಿಂದರಾಜು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ದಲಿತ ನಿಂದನೆ ಮಾಡಲಾಗಿದ್ದು ಅವರು ಈ ಕೂಡಲೇ ದಲಿತರ ಕ್ಷಮೆ ಯಾಚಿಸಬೇಕು, ಅಲ್ಲದೆ ದಲಿತ ವಿರೋಧಿಯಾಗಿರುವ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಂಗೇನಹಳ್ಳಿ ಗೋವಿಂದರಾಜು ಆಗ್ರಹಿಸಿದ್ದಾರೆ.

- Advertisement - 

ಪತ್ರಿಕಾ ಹೇಳಿಕೆ ನೀಡಿರುವ ಅವರು ದಲಿತರು ಬರೆದ ಸಂವಿಧಾನದ ಶಕ್ತಿಯಿಂದಲೆ ಮುನಿರತ್ನರವರು ಶಾಸಕರಾಗಿದ್ದು ದಲಿತ ಸಮುದಾಯದ ಹೊಲೆಯ ಎಂಬ ಪದ ಬಳಕೆ ಮಾಡಿ ಜನಾಂಗಕ್ಕೆ ನೋವುಂಟು ಮಾಡಿದ್ದಾರೆ.

- Advertisement - 

ದಲಿತ ವರ್ಗದ ಆತ್ಮ ಗೌರವಕ್ಕೆ ಧಕ್ಕೆಯುoಟಾಗುವಂತಹ ಮಾತುಗಳನ್ನಾಡಿರುವ ಶಾಸಕ ಮುನಿರತ್ನರವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜೊತೆಗೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 

- Advertisement - 

 

Share This Article
error: Content is protected !!
";